ಗುಬ್ಬಿ
ಯಾವುದೇ ಕಾಂಗ್ರೆಸ್ ಪಕ್ಷದ ನಾಯಕರ ಮನೆ ಬಾಗಿಲಿಗೆ ಹೋಗಿಲ್ಲ ಕೇವಲ ಊಹಪಹಗಳು ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಅವರು ಎಂಎಚ್ ಪಟ್ನಾ ಹಾಗೂ ಸಿಂಗೋನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿಗೆ ಪೂಜೆ ಸಲ್ಲಿಸಿ ಮಾತನಾಡಿ ನಾನು ಪ್ರತಿ ಹಳ್ಳಿ ಭೇಟಿ ನೀಡಿದಾಗ ಎಲ್ಲರ ಮನೆ ಬಾಗಿಲಿಗೆ ಹೋಗುತ್ತೇನೆ ಕೇವಲ ನನ್ನ ವಿರೋಧಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ಮನಗಳಿಗೆ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದರು.
ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಗುತ್ತೇಗೆದಾರರು ಆತ್ಮಹತ್ಯೆಯ ಕೇಸ್ಗಳು ಸಾಕಷ್ಟು ಸಂಭವಿಸಿದ್ದು ಈ ಸಾವಿಗೆ ಸರ್ಕಾರವೇ ಹೊಣೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಕಾರ್ಯಕರ್ತರು ಗುತ್ತಿಗೆದಾರರಿಗೆ ಕೆಲಸದ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡದೆ ಅವರ ಸಂಸಾರವನ್ನು ಬೀದಿಗೆ ತಂದಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿ ಹಾ ಗಲವಾಡಿಕೆರೆಗೆ ಈಗಾಗಲೇ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದ್ದು ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಂದುವರೆದಿದ್ದು ಕಾಮಗಾರಿಯನ್ನು ಶೀಘ್ರವೇ ಮುಗಿಸುತ್ತೇನೆ ಎಂದವರು ಸರ್ಕಾರದಿಂದ ಅನುಮೋದನೆಗೊಂಡ ಹಣವನ್ನು ಬಿಡುಗಡೆ ಮಾಡಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು ವಿರೋಧ ಪಕ್ಷದ ನಾಯಕರ ಹೇಳಿಕೆಗೆ ಉತ್ತರ ನೀಡಿ ಮಾತನಾಡಿದರು.
ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದು ಸತ್ಯ ಈಗಾಗಲೇ ಕಾರ್ಯಕರ್ತರ ರನ್ನು ಒಂದೆಡೆ ಸೇರಿಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿ ರಾಜೀನಾಮೆ ನೀಡುತ್ತೇನೆ. ಚುನಾವಣೆಗೆ ಮುನ್ನವೇ ಮತಯಾಚಿಸಲು ಹಾಗೂ ಮತದಾರರ ಮನವೊಲೇಯಿಸಲು ಕುಕ್ಕರ್ ನೀಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್ ಕೆಲವು ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರಿಸಲು ಈ ರೀತಿ ಹಂಚುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ನಾನು ಯಾವುದೇ ಅಮಿಷವನ್ನು ಮತದಾರ ಪ್ರಭುವಿಗೆ ನೀಡುವುದಿಲ್ಲ ಈಗಾಗಲೇ ತಾಲೂಕಿನಾದ್ಯಂತ ಕಾಮಗಾರಿಗಳನ್ನು ಮುಗಿಸಿದ್ದು ಇದರಿಂದ ಮತದಾರ ಪ್ರಭು ನನ್ನ ಪರವಾಗಿ ಇದ್ದಾನೆ ಈ ರೀತಿ ಅಮಿಷಗಳನ್ನು ಹೊಟ್ಟುವುದು ನನ್ನ ಇಪ್ಪತ್ತು ವರ್ಷದ ಇತಿಹಾಸದಲ್ಲೇ ಇಲ್ಲ ಎಂದು ತಿಳಿಸಿದರು ಕೇವಲ ಬೆರಳಣಿಕೆಯಷ್ಟು ದಿನವಿರುವ ಅವಧಿಯಲ್ಲಿ ನೀವು ಪೂಜೆ ಸಲ್ಲಿಸಿರುವ ಕಾಮಗಾರಿಗಳು ಸಂಪೂರ್ಣಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದರು.
ಈಗಾಗಲೇ ಪೂಜೆ ಮಾಡಿರುವ ಕಾಮಗಾರಿಗಳು ಹಣ ಬಿಡುಗಡೆಯಾಗಿದ್ದು ಇದರಿಂದ ಕಾಮಗಾರಿಗಳಿಗೆ ಯಾವುದೇ ಅಡಚಣೆಯಾಗದು ಎಂದು ತಿಳಿಸಿದರು ವಿರೋಧ ಪಕ್ಷದವರ ಟೀಕೆಗೆ ನಾನು ಯಾವುದೇ ಉತ್ತರ ನೀಡಲು ಸಾಧ್ಯವಿಲ್ಲ ಈಗಾಗಲೇ ನಿರಾಸೆಗೊಂಡಿರುವ ವಿರೋಧ ಪಕ್ಷದವರು ನನ್ನ ಮೇಲೆ ಗ* ಕೂರಿಸುತ್ತಿದ್ದಾರೆ ಆದ್ದರಿಂದ ಅವರಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು ಸಮಾರಂಭದಲ್ಲಿ ಎಂಎಚ್ ಪಟ್ನಾ ಅಧ್ಯಕ್ಷ ಸುನಿತಾ ಶಶಿಧರ್ ಸದಸ್ಯರಾದ ನಾಗೇಶ್ ಬೋರಣ್ಣ ರಾಮಕ್ಕ ಪದ್ಮ ಮಾಜಿ ಅಧ್ಯಕ್ಷ ವೆಂಕಟೇಶ್ ನರಸಿಂಹಯ್ಯ ಹಾಗೂ ನೂರಾರು ಮುಖಂಡರುಗಳು ಭಾಗವಹಿಸಿದ್ದರು