ತುಮಕೂರು
ರಾಜ್ಯಾಂದ್ಯಂತ ಇಂದು ಡಾ|| ಬಿ.ಆರ್ ಅಮಬೇಡ್ಕರ್ 1927 ಡಿಸೆಂಬರ್ 25 ರಂದು ಮನಸ್ಮøತಿಯನ್ನು ಸುಟ್ಟ 95 ವರ್ಷಗಳ ನೆನಪಿಗಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮøತಿಗೆ ಕೊಳ್ಳಿ ಇಡೋಣ ಕಾರ್ಯಕ್ರಮದ ಭಾಗವಾಗಿ ಇಂದು ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡ ದಲಿತ ಸಂಘಟನೆಗಳು ಮನಸ್ಮøತಿ ಪ್ರತಿಯನ್ನು ಸುಟ್ಟು ದೇಶದ ಅಲಿಖಿತ ಸಂವಿಧಾನವನ್ನು ಬಹಿಷ್ಕರಿಸುವಂತೆ ಕರೆ ನೀಡಲಾಯಿತು. ಚಾಲನಾ ಸಮಿತಿಯ ಪರವಾಗಿ ಮಾತನಾಡಿದ ಕೆ.ದೊರೈರಾಜ್ ಇಂದು ದೇಶದಲ್ಲಿ ಜಾರಿಯಲ್ಲಿರುವ ಅಲಿಖಿತ ಸಂವಿಧಾನ ಜಾತಿ ವ್ಯವಸ್ಥೆಯನ್ನು ಮಹಿಳಾ ಶೋಷಣೆಯನ್ನು ಶ್ರೇಣೀಕರಣವನ್ನು ಪ್ರತಿಪಾಧಿಸುತ್ತಿದೆ, ಇದಕ್ಕೆ ವಿರುದ್ದವಾಗಿ ಭಾರತ ಸಂವಿಧಾನ ಸಮಾನತೆ ಬ್ರಾತೃತ್ವ ಪ್ರತಿಪಾಧಿಸುತ್ತದೆ, ಆದರೆ ಇಂದು ಆಡಳಿತದಲ್ಲಿರುವ ಸರ್ಕಾರಗಳು ಬಡತನ, ಮೌಢ್ಯ, ಅನಕ್ಷರತೆ, ಅಸ್ಪøಶ್ಯತೆ ಅತ್ಯಾಚಾರ, ಕೊಲೆ ಸುಲಿಗೆಗಳಿಂದ
ಜಾರಿಯಲ್ಲಿರುವ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ಆದ್ದರಿಂದ ಮಾನವ ವಿರೋಧಿ ಮನುಸ್ಮøತಿಯನ್ನು ದಿಕ್ಕರಿಸಿ ಸಂವಿಧಾನವನ್ನು ಎದೆಗಪ್ಪಿಕೊಳ್ಳುವುದು ಇಂದು ಮುಖ್ಯವಾಗಿದೆ. ನಾವು ಸುಡುತ್ತಿರುವುದು ಮನುಷ್ಯ ವಿರೋಧಿ ಮೇಲು ಕೀಳು ಲಿಂಗ ತಾರತಮ್ಯ ಅಸಮಾನತೆಯ ಮನುಸ್ಮøತಿಯನ್ನು ಇದರಲ್ಲಿ ಯಾವುದೇ ರೀತಿಯ ಬ್ರಾಹ್ಮಣಶಾಹಿ ಹಾಗೂ ಬಂಡವಾಶಾಹಿಗಳ ಪಟ್ಟಬದ್ರ ಹಿತಾಸಕ್ತಿಗಳಿಗೆ ಪ್ರತಿರೋಧ ಕೊಡುವುದಕ್ಕಲ್ಲ. ಜಗತ್ತಿನ ನಿಸರ್ಗದ ವೈವಿದ್ಯತೆಯಂತೆ ಸೈದ್ಧಾಂತಿಕ ಬಿನ್ನಾಭಿಪ್ರಾಯಗಳು ಮತ್ತು ನೆಲೆಗಟ್ಟಿನ ಮೇಲೆ ಡಿಸೆಂಬರ್ 25. 1927 ರಂದು ಅಂಬೇಡ್ಕರ್ ರವರು ಮಹಾಡ್‍ನಲ್ಲಿ ಮನುಸ್ಮøತಿಯನ್ನು ಬಹಿರಂಗವಾಗಿ ಸುಡುವ ಮೂಲಕ ಸಮಾನತೆಯ ಮಹಾಸಮರಕ್ಕೆ ಸ್ವತಹಾ ನಾಯಕತ್ವ ನೀಡಿ ಭವಿಷ್ಯದಲ್ಲಿ ಅಸ್ಪøಶ್ಯತೆ ಹಿಂದುಳಿದ ಸಮುದಾಯಗಳು ತುಳಿಯಬೇಕಾದ ದಾರಿ ತಮ್ಮ ದೃಢ ಹೆಜ್ಜೆಯಿಟ್ಟು ಸಮಾಜಿಕ ಬದಲಾವಣೆಯ ಕಂಪನವನ್ನು ಈ ಐತಿಹಾಸಿಕ ದಿನ ಸೃಷ್ಟಿಸಿದೆ ಎಂದರು.
