ತುರುವೇಕೆರೆ


ನಾವು ಪಿಂಚಣಿ ತೆಗೆದುಕೊಳ್ಳುತ್ತಿರುವುದು ಜನಸಾಮಾನ್ಯರ ತೆರಿಗೆ ಹಣದಿಂದ ಇದನ್ನು ನೆನಪಿನಲ್ಲಿಟ್ಟುಕೊಂಡು ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಜಿಲ್ಲಾ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಬಾ.ಹಾ. ರಮಾಕುಮಾರಿ ಅಭಿಪ್ರಾಯ ಪಟ್ಟರು.
ತಾಲ್ಲೂಕು ನಿವೃತ್ತ ನೌಕರರ ಸಂಘ ಪಟ್ಟಣದ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಮತ್ತು 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ನಾವೆಲ್ಲಾ ಸಂಭ್ರಮಿಸುವ ದಿನವಾಗಿದೆ ನಾವೆಲ್ಲ ನಮ್ಮ ಕಷ್ಟ ಸುಖಗಳನ್ನೆಲ್ಲ ಬದಿಗೊತ್ತಿ ಒಂದೆಡೆ ಸೇರಿದ್ದೇವೆ ಇಲ್ಲಿ ನಾವು ನೋವು ನಲಿವುಗಳನ್ನು ಹಂಚಿಕೊಳ್ಳೋಣ ಇಂತಹ ಕಾರ್ಯಕ್ರಮಗಳಲ್ಲಿ ಬಾಗವಹಿಸುವರ ಸಂಖ್ಯ್ ಕಡಿಮೆಯಾಗಿದೆ ನಿವೃತ್ತರಾದವರೆಲ್ಲ ಸಂಘಕ್ಕೆ ಸದಸ್ಯರಾಗಿಲ್ಲ ಕೂಡಲೇ ಸದಸ್ಯತ್ವವನ್ನು ಪಡೆದುಕೊಂಡು ನಿಮ್ಮ ಸಮಸ್ಯೆ ಗಳು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ನಿಮಗೆ ಅನುಕೂಲವಾಗುತ್ತದೆ ಪಿಂಚಣಿ ಗೋಸ್ಕರ ತೊಂದರೆಯಾದಾಗ ನ್ಯಾಯಾಲಯಕ್ಕೆ ಹೋಗಿ ಪರಿಹರಿಸಿಕೊಂಡಂತಹ ಉದಾಹರಣೆಗಳನ್ನು ಕಾಣಬಹುದಾಗಿದೆ.
ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶಿವಯ್ಯ ನವರು ಮಾತನಾಡಿ ನಮಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕಾಗಿದೆ ನಿವೃತ್ತರು ಇಂತಹ ಕಾರ್ಯಕ್ರಮಗಳಿಗೆ ಬರುವುದಕ್ಕೆ ಆಲಸ್ಯ ತೋರುತ್ತಿದ್ದಾರೆ ರಾಜ್ಯದಲ್ಲಿ ಸುಮಾರು 3ಲಕ್ಷ ಜನ ನಿವೃತ್ತರು ಇದ್ದಾರೆ ನಮ್ಮ ಶಕ್ತಿಯನ್ನು ನಾವು ಸರ್ಕಾರಕ್ಕೆ ತೋರಿಸ ಬೇಕಿದೆ ಎಲ್ಲರೂ ಕೈಜೋಡಿಸಿ ಹೋರಾಟ ಮಾಡೋಣ ಸರ್ಕಾರ ನಮ್ಮಗಳ ನಗದು ರಹಿತ 1500 ಚಿಕಿತ್ಸೆಗೆ ಅನುಮತಿ ನೀಡಿದೆ ಕಾಲಮಿತಿ ವೇತನ ಸರ್ಕಾರದ ಚರ್ಚೆಯಲ್ಲಿದೆ ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ನಾವು ಸರ್ಕಾರವನ್ನು ಅಭಿನಂದಿಸೋಣ ಎಂದು ಹೇಳಿ ಸಂಘದ ಸದಸ್ಯತ್ತ್ವವನ್ನು ಪಡೆದುಕೊಳ್ಳಿ ನಮಗೆ ಇದು ಸಹಕಾರಿಯಾಗಲಿದೆ ಎಂದರು.
ಸಂಘದ ಉಪಾಧ್ಯಕ್ಷರಾದ ರಾಮಯ್ಯನವರು 2021-22 ನೇ ಸಾಲಿನ ಲೆಕ್ಕಪತ್ರದ ವರದಿಯನ್ನು ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ 80 ವರ್ಷ ಮೇಲ್ಪಟ್ಟ ನಿವೃತ್ತ ಶ್ರೀನಿವಾಸಾಚಾರ್ ಮಾಯಸಂದ್ರ, ಕರಿಯಣ್ಣ ಟಿ.ಬಿ. ಕ್ರಾಸ್ , ಏನ್. ಲಿಂಗಯ್ಯ. ಶಿವಯ್ಯ, ಜಿ. ದಾಸಪ್ಪ, ಆರ್. ರಂಗಪ್ಪ ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಂ. ರಾಜು ಅಧ್ಯಕ್ಷರು ತಾಲ್ಲೂಕು ನೌಕರರ ಸಂಘ ತುರುವೇಕೆರೆ,ಪ್ರಹಲ್ಲಾದ್ ಸಂಘಟನಾ ಕಾರ್ಯದರ್ಶಿ, ಖಜಾಂಚಿ ಮಹಾಲಿಂಗಪ್ಪ, ಪ್ರದಾನ ಕಾರ್ಯದರ್ಶಿ ಕೆಂಪಲಿಂಗೇಗೌಡ, ಸೋಮಶೇಖರ್, ಈಶ್ವರಯ್ಯ, ಶ್ರೀಮತಿ ಹೊನ್ನಮ್ಮ, ಪುಟ್ಟರಂಗಪ್ಪ, ಎಲ್. ಮಂಜಯ್ಯ, ಮರಿಕೆಂಚಯ್ಯ ಮತ್ತಿತರರಿದ್ದರು.

(Visited 3 times, 1 visits today)