ಗುಬ್ಬಿ
ಪಕ್ಷದಿಂದ ಹುಚ್ಚಾಟಿದ ಶಾಸಕ ತಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬ ಪರಿಜ್ಞಾನವಿಲ್ಲದೆ ಮತದಾರರ ಬಳಿ ಹೋಗಿ ಮತಯಾಚಿಸುತ್ತಿರುವುದು ಎಷ್ಟು ಸಮಂಜಸ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ವಕೀಲ ಪ್ರಸನ್ನ ಕುಮಾರ್ ಪ್ರಶ್ನಿಸಿದರು.
ಅವರು ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಳ ಸಮುದಾಯದ ಜನರ ಆಶೋತ್ತರಗಳಿಗೆ ಸ್ಪಂದಿಸದಂತಹ ಶಾಸಕ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂದು ತಿಳಿಯದೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮುಡಿಸುತ್ತಿರುವುದು ಎಷ್ಟು ಸಮಂಜಸ ಎಂದವರು ಕಾಂಗ್ರೆಸ್ ನಾಯಕರುಗಳ ವಿರೋಧವಿದ್ದರೂ ಸಹ ಮುಖಂಡರುಗಳ ಮನೆ ಬಾಗಿಲುಗಳಿಗೆ ಎಡತಾಗುತ್ತಿರುವುದು ಇವರಿಗೆ ಸೋಲಿನ ಭಯ ಬಂದಿರುವುದು ಸಹಜ ಮೊದಲು ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷದ ಕಾರ್ಯಕರ್ತನಾಗಿ ಬಾವುಟ ಹಿಡಿಯಲ್ಲಿ ಪಕ್ಷವನ್ನು ಸಂಘಟಿಸಿ ಆಮೇಲೆ ಟಿಕೆಟ್ ಆಕಾಂಕ್ಷಿಯಾಗಲಿ ಎಂದು ದೂರಿದರು .
ಈಗಾಗಲೇ ಜನರ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸವನ್ನು ಕುಕ್ಕರ್ ನೀಡುವ ಮುಖಾಂತರ ಮಾಡುತ್ತಿರುವುದು ಇವರ ಘನತೆಗೆ ತಕ್ಕದ್ದಲ್ಲ ಇದರಿಂದ ಸಾರ್ವಜನಿಕರ ನಂಬಿಕೆಗೆ ದ್ರೋಹವೆಸಗಿದ್ದಂತಾಗುತ್ತದೆ ಎಂದು ಕಿಡಿಕಾರಿ ದರು ಮುಂದುವರೆದು ಮಾತನಾಡಿ ಬಿಜೆಪಿ ಸರ್ಕಾರವು 40% ಸರ್ಕಾರ ಎಂದು ಆಪಾದನೆ ಇದ್ದರು ಬಿಜೆಪಿಗೆ ಮತ ನೀಡಿ 100 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಉಚ್ಚಾಟಿತ ಶಾಸಕರ ಪತ್ರವು ಸಿಕ್ಕಿತು ಇದರಿಂದ ಮಣ್ಣೆರೆಸುವ ಕಾಮಗಾರಿಗಳು ಪ್ರಾರಂಭವಾಗಿದ್ದು ತಾಲೂಕಿನ ಮತದಾರರು ಕಣ್ಣು ಮುಚ್ಚಿ ಕುಳಿತಿಲ್ಲ ಪ್ರಜ್ಞಾವಂತರಿದ್ದಾರೆ ಇವರ ಬೂಟಾಟಿಕೆಯ ಮಾತುಗಳು ಹಾಗೂ ನಡತೆಯು ಮುಂದಿನ ಚುನಾವಣೆಗಳಲ್ಲಿ ನಡೆಯುವುದಿಲ್ಲ ಎಂದರು.
