ಗುಬ್ಬಿ
ತಾಲೂಕಿನಲ್ಲಿ ಬಡ ರೈತನೋರ್ವ ಸಾಲಬಾಧೆ ತಾಳಲಾರದೆ ಹೇಮಾವತಿ ಚಾನೆಲ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಚೇಳೂರು ಹೋಬಳಿಯ ಪಂಚಾಕ್ಷರಯ್ಯ 35 ವರ್ಷ ಹಿತ ತುಮಕೂರಿನ ಇಕ್ವಿಟಾಸ್ ಕಂಪನಿಯಲ್ಲಿ ಸಾಲ ಪಡೆದಿದ್ದು ಈತ ಸಾಲವನ್ನು ತೀರಿಸಲಾಗದೆ ಚಾನಲ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದು ಸುಮಾರು ಒಂದು ಲಕ್ಷ ಸಾಲವನ್ನು ತೀರಿಸಿದ್ದು ಬಾಕಿ ಹಣವನ್ನು ಹಂತ ಹಂತವಾಗಿ ತೀರಿಸುತ್ತೇನೆ ಎಂದು ಫೈನಾನ್ಸ್ ಕಂಪನಿಯವರಿಗೆ ಮನವರಿಕೆ ಮಾಡಿಕೊಂಡರು ಸಹ ಬ್ಯಾಂಕ್ ಮ್ಯಾನೇಜರ್ ದೌರ್ಜನ್ಯದಿಂದ ಒಂದು ತಿಂಗಳ ಹಿಂದೆ ಈತನ ಮನೆಯನ್ನು ಸೀಸ್ ಮಾಡಿ ಒಬ್ಬ ರೈತನನ್ನು ಬೀದಿ ಪಾಲು ಮಾಡಿರುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ರೈತ ಸಂಘಟನೆಗಳು ಭಾರತೀಯ ಜನತಾ ಪಕ್ಷದ ಮುಖಂಡರುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸರಿಯಾದ ಪರಿಹಾರ ನೀಡಬೇಕು ಹಾಗೂ ಸ್ಥಳಕ್ಕೆ ಲೀಡ್ ಬ್ಯಾಂಕಿನ ವ್ಯವಸ್ಥಾಪಕರನ್ನು ಕರೆಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಒಬ್ಬ ರೈತನ ಸಾವಿಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ ರಾಜಕೀಯ ಮುಖಂಡರುಗಳು ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಪ್ರಧಾನ ಕಾರ್ಯದರ್ಶಿ ಲೋಕೇಶ್ ಭಾರತೀಯ ಜನತಾ ಪಕ್ಷದ ಮುಖಂಡ ಚಂದ್ರಶೇಖರ್ ಬಾಬು ದಿಲೀಪ್ ಕುಮಾರ್ ಯತೀಶ್ ಸಿದ್ದರಾಮಯ್ಯ ಹಾಗೂ ಮುಖಂಡರುಗಳು ಭಾಗವಹಿಸಿದ್ದರು. ಕೆಲಕಾಲ ಶವವನ್ನು ತಡೆದ ಕಾರಣ ಸಾರ್ವಜನಿಕರು ಹಾಗೂ ಪೆÇಲೀಸರ ನಡುವೆ ಘರ್ಷಣೆ ಸಂಭವಿಸಿದ್ದು ಸ್ವಲ್ಪ ಸಮಯದ ನಂತರ ತಿಳಿಯಾಯಿತು.