ಗುಬ್ಬಿ
ತಾಲೂಕಿನ ಎಲ್ಲಾ ಬೂತ್ ಗಳಲ್ಲಿಯೂ ಹಾಗೂ ಮನೆಗಳಿಗೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಜನವರಿ 21ರಿಂದ 29ರ ವರೆಗೆ ಮಾಡಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರವು ನೂರಾರು ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದು ಅವೆಲ್ಲವನ್ನು ಸಹ ಪ್ರತಿಯೊಂದು ಮನೆಗೆ ಮುಟ್ಟಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುತ್ತಾರೆ ಈ ವಿಜಯ ಸಂಕಲ್ಪ ಅಭಿಯಾನದಲ್ಲಿ ಹೆಚ್ಚಿನ ಕಾರ್ಯಕರ್ತರು ಮುಖಂಡರು ಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೈರಪ್ಪ ಮಾತನಾಡಿ ಈಗಾಗಲೇ ಬಿಜೆಪಿ ಪಕ್ಷವು ಹಲವು ರೀತಿಯ ಯೋಜನೆಗಳನ್ನು ಮಾಡಿ ಅದನ್ನು ಜನರಿಗೆ ನೇರವಾಗಿ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ, ವಿಜಯ ಸಂಪರ್ಕ ಅಭಿಯಾನ ಮಾಡುವ ಮೂಲಕ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಪೆÇ್ರೀತ್ಸಾಹಿಸುವ ಮತ್ತು ಬೂತ್ ಗೆಲ್ಲುವ ಕಾರ್ಯಕ್ಕೆ ಮುಂದಾಗಿದ್ದೇವೆ ಈಗ ವಿಜಯ ಸಂಕಲ್ಪ ಅಭಿಯಾನ ಮಾಡುವ ಮೂಲಕ ಪ್ರತಿ ಮನೆಗೆ ಜನರ ಬಳಿಗೆ ಹೋಗಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಜಿಎನ್ ಬೆಟ್ಟಸ್ವಾಮಿ ಮಾತನಾಡಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಮೇಲೆ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಕಂಕಣಕಟ್ಟಿ ನಿಂತಿದೆ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ನೀಡುವ ಮೂಲಕ ಶಿಕ್ಷಣ,ಉದ್ಯೋಗ ಸೇರಿದಂತೆ ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಹಾಗಾಗಿ ಈ ಬಾರಿ ಹಿಂದುಳಿದ ಸಮುದಾಯಗಳು ನಮ್ಮ ಜೊತೆ ಸಾಗುತ್ತಿವೆ ಎಂದು ತಿಳಿಸಿದರು.
ಮುಖಂಡ ಚಂದ್ರಶೇಖರ ಬಾಬು ಮಾತನಾಡಿ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯೇ ಮೂಲ ಮಂತ್ರವಾಗಿದ್ದು ಭೇಟಿ ಪಡಾವೋ ಬೇಟಿ ಬಚಾವೋ, ಉಜ್ವಲ್ ಯೋಜನೆ, ಪಿಎಂ ಕೇರ್ ನಂತಹ ನೂರಾರು ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಮತ್ತು ವಿಜಯ ಸಂಕಲ್ಪ ಅಭಿಯಾನದ ಮೂಲಕ ಪ್ರತಿ ಮನೆಗೆ ಬಿಜೆಪಿಯ ಯೋಜನೆಗಳು ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೈರಪ್ಪ ಮಾತನಾಡಿ ಈಗಾಗಲೇ ಬಿಜೆಪಿ ಪಕ್ಷವು ಹಲವು ರೀತಿಯ ಯೋಜನೆಗಳನ್ನು ಮಾಡಿ ಅದನ್ನು ಜನರಿಗೆ ನೇರವಾಗಿ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ ವಿಜಯ ಸಂಪರ್ಕ ಅಭಿಯಾನ ಮಾಡುವ ಮೂಲಕ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಪೆÇ್ರೀತ್ಸಾಹಿಸುವ ಮತ್ತು ಬೂತ್ ಗೆಲ್ಲುವ ಕಾರ್ಯಕ್ಕೆ ಮುಂದಾಗಿದ್ದವು ಈಗ ವಿಜಯ ಸಂಕಲ್ಪ ಅಭಿಯಾನ ಮಾಡುವ ಮೂಲಕ ಪ್ರತಿ ಮನೆಗೆ ಜನರ ಬಳಿಗೆ ಹೋಗಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ಟಿ. ಭೈರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್. ಪಂಚಾಕ್ಷರಿ, ಮುಖಂಡರಾದ ಜಿ.ಎನ್.ಬೆಟ್ಟ ಸ್ವಾಮಿ, ಎಸ್. ಡಿ. ದಿಲೀಪ್ ಕುಮಾರ್, ಪಿ ಬಿ ಚಂದ್ರಶೇಖರ್ ಬಾಬು, ಲೋಕೇಶ್, ಕಾರೇಕುರ್ಚಿ ಸತೀಶ್, ಗಂಗಣ್ಣ, ಶ್ರೀಧರ್, ದಯಾನಂದ್ ಸಾಗರ್, ರಾಜಶೇಖರ್, ಸೇರಿದಂತೆ ಇನ್ನಿತರರು ಹಾಜರಿದ್ದರು .