ಇನ್ನೋರ್ವ ಮುಖಂಡ ವನ್ನಗಿರಿ ಗೌಡ ಮಾತನಾಡಿ ಉಚ್ಚಾಟಿಥ ಶಾಸಕರು ಮೂರು ತಿಂಗಳಿನಿಂದ ರಾಜೀನಾಮೆಯ ಪರ್ವವನ್ನು ನಡೆಸಿ ತಾವು ರಾಜೀನಾಮೆ ನೀಡದೆ ಇರಲು ಕಾರಣವೇನು, ಮಾಧ್ಯಮದ ಮುಖಾಂತರ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆಯನ್ನು ನೀಡಿ ಇಲ್ಲಿಯವರೆಗೂ ರಾಜೀನಾಮೆ ನೀಡದೆ ಜನರ ಕಣ್ಣಿಗೆ ಮಣ್ಣರಿಸುತಿದ್ದಾರೆ ಮೊದಲು ರಾಜೀನಾಮೆ ನೀಡಿ ಆಮೇಲೆ ಪಕ್ಷಕ್ಕೆ ಬರುವಂತೆ ಎಂದು ಎಚ್ಚರಿಸಿದರು.
ಎರಡು ದೋಣಿಗಳ ಮೇಲೆ ಕಾಲಿಟ್ಟಿರುವ ಶಾಸಕ ಶ್ರೀನಿವಾಸ್ ರವರು ಮೊದಲು ತಮ್ಮ ವೈಯಕ್ತಿಕ ನಿಲುವನ್ನು ಸ್ಪಷ್ಟಪಡಿಸಲಿ ಆಮೇಲೆ ಮುಖಂಡರುಗಳು ಯಾರು ನಾಯಕನಾಗಬೇಕೆಂಬುದನ್ನು ಸ್ಪಷ್ಟಪಡಿಸುತ್ತಾರೆ ಕೇವಲ ಮತದಾರರ ಮೇಲೆ ಪ್ರಭಾವ ಬೀರಲು ನಮ್ಮ ಕಾರ್ಯಕರ್ತರುಗಳ ಕೇಳಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಿರುವುದು ಶಾಸಕರ ಗಣತೆಗೆ ತಕ್ಕದ್ದಲ್ಲ ಎಂದರು.
ಕಾಂಗ್ರೆಸ್ ಮುಖಂಡ ಶಶಿಧರ್ ಮಾತನಾಡಿ ಶಾಸಕರೇ ನೀವು ಇಂದಿನದನ್ನು ಮರೆತಿದ್ದೀರಾ ನೀವೇ ನಿಲ್ಲಿಸಿದಂತಹ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೇವಲ 37,000 ಮತಗಳನ್ನು ಪಡೆದಿದ್ದು ಅತಿ ಹೆಚ್ಚಿನ ಮತ ಪಡೆದ ಗುಬ್ಬಿ ಕಾಂಗ್ರೆಸ್ ಪಕ್ಷವು ಮುದ್ದ ಹನುಮೇಗೌಡರಿಗೆ ಮತ ನೀಡಿದ್ದು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂಬ ಭ್ರಮೆಯಲ್ಲಿ ಇರುವುದು ಸರಿಯಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಇನ್ನೂ ಜೀವಂತವಾಗಿದ್ದಾರೆ 20 ವರ್ಷದ ಹಿಂದೆ ಇದ್ದಂತಹ ಸ್ಥಿತಿ ಇಂದು ನಿಮ್ಮ ಮೇಲಿಲ್ಲ ಕೇವಲ ಅಡ್ಡದಾರಿಯಿಂದ ಪಕ್ಷದ ಟಿಕೆಟ್ ಅನ್ನು ತೊಂದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕರಿಗೆ ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾತನಾಡಿ ಇದೇ ತಿಂಗಳು 8 ನೇ ತಾರೀಖಿನಂದು ಚಿತ್ರದುರ್ಗದಲ್ಲಿ ಐತಿಹಾಸಿಕ ಎಸ್ಸಿ ಎಸ್ಟಿ ಹಿಂದುಳಿದ ವರ್ಗದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಸುಮಾರು ತಾಲೂಕಿ ನಿಂದ ಸಾವಿರಾರು ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದÀರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು ಗೋಷ್ಠಿಯಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಣ್ಣ ಮುಖಂಡರಾದ ಎಂವಿ ಶ್ರೀನಿವಾಸ್ ಪಟ್ಟಣ ಪಂಚಾಯತಿ ಸದಸ್ಯರಾದ ಮೊಹಮ್ಮದ್ ಸಾಧಿಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಸಲೀಂ ಭಾಷಾ ಹಾಗೂ ಮಹಿಳಾ ಅಧ್ಯಕ್ಷ ಸೌಭಾಗ್ಯ ಹಾಗೂ ಕಾರ್ಯಕರ್ತರುಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು