ತುಮಕೂರು

ಯುವಜನರಲ್ಲಿ ನಾಯಕತ್ವ ಬೆಳೆಸುವುದು, ವ್ಯಕ್ತಿತ್ವ ನಿರ್ಮಾಣ ಮಾಡುವ ಮಹತ್ವದ ಉದ್ದೇಶ ಹೊಂದಿರುವ ಐ ಯಾಮ್ ಇಂಡಿಯಾ ಅರ್ಗನೈಜೇಷನ್ ಸಂಸ್ಥೆ, ಯುವಜನರ ಸಮಗ್ರ ವಿಕಾಸಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಐ ಯಾಮ್ ಇಂಡಿಯಾದ ಸಂಚಾಲಕ ಹೆಚ್.ಎನ್.ಚಂದ್ರಶೇಖರ್ ತಿಳಿಸಿದ್ದಾರೆ.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಮಾತನಾಡುತಿದ್ದ ಅವರು, ಯುವಜನರ ನೋವು, ನಲಿವುಗಳನ್ನು ಪ್ರತಿನಿಧಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಯುವಜನರಿಗೆ ಮತದಾನದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಕಾಲೇಜು ಯುವಕ, ಯುವತಿಯರನ್ನೇ ಕೇಂದ್ರವಾಗಿಟ್ಟುಕೊಂಡು ಬೀದಿ ನಾಟಕ,ನೃತ್ಯ ರೂಪಕ, ಮಾಹಿತಿ ವಿನಿಯಮಯ, ಸಂವಾದ, ಚರ್ಚಾ ಸ್ಪರ್ಧೆ ಮತ್ತಿತರರ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನ ನಡೆಸುತ್ತಿದೆ ಎಂದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಮತದಾನವನ್ನು ಎಲ್ಲರ ಹಕ್ಕು. ಆದರೆ ಯುವಕಜನರಲ್ಲಿ ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಮತದಾರರು ಇಂತಹದ್ದೇ ಪಕ್ಷಕ್ಕೆ ಮತ ಹಾಕಿ ಎಂಬ ಷರತ್ತು ಇಲ್ಲ.ಯುವಜನರು ಮತದಾನದಲ್ಲಿ ಪಾಲ್ಗೊಳ್ಳಲು ಪಕ್ಷದ ಆಯ್ಕೆ ನಿಮಗೆ ಬಿಟ್ಟಿದ್ದು,ತಾವೆಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಸಲಹೆ ನೀಡಿದರು. ಐ ಯಾಮ್ ಇಂಡಿಯಾ ಸಂಸ್ಥೆಯ ಆದಿತ್ಯ, ಹರ್ಷಿತ್, ನಿಖಿಲ್, ಚಿರಂತ್, ಚಿದಾನಂದ್, ಜೀವನ್, ಶ್ರೀದೇವಿ ಶಿಕ್ಷಣಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕ್ರ್,ಮಾನವಸಂಪನ್ಮೂಲ ಅಧಿಕಾರಿ ಎಂ.ಎಸ್.ಪಾಟೀಲ್,ಶ್ರೀಮತಿ ರೂಪ, ಡಾ.ನರೇಂದ್ರ ವಿಶ್ವನಾಥ್,ಡಾ.ಸಿ.ನಾಗರಾಜು, ಡಾ.ಎನ್.ಚಂದ್ರಶೇಖರ್, ಡಾ.ಪಿ.ಜೆ.ಸದಾಶಿವಯ್ಯ, ಡಾ.ದಿನೇಶ್ ಉಪಸ್ಥಿತರಿದ್ದರು.

(Visited 1 times, 1 visits today)