ತುಮಕೂರು
ಹಣದುಬ್ಬರ ಪ್ರಮಾಣ ಹೆಚ್ಚಾಗಿ ಇಡೀ ವಿಶ್ವವೇ ಆರ್ಥಿಕ ಅಸ್ಥಿರತೆ ಎದುರಿಸುತ್ತಿದೆ. ಭಾರತದಲ್ಲೂ ಹಣದುಬ್ಬರ ಪ್ರಮಾಣ ಏರಿದರೂ ಮುಂದುವರಿದ ರಾಷ್ಟ್ರಗಳಾದ ಇಂಗ್ಲೆಂಡ್, ಯೂರೋಪ್ ಒಕ್ಕೂಟ, ಆಮೇರಿಕಾ, ರಷ್ಯ ಚೀನಾದಷ್ಟು ವೇಗಗತಿಯಲ್ಲಿ ಹಣದುಬ್ಬರ ಏರಲು ಪ್ರಧಾನಿ ಮೋದಿ ಅವರ ಆಡಳಿತ ಅವಕಾಶ ಮಾಡಿಕೊಟ್ಟಿಲ್ಲ. ಪ್ರಧಾನಿಯಾಗಿರುವುದರಿಂದಲೇ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಭಿಪ್ರಾಯಪಟ್ಟರು.
ಅವರು ಸಮುದಾಯ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಶಕ್ತಿ ಕೇಂದ್ರ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ದೇಶದ ರಾಜಕೀಯ, ರಾಜಕಾರಣದ ಸ್ವರೂಪವೇ ಬದಲಾಯಿತು ಎಂದರು.
ಶಕ್ತಿ ಕೇಂದ್ರದ ಸಭೆ ಪ್ರಮುಖರ ಸರ್ವರನ್ನು ಒಳಗೊಂಡ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕೋವಿಡ್‍ನಲ್ಲಿ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿದ ಏಕೈಕ ರಾಷ್ಟ್ರ ಭಾರತವಾಗಿದ್ದು, ಲಸಿಕೆಯನ್ನೇ ದಾನ ಮಾಡುವ ಮಟ್ಟಿಗೆ ಬೆಳೆದಿದೆ. ದಲಿತರು, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯಾಗಿಸಿದ ಹಿರಿಮೆ ಬಿಜೆಪಿಗಿದ್ದು, ಮತದಾರರ ಬಳಿಹೋಗಲು ಪ್ರಮುಖರು ಸರ್ಕಾರದ ಸಾಧನೆಯ ರಿಪೆÇೀರ್ಟ್ ಕಾಡ್ ಇದೆ, ಶಕ್ತಿ ಕೇಂದ್ರ ಹಾಗೂ ಬೂತ್ ಕಾರ್ಡ್ ಹಿಡಿದು ಮತದಾರರಿಗೆ ಪಕ್ಷ ಸರ್ಕಾರದ ಸಾಧನೆ ಹೇಳುವ ಕಾರ್ಯ ಮಾಡಬೇಕು. ತುಮಕೂರು ಜಿಲ್ಲೆಯಲ್ಲಿ ಹಾಲಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಮುಂಬರುವ ಚುನಾವಣೆಯಲ್ಲಿ ಎಲ್ಲಾ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂದು ಶಕ್ತಿಕೇಂದ್ರದ ಪ್ರಮುಖರನ್ನು ಪ್ರೇರೆಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷನಳೀನ್ ಕುಮಾರ್ ಕಟೀಲ್ ಮಾತನಾಡಿ ಅಮಿತ್ ಷಾ ಅವರು ಮಂಡ್ಯಕ್ಕೆ ಬಂದು ಹೋದ ಮೇಲೆ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು. ತುಮಕೂರಿನಲ್ಲಿ ಜನಸಂಘದ ಮಲ್ಲಿಕಾರ್ಜುನಯ್ಯ ಅವರ ಕಾಲದಿಂದಲೂ ಬಿಜೆಪಿಗೆ ನೆಲೆಯಿದೆ. ಈ ಬಾರಿ ಜಿಲ್ಲೆಯ 11 ಸ್ಥಾನ ಗೆಲ್ಲುವ ಜೊತೆಗೆ 150 ಸ್ಥಾನ ಗುರಿ ತಲುಪಲು, ಹುರಿದುಂಬಿಸಿದರು. ಶಕ್ತಿಕೇಂದ್ರ, ಬೂತ್ ಮಟ್ಟದ ಪೇಜ್ ಪ್ರಮುಖರ ಶ್ರಮ ಮುಖ್ಯವಾಗಿದೆ ಎಂದರು.
