ತುಮಕೂರು
ಇತ್ತೀಚೆಗೆ ತುಮಕೂರು ನಗರ ಜೆಡಿಎಸ್ ಹಾಟ್ ಹಾಟ್ ಸುದ್ದಿಗಳಿಗೆ ಹೆಸರುವಾಸಿಯಾಗಿದೆ, ಇದಕ್ಕೆ ಕಾರಣ ಬಹುಕೋಟಿಗಳ ಸರದಾರ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ರವರು ತಾವು ತುಮಕೂರಿನ ಜೆಡಿಎಸ್ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಹೇಳಿಕೆಗಳನ್ನು ನೀಡಿರುವುದೇ ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣವೆನ್ನಬಹುದು.
ಹೌದು!!! ಕಳೆದ ಒಂದು ತಿಂಗಳಿಂದ ತುಮಕೂರು ನಗರ ಜೆಡಿಎಸ್‍ನಲ್ಲಿ ಗೊಂದಲ ಸೃಷ್ಠಿಯಾಗಿದ್ದು ಇದಕ್ಕೆ ತಾರ್ಕಿಕ ಅಂತ್ಯ ಕಾಣಬೇಕಿದೆ, ಏಕೆಂದರೆ ಕಳೆದ 15 ದಿನಗಳ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಿಂದ ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕ ಸ್ಥಾನದ ಪಟ್ಟಿಯೂ ಸಹ ರಿಲೀಸ್ ಆಗಿತ್ತು, ಅದರಕ್ಕ ತುಮಕೂರು ನಗರ ಕ್ಷೇತ್ರದಿಂದ ಎನ್.ಗೋವಿಂದರಾಜುರವರ ಹೆಸರು ಸಹ ಪ್ರಸ್ತಾಪವಾಗಿತ್ತು, ಇದರ ಬೆನ್ನಲ್ಲೇ ಅಟ್ಟಿಕಾ ಬಾಬು ಸಹ ತುಮಕೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪ್ರಸ್ ಮೀಟ್ ಮಾಡಿ ತಾವು ಸಹ ತುಮಕೂರು ನಗರ ಕ್ಷೇತ್ರದಿಂದ ಶಾಸಕ ಅಭ್ಯರ್ಥಿ ಎಂದು ಹೇಳಿಕೆಯನ್ನು ನೀಡಿದರು.
ಈ ಹೇಳಿಕೆಯೊಂದಿಗೆ ಒಂದು ಸ್ಫೋಟಕ ಮಾಹಿತಿಯನ್ನೂ ಸಹ ಹೊರ ಹಾಕಿದರು, ಏನಪ್ಪಾ ಎಂದರೆ ತುಮಕೂರು ನಗರದಲ್ಲಿ ನಡೆದ ಪಂಚರತ್ನ ಯಾತ್ರೆಯ ಸಂಪೂರ್ಣ ವ್ಯವಸ್ಥೆಗೆ ತಾನೇ ಬಂಡವಾಳ ಹಾಕಿರುವುದಾಗಿ ಇದು ಸಾಲದೆಂಬಂತೆ ಗೋವಿಂದರಾಜು ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು 4 ಕೋಟಿ ಮೊತ್ತವನ್ನು ತನ್ನ ಮಗ ಹಾಗೂ ಪತ್ನಿಯ ಮೂಲಕ ಪಡೆದಿದ್ದಾರೆಂಬ ಗಂಭೀರ ಆರೋಪವೂ ಸಹ ಮಾಡಿದರು.
ಇದರ ಬೆನ್ನಲ್ಲೇ ತುಮಕೂರು ನಗರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಬೆಳ್ಳಿ ಲೋಕೇಶ್ ರವರು ಸಹ ತಮ್ಮ ವಾಟ್ಸಪ್ ರಾಜ್ಯ ಜೆಡಿಎಸ್ ಮೀಡಿಯಾ ಗ್ರೂಪ್ ಗೆ ಒಂದು ಆಡಿಯೋ ಸಂಭಾಷಣೆಯನ್ನೂ ಸಹ ಮಾಡುತ್ತಾರೆ, ಏನಪ್ಪಾ ಅಂದರೆ ಗೋವಿಂದರಾಜುರವರು ತುಮಕೂರು ನಗರದಲ್ಲಿ ನಡೆಯುವ ಜೆಡಿಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ ಕುಮಾರಣ್ಣ ದೇವೇಗೌಡರು ಬಂದಂತಹ ಸಂದರ್ಭದಲ್ಲಿ ಅದು ಬಿಟ್ಟರೇ ಅತೀ ಮುಖ್ಯವಾದ ಕಾರ್ಯಕ್ರಮಗಳಲ್ಲಿ ಬಿಟ್ಟರೇ ಪಕ್ಷದ ಸಂಘಟನೆಯಲ್ಲಿ ತೊಡಗಿರದ ವ್ಯಕ್ತಿ ಎಂಬುದಾಗಿ.
ಅಷ್ಟೇ ಅಲ್ಲದೇ ಗೋವಿಂದರಾಜುರವರು ತಮ್ಮ ಸ್ಥಾನವನ್ನು ಮಾರಿಕೊಂಡಿದ್ದರೇ, ನೈತಿಕ ಹೊಣೆಯನ್ನು ಹೊತ್ತು ಚುನಾವಣೆಯಿಂದ ದೂರ ಉಳಿಯಬೇಕೆಂದು ಹೇಳಿದಲ್ಲದೇ, ತಾನು ಏನಾದರೂ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿದ್ದರೆ ಕೂಡಲೇ ತನ್ನನ್ನು ಪಕ್ಷದಿಂದ ಉಚ್ಛಾಟನೆಯನ್ನೂ ಮಾಡಲಿ ಎಂದೂ ಸಹ ಆಡಿಯೋ ಸಂಭಾಷಣೆಯಲ್ಲಿದೆ.
ಇಷ್ಟೂ ಸಾಲದೆಂಬಂತೆ ತಾವೂ ಸಹ ತುಮಕೂರು ನಗರ ಜೆಡಿಎಸ್ ಪಕ್ಷದ ಶಾಸಕ ಸ್ಥಾನದ ಆಕಾಂಕ್ಷಿಯೂ ಹೌದು ಎಂಬುದನ್ನೂ ಸಹ ತಮ್ಮ ಆಡಿಯೋ ರೆಕಾರ್ಡಿಂಗ್‍ನಲ್ಲಿದೆ, ಅದೂ ಅಲ್ಲದೇ ಗೋವಿಂದರಾಜು ಅವರು ಪಕ್ಷದ ಹಿರಿಯ ಮುಖಂಡರನ್ನು, ನೈಜ ಕಾರ್ಯಕರ್ತರನ್ನು ಪರಿಗಣಿಸದೇ ತಾವೊಬ್ಬರೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆಂಬುದಾಗಿಯೂ ಸಹ ಹೇಳಿಕೊಂಡಿದ್ದಾರೆ.
ಇವೆಲ್ಲದರ ಮಧ್ಯೆ ತುಮಕೂರು ನಗರದಲ್ಲಿ ಅಟ್ಟಿಕಾ ಬಾಬು ಸಹ ಕೆಲ ಕಾಂಗ್ರೆಸ್ ಮುಖಂಡರನ್ನು, ಬಹುತೇಕ ಜೆಡಿಎಸ್ ನ ಹಿರಿಯ ನಾಯಕರುಗಳು, ಕಾರ್ಯಕರ್ತರನ್ನು ಮಾತನಾಡಿಸುವಲ್ಲಿ ಯಶಸ್ವಿಯಾಗುತ್ತಿದ್ದರೇ, ಅದೂ ಅಲ್ಲದೇ ವಾರಕ್ಕೆ ಮೂರು ನಾಲ್ಕು ದಿನ ನಗರದಲ್ಲಿಯೇ ಉಳಿದುಕೊಂಡು ಇಲ್ಲಿನ ಮಾಹಿತಿ, ಕಾರ್ಯಕರ್ತರನ್ನು ಮಾತನಾಡಿಸುವುದು, ಪಕ್ಷವನ್ನು ಅತ್ಯಂತ ವೇಗವಾಗಿ ಸಂಘಟಿಸುತ್ತಿರುವುದನ್ನು ಗಮನಿಸಿದ ಎನ್.ಗೋವಿಂದರಾಜು ರವರು ತಮ್ಮ ಬೆಂಬಲಿಗರ ಸಹಾಯದಿಂದ ಕಳೆದ ಶುಕ್ರವಾರ ರಾತ್ರಿ ಬಿಜಿಎಸ್ (ಟೌನ್ ಹಾಲ್) ವೃತ್ತದಲ್ಲಿ ಅಟ್ಟಿಕಾ ಬಾಬು ಕಾರ್ ಗೆ ಮುತ್ತಿಗೆ ಹಾಕಿ, ಗೋವಿಂದರಾಜು ಅವರು ತಮ್ಮ ಬಳಿ ಹಣ ಪಡೆದಿದ್ದರೇ ದಾಖಲೆ ತೋರಿಸಿ ಇಲ್ಲವಾದಲ್ಲಿ ತಮ್ಮ ಕಾರ್‍ನ್ನು ಬಿಡುವುದಿಲ್ಲವೆಂಬುದಾಗಿ ಗೇರಾವ್ ಸಹ ಹಾಕಿದ್ದರು.
