ತುಮಕೂರು
ತುಮಕೂರಿನಲ್ಲಿ ಬಹು ಸಂಖ್ಯಾತರಾಗಿರುವ ದಲಿತರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು ಈ ಕುರಿತು ಸಾಕಷ್ಟು ಬಾರಿ ಮನವಿ ಪ್ರತಿಭಟನೆ ನಡೆಸಿದರು ಪ್ರಯೋಜನವಾಗಿಲ್ಲ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.
ಡಿ ಎಸ್‍ಎಸ್‍ತುಮಕೂರು ಜಿಲ್ಲಾ ಘಟಕದ ವತಿಯಿಂದ ನೂರಾರು ದಲಿತರು ನೀಲಿ ಬಾವುಟಗಳನ್ನು ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಯತ್ನ ನಡೆಸಿದರು ನಗರದ ಟೌನ್ ಹಾಲ್ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಮುಖಂಡರು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಹೋಗಿ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ತುಮಕೂರು ನಗರದಲ್ಲಿರುವ ಡಾಕ್ಟರ್ ಬಾಬು ದೊಡ್ ಜೀವನ ರಾಮ್ ಭವನವನ್ನು ಶೀಘ್ರವಾಗಿ ನಿರ್ಮಾಣ ಮಾಡಬೇಕು. ತುಮಕೂರು ನಗರದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆ ಅಥವಾ ಪುತ್ತಳಿಯನ್ನು ಶೀಘ್ರವಾಗಿ ಸ್ಥಾಪಿಸಬೇಕು, ಅಂಬೇಡ್ಕರ್ ಭವನವನ್ನ ಪುನರ್ ನವೀಕರಣ ಮಾಡಬೇಕು ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಯನ್ನು ಕೂಡ ನಿರ್ಮಾಣ ಮಾಡಬೇಕು ತೆಗೆರೆಯ ದಲಿತ ಕಾಲೋನಿ ನಿವಾಸಿಗಳಿಗೆ ಸ್ಮಶಾನ ಇಲ್ಲದೇ ತಾತ್ಕಾಲಿಕವಾಗಿ ಕೆರೆಯ ಅಂಗಳದಲ್ಲಿ ಶವಗಳನ್ನು ಹೋಳುತ್ತಿದ್ದು ಕೂಡಲೇ ದಲಿತರಿಗೆ ಸ್ಮಶಾನವನ್ನು ನಿರ್ಮಿಸಿಕೊಡಬೇಕು ತುಮಕೂರು ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಸ್ಮಶಾನ ಮತ್ತು ನಿವೇಶನ ಹಂಚಿಕೆ ತುಮಕೂರು ಅಂತರ್ಸನಳ್ಳಿ ಗ್ರಾಮ ತಾಣವಾಗಿದ್ದು ರಿಯಲ್ ಎಸ್ಟೇಟ್ ಉದ್ಯಮಿಗಳು ಖಾತೆ ಮಾಡಿಸಿಕೊಂಡು ಅಕ್ರಮಿಸಿ ಕೊಂಡಿರುವ ಜಾಗವನ್ನು ಬಿಡಿಸಬೇಕು ಬಿಟ್ವೀನ್ ಟೂಲ್ಸ್ ಪೆÇೀಸಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರಿರಿಗೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು ಮತ್ತು ಇತರೆ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಈ ವೇಳೆ ಒತ್ತಾಯಿಸಿದರು.
ಇದು ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಕೊಟ್ಟ ಶಂಕರ್ ಭಾರತಕ್ಕೆ ಸಂವಿಧಾನ ಕೊಟ್ಟ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ತಳಿಗಳನ್ನ ರಾಜ್ಯದಲ್ಲೆಡೆ ಸ್ಥಳೀಯ ಆಡಳಿತಗಳು ಸ್ಥಾಪನೆ ಮಾಡಿದ್ದು ತುಮಕೂರು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಅವರ ಪುತ್ತಳಿ ಅಥವಾ ಪ್ರತಿಮೆ ಇರದಿರುವುದು ನಮಗೆ ಅವಮಾನ ಮಾಡಿದಂತಾಗಿದ್ದು ಈ ಕುರಿತು ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು ಯಾವುದೇ ಜಿಲ್ಲಾಧಿಕಾರಿಗಳು ನಮಗೆ ಪುತ್ತಳಿ ನಿರ್ಮಾಣ ಮಾಡುವ ಭರವಸೆಯನ್ನ ನೀಡಿಲ್ಲವೆಂದು ಜಿಲ್ಲಾಧಿಕಾರಿಗಳ ವಿರುದ್ಧ ಅವರು ಹೇಳಿ ಆರೋಪ ಮಾಡಿದ್ದರು.
ಶತಶತಮಾನಗಳಿಂದಲೂ ತುಳಿತಕೊಳ್ಳಗಾಗಿರುವ ದಲಿತರಿಗೆ ಬರೀ ಅನ್ಯಾಯಗಳು ನಡೆಯುತ್ತಿದ್ದು ಕೊಡಲೇ ಜಿಲ್ಲಾಧಿಕಾರಿ ಗಳು ನ್ಯಾಯ ಒದಗಿಸಬೇಕು ಎಂದರು.
ಪ್ರತಿಭಟನಾ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ದಲಿತ ಮುಖಂಡರಾದ ಪಟ್ಟ ಶಂಕರ್ ಹರೀಶ್ ಗೌಡ ಮರಳೂರು ಕೃಷ್ಣಮೂರ್ತಿ ನರಸಯ್ಯ ಎಲ್ಲಾಪುರ ಶ್ರೀನಿವಾಸ್ ಗೋಪಿ ಮೊಸರು ಪಡಿ ಕುಮಾರ್ ಶಿವಕುಮಾರ್ ಪ್ರದೀಪ್ ನರಸಿಂಹಮೂರ್ತಿ ಯೋಗೇಶ್ ಶಿವಕುಮಾರ್ ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಇನ್ನೂ ಡಿಸಿ ಕಚೇರಿ ಮುತ್ತಿಗೆಯನ್ನು ಪೆÇಲೀಸರು ತಡೆದಿದ್ದು ಈ ಸಂದರ್ಭದಲ್ಲಿ ಎಡಿಸಿ ಚನ್ನಬಸಪ್ಪ ಅವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ್ದರು.