ಗುಬ್ಬಿ


ನಾನೇ ಕಟ್ಟಿಕೊಟ್ಟ ಕೋಟೆಯಲ್ಲಿ 20 ವರ್ಷಗಳಿಂದ ತಾಲೂಕಿನ ಚುಕ್ಕಾಣಿ ಹಿಡಿದ ಶಾಸಕನ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ತಾಕತ್ತಿದ್ದರೆ ಉಚ್ಚಾಟಿತ ಶಾಸಕ ರಾಜೀನಾಮೆ ನೀಡಿ ಮತದಾರ ಪ್ರಭುಗಳಲ್ಲಿ ಬರಲಿ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಜಿ ಎನ್ ಬೆಟ್ಟಸ್ವಾಮಿ ಶಾಸಕರಿಗೆ ಸವಾಲು ಹಾಕಿದರು.
ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೇವಲ ಬಿಜೆಪಿಯ ಸದಸ್ಯರುಗಳ ಮೇಲೆ ಆರೋಪ ಉಳಿಸುವುದು ಸರಿಯಲ್ಲ ರೈತರ ಪರವಾಗಿ ನಿಲ್ಲುವಂತಹ ಸಮಿತಿಯ ಸದಸ್ಯರುಗಳು ಶಾಸಕರ ಅಣತಿಯಂತೆ ನಡೆಯದೆ ಕೇವಲ 10 ನಿಮಿಷ ತಡವಾಗಿ ಬಂದಿರುವುದಕ್ಕೆ ತಾವು ಸಾರ್ವಜನಿಕರ ಹಾಗೂ ರೈತರ ಎದುರಿನಲ್ಲಿ ನಿಷ್ಠಾವಂತನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಈ ರೀತಿಯ ನಾಟಕವಾಡಿದ್ದು ಈ ನಾಟಕವು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ ಎಂದು ತಿಳಿಸಿದರು.
ಒಂದು ಕಾಲದಲ್ಲಿ ನಾನೇ ಕರೆದುಕೊಂಡು ಬಂದು ಶಾಸಕರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದೇನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತಾವು ಮತ ಗಳಿಸಬಹುದೆಂಬ ಕಲ್ಪನೆಯಿಂದ ಹೊರಬರುವುದು ಒಳ್ಳೆಯದು ಎಂದ ಅವರು ಮುಂದುವರೆದು ಮಾತನಾಡಿ ಸೋಲಿನ ಭೀತಿಯು ಕಾಡುತ್ತಿರುವುದರಿಂದ ಚುನಾವಣೆಗೆ ಮುನ್ನವೇ ಕುಕ್ಕರ್ಗಳನ್ನು ಹಂಚುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದವರು
ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಕೆಲಸವನ್ನು ಈ ಶಾಸಕ ಮಾಡುತ್ತಿದ್ದಾನೆ ಕುಕ್ಕರ್ ನಲ್ಲಿ ದೇವರ ಫೆÇೀಟೋ ಹಾಗೂ ಮಂತ್ರಿಸಿದ ಅಕ್ಕಿಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವುದು ಇವರ ಘನತೆಗೆ ತಕ್ಕದಾದುಲ್ಲ ಎಂದ ಅವರು 20 ವರ್ಷಗಳಿಂದ ತಾಲೂಕನ್ನು ತನ್ನ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಉಚ್ಚಾಟಿತ ಶಾಸಕ ಸೋಲಿನ ಭಯ ಕಾಡುತ್ತಿರುವುದು ಇದರಿಂದ ಗೊತ್ತಾಗುತ್ತದೆ ಎಂದರು ಕೇವಲ ರೈತರ ಪರವಾಗಿದ್ದೇನೆ ರೈತರಿಗೆ ಭೂ ಒಡೆತದ ಹಕ್ಕನ್ನು ನೀಡಲು ಭಾರತೀಯ ಜನತಾ ಪಕ್ಷದ ಸದಸ್ಯರುಗಳೇ ಕಾರಣ ಎಂದು ದೂರಿರುವುದು ಇವರ ರೈತರ ಪರವಾಗಿರುವ ಕಾಳಜಿಯನ್ನು ತೋರಿಸುತ್ತದೆ ಈ ಹಿಂದೆ ಬಗರು ಕುಂ ಸಮಿತಿಯಲ್ಲಿ ನಡೆದಂತಹ ಅವ್ಯವಹಾರಗಳನ್ನು ಈಗಾಗಲೇ ತನಿಖೆ ಹಂತದಲ್ಲಿದೆ ಇನ್ನು ಮುಂದಾದರು ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು ಮುಂದಿನ ದಿನಗಳಲ್ಲಿ ತಾಲೂಕಿನ ಜನತೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿ ತಾಲೂಕ್ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಶಾಸಕ ನಗರದಲ್ಲಿರುವ ರಸ್ತೆಗಳನ್ನು ನೋಡಿದರೆ ಶಾಸಕರ ಅಭಿವೃದ್ಧಿ ಎದ್ದು ಕಾಣುತ್ತದೆ ಚುನಾವಣಾ ಸಮಯದಲ್ಲಿ ಗುದ್ದಲಿ ಮತ್ತು ಪಿಕಾಶಿ ಈಚೆ ಬಂದಿರುವುದು ತಾಲೂಕಿನ ಮತದಾರ ಪ್ರಭುಗಳಿಗೆ ಕಾಣಿಸುತ್ತದೆ. ಇವರ ಅಭಿವೃದ್ಧಿ ಯಾವ ರೀತಿ ಇದೆ ಎಂದು ಅವರ ಧರ್ಮಪತ್ನಿಯವರಿಗೆ ಕೇಳಿದರೆ ಸಾಕು ಕೇವಲ ಸುಳ್ಳು ಭರವಸೆಗಳನ್ನು ನೀಡಿ ಚುನಾವಣಾ ಸಮಯದಲ್ಲಿ ಕಾಮಗಾರಿಗಳ ಅಭಿವೃದ್ಧಿಯ ಬಗ್ಗೆ ಮಾತನಾಡುವ ಶಾಸಕ ತನ್ನ ಅಭಿವೃದ್ಧಿ ಎಷ್ಟು ಎಂದು ಹೇಳಲಿ 40% ಸರ್ಕಾರ ಎಂದು ಬಿಜೆಪಿಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಶಾಸಕ ತಾನು ಇಲ್ಲಿಯವರೆಗೂ ಗುತ್ತಿಗೆದಾರರ ರಿಂದ ಎಷ್ಟು ಪರ್ಸೆಂಟ್ ಹಣವನ್ನು ಬಳಸಿಕೊಂಡು ಕುಕ್ಕರ್ಗಳನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಪಿ ಬಿ ಚಂದ್ರಶೇಖರ್ ಬಾಬು ಮಾತನಾಡಿ ಸಂಸದರ ಬಗ್ಗೆ ಮಾತನಾಡುವ ನೈತಿಕತೆಯನ್ನು ಇಲ್ಲಿನ ಶಾಸಕರು ಹೊಂದಿಲ್ಲ ಸುಮಾರು 15 20 ವರ್ಷಗಳ ಹಿಂದೆ ಎ ಸಂಸದರು ತಮ್ಮ ಸಂಬಂಧಿಕರ ಜಮೀನನ್ನು ಖರೀದಿಗೆ ಪಡೆದಿರುವುದು ದಾಖಲಾತಿಯಿಂದ ತಿಳಿಯುತ್ತದೆ ಶಾಸಕನಾಗುವ ಮೊದಲೇ ಸಂಸದರು ಕಾಲೇಜು ಹಾಗೂ ತೋಟಗಳನ್ನು ಹೊಂದಿದ್ದು ಅದಕ್ಕೆ ದಾಖಲಾತಿಗಳನ್ನು ಒದಗಿಸಿರುತ್ತಾರೆ ಕೇವಲ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಬೇರೆಯವರನ್ನು ನಿಂದಿಸುವುದು ಸರಿಯಲ್ಲ ಇದೇ ರೀತಿ ಜೆಡಿಎಸ್ ನಿಂದ ಉಚ್ಛಾಟಿತ ಶಾಸಕ ಶ್ರೀನಿವಾಸರವರು ಬಿಜೆಪಿ ಕಾರ್ಯಕರ್ತರ ಬಗ್ಗೆ ಇನ್ನು ಮುಂದೆ ಎಚ್ಚರದಿಂದ ಮಾತನಾಡಬೇಕೆಂದು ತಿಳಿಸಿದರು ಭಾರತೀಯ ಜನತಾ ಪಕ್ಷದ ತಾಲ್ಲೂ ಘಟಕದ ಅಧ್ಯಕ್ಷ ಬಿಎಸ್ ಪಂಚಾಕ್ಷರಿ ಮಾತನಾಡಿ ಬಗರು ಹುಕುಂ ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಕೂತಿದ್ದಾರೆ ಅವರು ಕೇಳಿದ ಪ್ರಶ್ನೆಗಳಿಗೆ ಶಾಸಕರು ಸಮಂಜಸ ಉತ್ತರ ನೀಡದೆ ತಮ್ಮ ಹಿಂಬಾಲಕರನ್ನು ಬಗರ್ ಹುಕುಂ ಸಭೆಗೆ ಕರೆತಂದು ಗೊಂದಲ ಮೂಡಿಸುವ ಪ್ರಯತ್ನದಲ್ಲಿದ್ದು ಇದರಿಂದ ಸಮಿತಿಯ ಸದಸ್ಯರುಗಳು ತಮ್ಮ ಸಹಿಗಳನ್ನು ಹಾಕದೆ ಸಭೆಯಿಂದ ಆಚೆ ಬಂದಿದ್ದಾರೆ ಇದನ್ನೇ ಬಂಡವಾಳವಾಗಿಸಿಕೊಂಡ ಶಾಸಕ ಸಭೆಗೆ ಬಂದಂತಹ ರೈತರುಗಳನ್ನು ಎತ್ತಿ ಕಟ್ಟಿ ಭಾರತೀಯ ಜನತಾ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಘನತೆಗೆ ತಕ್ಕದ್ದಲ್ಲ ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡುವುದನ್ನು ಶಾಸಕರು ಕಲಿಯಲಿ ಎಂದು ತಿಳಿಸಿದರು ಸಭೆಯಲ್ಲಿ ಬಗರ್ ಹುಕುಂ ಸಮಿತಿಯ ನಾಮನಿರ್ದೇಶಕರುಗಳು ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರುಗಳು ಪ್ರಧಾನ ಕಾರ್ಯದರ್ಶಿ ಸತೀಶ್ ಹಾಗೂ ಮುಂತಾದವರಿದ್ದರು

(Visited 1 times, 1 visits today)