ತುಮಕೂರು
ಜೆಡಿಎಸ್ ಮುಖಂಡ ಅಟಿಕಾ ಬಾಬು ಅವರ ಕಾರಿಗೆ ಮುತ್ತಿಗೆ ಹಾಕಿದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಬೆಂಬಲಿಗರು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರು ನಗರದ ಟೌನ್ ಹಾಲ್ ನಲ್ಲಿ ನಡೆದಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ನಗರದಲ್ಲಿ ದಿನದಿನ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ತುಮಕೂರು ನಗರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಜೆಡಿಎಸ್ ಪಕ್ಷದ ಮುಖಂಡ ಆಟಿಕ ಬಾಬು ರವರು ಸ್ಥಳೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ .
ಶುಕ್ರವಾರ ರಾತ್ರಿ ಜೆಡಿಎಸ್ ಮುಖಂಡ ಗೋವಿಂದರಾಜು ರವರ ಬೆಂಬಲಿಗರು ಉದ್ಯಮಿ, ಜೆಡಿಎಸ್ ಮುಖಂಡ ಅಟಿಕಾ ಬಾಬು ಅವರ ಕಾರಿಗೆ ಮುತ್ತಿಗೆ ಹಾಕಿದಾಗ, ಚಿಕ್ಕಪೇಟೆಯ ಸುಹೇಲ್ ಪಾಷ ಎಂಬುವರು ಹೀಗೆ ಮಾಡಬೇಡಿ, ಇಲ್ಲಿಂದ ಹೋಗಿ, ಟ್ರಾಫಿಕ್ ನಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ 8 ರಿಂದ 10 ಜನ ಗೋವಿಂದರಾಜು ಕಡೆಯ ಕಿಡಿಗೇಡಿಗಳು ಹತ್ಯೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಸುಹೇಲ್ ದೂರು ನೀಡಿದ್ದಾರೆ.
ಗೋವಿಂದರಾಜು (ಗೆಳೆಯರ ಬಳಗ) ಕಡೆಯವರಾದ ಇಮ್ರಾನ್, ಸಿದ್ದಿಕ್ ಅವರ ಸಹಚರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ಕಾಲುಗಳಿಂದ ನನಗೆ ಗುದ್ದಿ, ನನ್ನ ಮೇಲೆ ಹಲ್ಲೆಮಾಡಿ ನೀನು ಅವರಿಗೆ ಸಪೆÇೀರ್ಟ್ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಮುಖಕ್ಕೆ, ಕೈಕಾಲುಗಳಿಗೆ ಹೊಡೆದಿದ್ದಾರೆ.
ಇನ್ನು ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಟೌನ್ ಹಾಲ್ ನಲ್ಲಿರುವ ಜಲ್ಕ ಮಖಾನ್ ದರ್ಗಾ ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೊರಬಂದ ಬೊಮ್ಮನಹಳ್ಳಿ ಬಾಬು ರವರನ್ನ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ಹಿಂಬಾಲಕರು ಹಾಗೂ ಕಾರ್ಯಕರ್ತರು ಗೋವಿಂದರಾಜು ರವರು ತಮ್ಮ ಬಳಿ ಹಣ ಪಡೆದಿರುವ ವಿಡಿಯೋ ತೋರಿಸಿ ಎಂದು ಪಟ್ಟು ಹಿಡಿದು ಕಾರಿಗೆ ಮುತ್ತಿಗೆ ಹಾಕಿ ದಿಕ್ಕಾರ ಕೂಗಿ ಹಲ್ಲೆಗೆ ಯತ್ನಿಸಿದ್ದು ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ವ್ಯಕ್ತಿಗಳು ಅಟಿಕ ಬಾಬು ರವರ ರಕ್ಷಣೆಗೆ ಮುಂದಾದಾಗ ಸುಹೈಲ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದು ಸಹ ನಡೆದಿದೆ.
ಗೋವಿಂದರಾಜು (ಗೆಳೆಯರ ಬಳಗ) ಕಡೆಯವರಾದ ಇಮ್ರಾನ್, ಸಿದ್ದಿಕ್ ಮತ್ತು ಸಹಚರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೀಡಿದ ದೂರಿನ ಮೇರೆಗೆ ತುಮಕೂರು ನಗರ ಠಾಣೆ ಪೆÇಲೀಸರು ಮೊ.ನಂ 275/2022 ಕಲಂ: 143, 504, 323, 506,355 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.