ಪಾವಗಡ
ತಾಲೂಕಿನಲ್ಲಿ ನಿರೀಕ್ಷಣ ಮಂದಿರದಿಂದ ದಲಿತ ಸಂಘಟನೆಗಳು ಒಕ್ಕೂಟದವರು ದಲಿತ ಮುಖಂಡರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ದಲಿತ ಸಂಘಟನೆ ಹೋರಾಟಗಾರರು ಮಾಲಾರ್ಪಣೆ ಮಾಡಿದರು. ನಂತರ ಶನೇಶ್ವರ ಸ್ವಾಮಿ ವೃತ್ತದ ಬಳಿ ಸರಪಳಿ ವೃತ್ತಾಕಾರದಲ್ಲಿ ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.
ಅಲ್ಲಿಂದ ತಹೀಸಿಲ್ದಾರ್ ಕಚೇರಿಯ ಆವರಣದವರೆಗೂ ನ್ಯಾಯ ಬೇಕು ಎಂದು ಘೋಷಣ ಕೂಗುತ್ತಾ ಮುಂದೆ ಸಾಗಿದರು.
ಇದೇ ವೇಳೆ ಹನುಮಂತರಾಯಪ್ಪ ಸಿ ಕೆ ಪುರ ಕಲಾತಂಡ ಇವರ ಸಂಗಡಿಗರಿಂದ ಹಾಡಿನ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಕೊಟ್ಟ ಶಂಕರ್ ಉಪನ್ಯಾಸಕರು ತುಮಕೂರು ಇವರು ಮಾತನಾಡಿ ನಮಗೆ ಈ ದೇಶದಲ್ಲಿ ಯಾವುದೇ ಸ್ವಾಮೀಜಿ ಅಥವಾ ರಾಜಕಾರಣಿಯು ಇಲ್ಲ. ಅವರು ಯಾರು ಇಲ್ಲ ಅಂದರು ಕೂಡ .ಈ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನವನ್ನು ನಮ್ಮ ಜೊತೆಯಲ್ಲೇ ಇರುತ್ತದೆ. ಆ ಸಂವಿಧಾನದ ಮೂಲಕವೇ ನಾವು ಹೋರಾಟ ಮಾಡಬೇಕು. ಸರ್ಕಾರಕ್ಕೆ ಹೇಳುವುದು ಎನೆಂದರೆ ನೀವು ಈ ಸಮುದಾಯಕ್ಕೆ ಸಿಹಿ ಸುದ್ದಿ ಕೊಡಲಿಲ್ಲ ಅಂದರೆ ನಿಮ್ಮ ಸರ್ಕಾರದ ಹಣೆಬರಹವನ್ನು ಅಸ್ಪೃಶ್ಯರು ಕಿತ್ತು ಎಸೆಯುತ್ತಾರೆ.
ನಮ್ಮ ಪಾವಗಡದಲ್ಲಿ ಬಹಳಷ್ಟು ಜನ ಹೋರಾಟಗಾರರು ಇದ್ದಾರೆ ಈ ಪಾವಗಡದಲ್ಲಿ ಅಸ್ಪೃಶ್ಯರ ಬಗ್ಗೆ ಅತಿ ಹೆಚ್ಚಿನದಾಗಿ ನ್ಯಾಯ ಕೊಡಿಸುವುದು ಅಂದರೆ ನಮ್ಮ ವಕೀಲರ ಸಂಘದ ಅಧ್ಯಕ್ಷರಾದ ಶೇಷಾನಂದನ್ ರವರು ಮಾತ್ರ.. ಎಂದರು. ಈ ಚಳುವಳಿಯನ್ನು ಎಂದಿಗೂ ನಿಲ್ಲಲ್ಲ ಇನ್ನು ಸದಾಶಿವ ಆಯೋಗ ಜಾರಿ ಆಗದಿದ್ದರೆ ಚಳುವಳಿ ಬಹಳ ದೊಡ್ಡಮಟ್ಟದಲ್ಲಿ ನಡೆಯುತ್ತದೆ ಎಂದು ಅತಿ ಹೆಚ್ಚಿನದಾಗಿ ಹೊಲೆ ಮಾದಿಗರ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದರು.
ಹನುಮಂತರಾಯಪ್ಪ ಕಡಪಲಕೆರೆ ಹೆಚ್.ಆರ್.ಎಫ್. ಡಿ.ಎಲ್. ರವರು ಮಾತನಾಡಿ ಎ ಬಿ ಸಿ ಡಿ ವರ್ಗೀಕರಣ ಇವತ್ತು ನೆನ್ನೆ ಅಲ್ಲ .ಕಳೆದ 30 ವರ್ಷಗಳಿಂದ ರಸ್ತೆ ಮೂಲಕ ಬೈಕ್ ರ್ಯಾಲಿ ಮೂಲಕ ಹಲವಾರು ಮುಖಂಡರು ಪ್ರತಿಭಟನೆಗಳನ್ನು ಹಮ್ಮಿಕೊಂಡು ಮತ್ತು ಸಾಮಾಜಿಕ ಹೋರಾಟಗಾರರು ದಲಿತ ಸಂಘಟನೆಗಳು ಹೋರಾಟ ಮಾಡಿದರು ಸದಾಶಿವ ಆಯೋಗ ಜಾರಿಯಾಗಬೇಕು ಇಂದು ಅಣ್ಣ-ತಮ್ಮಂದಿರ ಭಾಗ 15% ನಲ್ಲಿ 3% ಪರಿಶಿಷ್ಟ ಪಂಗಡಕ್ಕೆ ಇನ್ನು ಅನೇಕ ಹೆಚ್ಚಿನದಾಗಿ ಮೀಸಲಾತಿಯ ಬಗ್ಗೆ ತಿಳಿಸಿದರು..
ಈ ಸಂದರ್ಭದಲ್ಲಿ ಶೇಷಾನಂದನ್ ವಕೀಲರ ಸಂಘದ ಅಧ್ಯಕ್ಷರು. ಹಾಗೂ ವಲಯ ಮಾತಿಗೆ ಸಮುದಾಯದ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಈ ಸಂಖ್ಯೆಯಲ್ಲಿ ಹೆಚ್ಚಿನದಾಗಿ ಪಾಲ್ಗೊಂಡಿದ್ದರು