ಇನ್ನುಳಿದಂತೆ ಗೋವಿಂದರಾಜು ಸಹ ನಗರದ ಮತದಾರರನ್ನು ಮನವೊಲಿಸುವ ಕೆಲಸವನ್ನೂ ಸಹ ಮಾಡುತ್ತಿದ್ದಾರೆ ಇದಕ್ಕೆ ಪುಷ್ಠಿ ನೀಡುವಂತೆ ಮತದಾರರಿಗೆ ಆಕರ್ಷಕ ದಿನದರ್ಶಿಕೆಯೊಂದಿಗೆ ದೇವರ ಫೆÇೀಟೋ ಮತ್ತು ಗಿಫ್ಟ್ಗಳನ್ನು ನೀಡುತ್ತಾ, ಆಣೆ ಪ್ರಮಾಣ ಮಾಡಿಸಿಕೊಳ್ಳುವುದು, ಇನ್ನೂ ಕೆಲವರನ್ನು ತುಮಕೂರಿನ ಸ್ಥಳೀಯ ಐತಿಹಾಸಿಕ ಮತ್ತು ಪ್ರಖ್ಯಾತ ತೀರ್ಥ ಕ್ಷೇತ್ರಗಳ ದರ್ಶನ ಮತ್ತು ಅಲ್ಲಿಯೂ ಸಹ ಆಣೆ ಪ್ರಮಾಣಗಳನ್ನು ಮಾಡಿಸುವತ್ತಾ ದೇವರ ಮೊರೆ ಹೋಗಿದ್ದಾರೆ.
ಇಷ್ಟೇಲ್ಲಾ ನಡೆಯುತ್ತಿದ್ದರೂ ಸಹ ಗೋವಿಂದರಾಜು ಅವರು ಮುಂದೆ ಬಂದು ಸತ್ಯಾಸತ್ಯೆಯನ್ನು ಜನರ ಮುಂದಿಟ್ಟು, ತಾನು ನಿಷ್ಕಂಳಕನೆಂದು ಪ್ರಾಮಾಣೀಕರಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರೆ, ಜನರಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಭುಗಿಲೆದ್ದಿರುವ ಅನುಮಾನಗಳಿಗೆ ತಾರ್ಕಿಕ ಅಂತ್ಯ ಕಾಣಿಸಬಹುದಾಗಿರುತ್ತದೆ.
ಈ ಸಂದರ್ಭದಲ್ಲಿ ಪೆÇಲೀಸ್ ಮತ್ತು ತಮ್ಮ ಬೆಂಬಲಿಗರ ಸಹಾಯದೊಂದಿಗೆ ಅಲ್ಲಿಂದ ಹೊರ ಬಂದು ಏನನ್ನೂ ಪ್ರತಿಕ್ರಿಯೆ ನೀಡದೇ ಅಲ್ಲಿಂದ ಹೊರಟು ಹೋದರು, ಆದರೆ ಖಾಸಗಿ ಸುದ್ದಿ ವಾಹಿನಿಯ ನೇರ ಸಂಭಾಷಣೆ ಕಾರ್ಯಕ್ರಮದಲ್ಲಿ ತನ್ನಿಂದ ಗೋವಿಂದರಾಜು ಅವರ ಪತ್ನಿ ಮತ್ತು ಮಗನ ಮೂಲಕ ಹಣ ಪಡೆದಿರುವುದಾಗಿಯೂ ಇದಕ್ಕೆ ಧರ್ಮಸ್ಥಳದ ಮಂಜುನಾಥನೇ ಸಾಕ್ಷಿ ಎಂಬುದಾಗಿಯೂ ಹೇಳಿದ್ದಾರೆ.