ಕೊರಟಗೆರೆ
ದೇಶಕಂಡ ಪುಣ್ಯಕ್ಷೇತ್ರ ಲಕ್ಷಾಂತರ ಮಂದಿ ಭಕ್ತರಿಗೆ ದಿನಂಪ್ರತಿ ಉಚಿತವಾಗಿ ಅನ್ನ ದಾಸೋಹ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆ ಅವರು ಧಾರ್ಮಿಕ ಕಾರ್ಯಗಳಿಗೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ದಿನಂಪ್ರತಿ ಕೋಟ್ಯಾಂತರ ರೂ. ಅನುದಾನವನ್ನ ಬಿಡುಗಡೆಗೊಳಿಸುತ್ತಿದ್ದು ಗ್ರಾಮೀಣ ಭಾಗದ ದೇವಾಲಯಗಳ ಅಭಿವೃದ್ಧಿಗೆ ಸ್ಪಂಧಿಸುತ್ತಾ ಬಂದಿರುವುದು ಶ್ಲಾಘನೀಯ ವಾಗಿದ್ದು ಅದೇ ಮಾದರಿಯಲ್ಲಿ ಕೊರಟಗೆರೆ ತಾಲ್ಲೂಕಿನ ಹೊಳವನಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಶಕ್ತಿ ಕೇಂದ್ರ ಶ್ರೀ ಶಿವ ಮಹಾಲಕ್ಷ್ಮಿ ಆಂಜನೇಯ ಟ್ರಸ್ಟ್ ಗೆ ದೇವಸ್ಥಾನ ಜೀರ್ಣೋದ್ಧಾರಕ್ಕೆ 3 ಲಕ್ಷ ಅನುದಾನವನ್ನ ಚೆಕ್ ಮೂಲಕ ಕಳಿಸಲಾಗಿದ್ದು ಇದನ್ನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ದಿನೇಶ್ ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಡೆ ಅವರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಉದಾರವಾಗಿ ದಾನ ನೀಡಿದ್ದ ಚೇಕ್ ಅನ್ನು ಚಿಂಪುಗಾನಹಳ್ಳಿ ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮಿ ಶಿವ ಆಂಜನೇಯ ಸ್ವಾಮಿ ನವಗ್ರಹ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸಿ.ಎನ್. ಲಕ್ಷ್ಮಿ ಪ್ರಸಾದ್ ಗೆ ಹಸ್ತಾಂತರಿಸಿ ಧರ್ಮಾಧಿಕಾರಿಗಳು ನೀಡಿದ ದೇಣಿಗೆಯನ್ನು ಸದ್ಬಳಕೆ ಮಾಡಿಕೊಂಡು ದೇವಾಲಯವನ್ನು ಅಭಿವೃದ್ಧಿಗೊಳಿಸಬೇಕೆಂದು ಅವರು ಈ ವೇಳೆ ತಿಳಿಸಿದರು.
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕ್ ಅಧಿಕಾರಿ ಬಾಲಕೃಷ್ಣ ಮಾತನಾಡಿ ಶ್ರೀ ಕ್ಷೇತ್ರದಿಂದ ಧಾರ್ಮಿಕ ಶೈಕ್ಷಣಿಕ ವಲಯಕ್ಕೆ ಹೆಚ್ಚು ಆಸಕ್ತಿ ವಹಿಸಿದ್ದು ಆರೋಗ್ಯಕರ ಸಮಾಜಕ್ಕೆ ಶಿಕ್ಷಣ ಹಾಗೂ ಧಾರ್ಮಿಕ ಮಾರ್ಗದರ್ಶನದಿಂದ ಮಾತ್ರ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಧರ್ಮದರ್ಶಿ ಗಳಾದ ವೀರೇಂದ್ರ ಹೆಗಡೆ ಮನಸ್ಥಿತಿಯಾಗಿದ್ದು ಅದೇ ಮಾದರಿಯಲ್ಲಿ ಶ್ರೀ ಕ್ಷೇತ್ರದಿಂದ ಬರುವ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶ್ರೀ ಮಹಾಲಕ್ಷ್ಮಿ ಶಿವ ಆಂಜನೇಯ ಸ್ವಾಮಿ ನವಗ್ರಹ ಸೇವಾ ಟ್ರಸ್ಟ್ ಕಾರ್ಯದರ್ಶಿಗಳಾದ ಎಸ್ . ನಟರಾಜು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಧರ್ಮದರ್ಶಿಗಳಾದ ವೀರೇಂದ್ರ ಹೆಗಡೆಯವರು ನಿಜವಾಗಿಯೂ ಕಲಿಯುಗದ ಎರಡನೇ ನಡೆದಾಡುವ ದೇವರು ಎಂದರೆ ತಪ್ಪಾಗಲಾರದು ಇಡೀ ರಾಜ್ಯದಲ್ಲಿ ಧಾರ್ಮಿಕ, ಶೈಕ್ಷಣಿಕ , ಮಹಿಳಾ ಸಬಲೀಕರಣ ಜೊತೆಗೆ ರೈತರಿಗೆ ಆಸರೆಯಾಗುವ ಅನೇಕ ಯೋಜನೆಗಳನ್ನ ಜಾರಿಗೆ ತಂದು ಸಮಾಜಮುಖಿ ಕೆಲಸಗಳ ಜೊತೆಗೆ ಧಾರ್ಮಿಕ ಅಭಿವೃದ್ಧಿಗೆ ಅನೇಕ ದೇವಾಲಯಗಳಿಗೆ ಅನುದಾನ ಬಿಡುಗಡೆಗೊಳಿಸಿ ದೇವಸ್ಥಾನಗಳ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಇಂತಹ ಮಹಾನ್ ವ್ಯಕ್ತಿಗೆ ನಮ್ಮ ಟ್ರಸ್ಟ್ ಹಾಗೂ ಗ್ರಾಮಸ್ಥರು
ಚೀರರುಣಿಯಾಗಿದ್ದು ನಮ್ಮ ದೇವಾಲಯವನ್ನು ಉನ್ನತೀಕರಿಸಲು ಸಹಾಯ ಮಾಡಿರುವ ಇವರಿಗೆ ಅನಂತ ಅನಂತ ಧನ್ಯವಾದಗಳು ಅರ್ಪಿಸುತ್ತಿದ್ದೇವೆ ಎಂದರು.
ಟ್ರಸ್ಟ್ ನ ಅಧ್ಯಕ್ಷರಾದ ಲಕ್ಷ್ಮೀ ಪ್ರಸಾದ್ ಮಾತನಾಡಿ ನಾಡಿನ ಸುಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಕೂಗಾಳತೆಯಲ್ಲಿರುವ ಈ ಸುಂದರ ಪರಿಸರದಲ್ಲಿ ದೇವಾಲಯ ನಿರ್ಮಿಸಲು ಭಗವಂತನ ಪ್ರೇರಣೆಯಾಗಿದ್ದು ಧರ್ಮಸ್ಥಳದ
ಧರ್ಮಾಧಿಕಾರಿಗಳು ಭಗವಂತನ ಸನ್ನಿದಾನ ಸ್ಥಾಪಿಸಲು ಸಹಕರಿಸಿದ್ದಾರೆ ಇನ್ನೂ ಸ್ಥಳೀಯವಾಗಿ ಅನೇಕ ರಾಜಕೀಯ ಜನಪ್ರತಿನಿಧಿಗಳು
ಉದ್ದಾರವಾಗಿ ಸಹಕಾರ ತೋರಿದ್ದು ದೇವರ ಕೆಲಸ ನಿರ್ಮಾಣ ಕಾರ್ಯ ಒಬ್ಬರಿಂದ ಸಾಧ್ಯವಿಲ್ಲದ್ದಾಗಿದ್ದು ಎಲ್ಲರೂ ಸೇರಿ ಭಗವಂತನ ಅವ ಕೃಪೆಗೆ ಪಾತ್ರರಾಗಬೇಕಾಗಿದ್ದು ಪುಣ್ಯಕ್ಷೇತ್ರ ದ ನಿರ್ಮಾಣಕ್ಕೆ ಸ್ಥಳೀಯ ಭಕ್ತಾಧಿಗಳು ದಾನಿಗಳು ದೇವಾಲಯಗಳ ನಿರ್ಮಾಣಕ್ಕೆ ಸಹಕಾರ ತೋರಬೇಕಾಗಿದೆ ಹಾಗಾಗಿ ಭಕ್ತರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಚಾಲುಕ್ಯ ಒಕ್ಕೂಟದ ಅಧ್ಯಕ್ಷರಾದ ಈರಮ್ಮ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನಂದಮ್ಮ, ತಾಲೂಕ್ ಆಡಳಿತ ಅಧಿಕಾರಿ ಬಾಲಕೃಷ್ಣ, ಅಧ್ಯಕ್ಷ ಲಕ್ಷ್ಮೀಪ್ರಸಾದ್, ಕ್ಯಾಮೇನಹಳ್ಳಿ ಗ್ರಾ.ಪಂ.ಪಿಡಿಓ
ಸಂತೋಷ್ ಸಿಂಗ್, ಗ್ರಾಪಂ ಸದಸ್ಯರಾದ ಸೌಮ್ಯ ಜಗದೀಶ್ , ಶಿವಕುಮಾರ್,
ಹರೀಶ್, ಕೃಷ್ಣ ನಟರಾಜು, ನಂಜುಂಡಯ್ಯ ,ಶಿವಕುಮಾರ ,ಹರೀಶ್ ,ಮನು, ಹನುಮಂತ್ ರಾಜು , ಊರಿನ ಮುಖಂಡರಾದ ಕೆಂಪಣ್ಣ ರಾಜಣ್ಣ, ಕಾಟಪ್ಪ ,ಶ್ರೀ ಕ್ಷೇತ್ರ ಧರ್ಮಸ್ಥಳ ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.