ದೊಡ್ಡ ಕೈಗಾರಿಕಾ ಕಾರಿಡಾರ್: 2014ರಲ್ಲಿ ಶೇ.92ರಷ್ಟು ಮೊಬೈಲ್ ಹೊರಗಿನಿಂದ ಆಮದುಮಾಡಿಕೊಳ್ಳಬೇಕಿತ್ತು. 2019ರ ವೇಳೆಗೆ ಮೊಬೈಲ್ ಉತ್ಪಾದನೆಯಲ್ಲಿ ಭಾರತವೇ ವಿಶ್ವದ 2ನೇಸ್ಥಾನದಲ್ಲಿರುವುದು ಕಂಡುಬಂದಿದೆ. ತುಮ ಕೂರು ಜಿಲ್ಲೆಯ ವಸಂತಾನರಸಾಪುರವನ್ನು ಏಷ್ಯಾದಲ್ಲೇ ಅತೀದೊಡ್ಡ ಕೈಗಾರಿಕಾ ಕಾರಿಡಾರ್ ಆಗಿ ಅಭಿವೃದ್ಧಿಪಡಿಸುತ್ತಿದ್ದು, ತುಮಕೂರು ನಗರದ ಸ್ಮಾರ್ಟ್‍ಸಿಟಿಗೆ ಸಾವಿರ ಕೋಟಿ ಅನುದಾನ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜಬೊಮ್ಮಾಯಿ ಅವರ ನೇತೃತ್ವದಲ್ಲಿ ರೈತರಿಗೆ, ರೈತ ಮಕ್ಕಳಿಗೆ, ಮೀನುಗಾರರಿಗೆ, ನೇಕಾರರಿಗೆ ಎಲ್ಲಾ ವರ್ಗದವರಿಗೆ ಹೀಗೆ ಅನುಕೂಲಕರವಾದ ಯೋಜನೆಗಳು, ವಸತಿ, ರಸ್ತೆ ಅಭಿವೃದ್ಧಿ, ಮೂಲಸೌಕರ್ಯ, ನೀರಾವರಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಸ್ವಾತಂತ್ರ್ಯ ಅಮೃತ ಕಾಲಘಟ್ಟದಲ್ಲಿರುವ ನಾವು ಶತಮಾನದ ವೇಳೆಗೆ ಭಾರತವನ್ನು ಪ್ರಗತಿ ರಾಷ್ಟ್ರ ಗುರುತಿಸುವಂತೆ ಮಾಡಬೇಕಾದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಾಗಿದೆ ಎಂದರು.
ನಿಗದಿತ 12ಗಂಟೆಗೆ ಬದಲಾಗಿ ಒಂದೂವರೆ ತಾಸು ತಡವಾಗಿ ಬಂದಿದ್ದ ಕಾರ್ಯಕರ್ತರಲ್ಲಿ ಕ್ಷಮೆ ಕೋರಿದ ನಡ್ಡಾ ಅವರು ತಮ್ಮ ಹಿಂದಿ ಭಾಷಣದಲ್ಲಿ ಬಿಎಸ್‍ವೈ ಮನೆದೇವರಾದ ಎಡೆಯೂರು ಸಿದ್ದಲಿಂಗೇಶ್ವರ ಹಾಗೂ ಗೊರವನಹಳ್ಳಿ ಮಹಾಲಕ್ಷ್ಮಿಯನ್ನು ಸ್ಮರಿಸಿಕೊಂಡರಲ್ಲದೆ, ತುಮ ಬಿ. ಕೂರು ಸಂತರ ನಾಡೆಂದು ಬಣ್ಣಿಸಿದರು. ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಜಿಲ್ಲಾಧಕರಾದ ಹೆಬ್ಬಾಕರವಿ, ಬಿ.ಕೆ.ಮಂಜುನಾಥ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಂ, ಡಾ.ಸಿಎಂ.ರಾಜೇಶ್‍ಗೌಡ, ಎಂಎಲ್ಸಿ ಚಿದಾನಂದ ಎಂ.ಗೌಡ, ನವೀನ್ ಮಾಜಿ ಎಂಎಲ್ಸಿಗಳಾದ ಡಾ.ಎಂ.ಆರ್.ಹುಲಿನಾಯ್ಕರ್, ಎಂ.ಡಿ.ಲಕ್ಷ್ಮೀನಾರಾಯಣ್, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಎಸ್.ಶಿವಣ್ಣ, ಮಾಜಿ ಶಾಸಕರಾದ ಸುರೇಶ್ ಗೌಡ, ಕುಮಾರ್, ಗಂಗಹನುಮಯ್ಯ, ರಾಜ್ಯಸಭಾ ಸದಸ್ಯ ನರಸಿಂಹರಾವ್, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಅಶ್ವತ್ಥನಾರಾಯಣ್, ಸ್ಪೂರ್ತಿ ಚಿದಾನಂದ್ ಸೇರಿ ಪಕ್ಷದ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು. ಗೋಪೂಜೆ, ಸಿದ್ಧಗಂಗಾ ಮಠಕ್ಕೆ ಭೇಟಿ : ಕಾರ್ಯಕ್ರಮಕ್ಕೂ ಮುನ್ನ ಗೋಪೂಜೆ ನೆರವೇರಿಸಿದ ನಡ್ಡಾ ಅವರು ಸಭೆ ಮುಗಿದ ಬಳಿಕ ಸಿದ್ಧಗಂಗಾ ಮಠಕ್ಕೆ ತೆರಳಿ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರಲ್ಲದೆ, ಶ್ರೀ ಸಿದ್ಧಲಿಂಗಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.