ತುಮಕೂರು


ಸಮಾನತೆಯ ಸಮಾಜ ಕಟ್ಟುವ ಕನಸು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರದಾಗಿತ್ತು. ಮಾನವೀಯ ಮೌಲ್ಯಗಳ ಶಿಕ್ಷಣದಿಂದಷ್ಟೇ ಸಮಾನತೆ ಬೆಳೆದು ದೇಶ ಕಟ್ಟಲು ಸಾಧ್ಯವಾಗುವುದು ಎಂದು ನಂಬಿದ್ದರು. ನ್ಯಾಯ ಮಾರ್ಗದಲ್ಲಿ ನಡೆದರೆ ಗೆಲುವು ಖಂಡಿತ ಎಂಬುದು ಬೋಸರ ಧ್ಯೇಯೋದ್ದೇಶವಾಗಿತ್ತು ಎಂದು ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾಧ್ಯಕ್ಷೆ ಅಶ್ವಿನಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಮಂತ ವಕೀಲರ ಮಗನಾಗಿ, ಸಾಧಾರಣ ಬದುಕು ನಡೆಸಿದ ಬೋಸ್, ಭಾರತದ ಪ್ರತಿಯೊಬ್ಬ ಪ್ರಜೆಗೂ ಪ್ರೇರಣೆ. ಸಮಾನತೆಯ ದೇಶ ಕಟ್ಟುವ ಕನಸನ್ನು ನನಸಾಗಿಸುವಲ್ಲಿ, ಭಾರತ ಸ್ವತಂತ್ರ ರಾಷ್ಟ್ರವಾಗುವ ಹೋರಾಟದಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಸಾಲು ಸೇರಿದರು. ಅಧ್ಯಾತ್ಮಿಕ ಚಿಂತನೆಗಳು, ಹೋರಾಟ ಮನೋಭಾವಕ್ಕೆ ಪ್ರೇರಣೆಯಾಗಿ ಸ್ವಾಮಿ ವಿವೇಕಾನಂದರ ಜೀವನಾದರ್ಶವನ್ನು ಪಾಲಿಸಿ ಯಶ್ವಸ್ವಿಯಾದರು ಎಂದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಕಲಿಯಬೇಕು. ದೇಶದ ಒಡಕಿಗೆ ಕಾರಣವಾಗದೆ, ಸದೃಢ ರಾಷ್ಟ್ರ ಕಟ್ಟುವ ಸಮಾಜಮುಖಿ ಕನಸು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗಲೇ ಬದುಕು ಸಾರ್ಥಕ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಾಂಸ್ಕøತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ. ಎಸ್. ಶಿವಣ್ಣ, ವಿದ್ಯಾರ್ಥಿಗಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸದಾ ಪ್ರೇರಣೆ. ಅವರ ಬದುಕೇ ಬಲಿಷ್ಠ ಸಮಾಜ ಕಟ್ಟಲು ಕನ್ನಡಿ ಎಂದರು.
ಕ್ರಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರೇಣುಕಾ ಎಚ್. ಆರ್., ಶ್ರೀ ಹನುಮಯ್ಯ ಎಲ್. ಭಾಗವಹಿಸಿದ್ದರು.

(Visited 4 times, 1 visits today)