ದಸಂಸದ ಹಿರಿಯ ಮುಖಂಡರಾದ ನರಸಿಂಹಯ್ಯ ಮಾತನಾಡಿ ದೇಶದಲ್ಲಿ 8 ವರ್ಷಗಳಿಂದ ಬಿಜೆಪಿ ಪಕ್ಷ ಮನುವಾದವನ್ನು ಚಾಚು ತಪ್ಪದೇ ಅನುಷ್ಠಾನಗೊಳಿಸುತ್ತಿದ್ದು 1950 ರಲ್ಲಿ ಜಾರಿಯಾದ ಸಂವಿಧಾನದ ಆಶಯವನ್ನು ಬುಡಮೇಲು ಮಾಡಲು ಮನುಸ್ಮøತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಸ್ವಾತಂತ್ರ್ಯ ಚಳುವಳಿ ಯಶಸ್ಸಿನ ಆಳದಲ್ಲಿ ಸಾಮಾಜಿಕ ಸಮಾನತೆಯ ಆಶಯಗಳನ್ನು ಅಂಬೇಡ್ಕರ್ ಪ್ರತಿಪಾಧಿಸಿದರು. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಸಂವಿಧಾನ ಜಾರಿಯಾಗದೇ ಮನು ಸಂವಿಧಾನ ಆಡಳಿತದಲ್ಲಿರುವುದು ಭಾರತದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗಿರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಸ್ಲಂ ಜನಾಂದೋಲನ ಕರ್ನಾಟದ ಎ.ನರಸಿಂಹಮೂರ್ತಿ ದಸಂಸದ ಹಿರಿಯರಾದ ಜೈಮೂರ್ತಿ, ಚಂದ್ರಯ್ಯ, ರಾಜಣ್ಣ, ಪಿಎನ್ ರಾಮಯ್ಯ, ದಸಂಸ ಜಿಲ್ಲಾ ಸಂಚಾಲಕರಾದ ಕೊರಟಗೆರೆ ರಾಮಾಂಜಿನಯ್ಯ, ತುರುವೆಕರೆ ಸಂಚಾಲಕರಾದ ಹೆಚ್‍ಕೆ ಜಗದೀಶ್, ಮಧುಗಿರಿ ಸಂಚಾಲಕರಾದ ರಂಗನಾಥ್,ಪೋಸ್ಟ್ ಮರಿಯಪ್ಪ, ತುಮಕೂರು ಗ್ರಾಮಾಂತರದ ಶಿವರಾಜು,ಅಂಜಿನ್‍ಮೂರ್ತಿ, ಕೋರಾ ರಾಜಣ್ಣ, ಮಧಕರಿ ಸಂಘದ ರಂಗನಾಥ್, ಟಿ.ಸಿ ರಾಮಯ್ಯ, ತುಮಕೂರು ಕೊಳಗೇರಿ ಸಮಿತಿಯ ದೊಡ್ಡರಂಗಯ್ಯ, ಅರುಣ್,ತಿರುಮಲಯ್ಯ,ತೇಜಸ್‍ಕುಮಾರ್, ಪುಟ್ಟಾಂಜನೇಯ್ಯ, ಧನಂಜಯ್ ಹಾಗೂ ಮಾರುತಿ,ಅಮರ್ ಮುಂತಾದವರು ಪಾಲ್ಗೊಂಡಿದ್ದರು.