ತುಮಕೂರು


ಯಾವುದೋ ದಾಖಲೆ ಮಾಡಲು ಕೆಲಸ ಮಾಡುವುದು ಬೇಡ ನಾವು ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಕೆಲಸ ದಾಖಲೆ ಸೃಷ್ಟಿಸಲು ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಎಈಒ ಜನಾರ್ಧನ್ ನುಡಿದರು.
ತುಮಕೂರಿನಲ್ಲಿ ನಡೆದ ಏಷ್ಯಾ ಬುಕ್ ಆಪ್ ರೆಕಾರ್ಡ ಸರ್ಟಿಪಿಕೇಟ್ ವಿತರಣಾ ಸಮಾರಂಭದಲ್ಲಿ ಮಾಡನಾಡಿದ ಅವರು ಒಂದು ವರ್ಷದಿಂದ ಮಾಡಿದ ಆಯೋಚನೆ, ಯೋಜನೆಗಳ ಫಲವಾಗಿ ಕರ್ನಾಟಕದಾದ್ಯಂತ ಸುಮಾರು 253 ಶಾಲೆಗಳಲ್ಲಿ ಸುಮಾರು 60 ಸಾವಿರ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ನಿರ್ಧಾರ ಕೈಗೊಳ್ಳುವುದು ಹೇಗೆ? ಎಂಬ ವಿಷಯದ ಬಗ್ಗೆ ತರಬೇತಿ ಕೊಡಿಸಲಾಗಿದ್ದು, ಇದು ಏಷ್ಯಾ ಬುಕ್ ಆಪ್ ರೆಕಾರ್ಡನಲ್ಲಿ ದಾಖಲೆಯಾಗಿರುವುದು ಅತ್ಯಂತ ಸಂತೋಷದ ವಿಷಯ, ಈ ಯೋಜನೆಯ ಮಾರ್ಗದರ್ಶಕರಾದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಟಿ.ವಿ.ಎನ್ ಮೂರ್ತಿ ರವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿ ಈ ಯೋಜನೆಯು ಮುಂಬರುವ ಸಾವಿರಾರು ತರಬೇತಿಗಳಿಗೆ ಮಾದರಿಯಾಗುವುದು ಎಂಬ ಮಾತುಗಳನ್ನು ಆಡುತ್ತಾ “ಮನೋಬಲ” ತಂಡಕ್ಕೆ ಮತ್ತು ಭಾಗವಹಿಸಿದ ಎಲ್ಲಾ ತರಬೇತುದಾರರಿಗೆ ಮತ್ತು ಕೋ ಆರ್ಡಿನೇಟರ್ ಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಯೋಜನೆಯ ನಿರ್ದೇಶಕರಾದ ನಯನಾ ಜನಾರ್ಧನ್ ರವರಿಗೆ ವಿಶೇಷ ಧನ್ಯಾದಗಳನ್ನು ತಿಳಿಸಿದರು.
ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡಿ ಮಾತನಾಡಿದ ವಲಯ 14ರ 2023 ರ ವಲಯಾಧ್ಯಕ್ಷೆಯಾದ ಜೇಸಿ ಯಶಸ್ವಿನಿ ರವರು ಜನಾರ್ಧನ್ ರವರ ಈ ದಾಖಲೆ ನಿರ್ಮಿಸುವಂತಹ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳು ಸದಾ ಮುಂದುವರಿಯಲಿ ಎಂದು ಹೇಳಿದರು ಮತ್ತು ಈ ತಂಡದ ಕಾರ್ಯವು ಸರ್ವಕಾಲಿಕ ದಾಖಲೆಯಾಗಿದೆ ಎಂದರು.
ಹಲವಾರು ವರ್ಷಗಳಿಂದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಇದುವರೆಗೂ ಐದುವರೆ ಲಕ್ಷ ಜನರಿಗೆ ತರಬೇತು ನೀಡಿರುವ ಹಾಗೂ ಇಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಆಶ್ವಥರಾಮಯ್ಯ ರವರು ಮಾತನಾಡಿ ಯುವ ತರಬೇತುದಾರರು ಹೇಗೆ ವಿದ್ಯಾರ್ಥಿಗಳು ಹಾಗೂ ಜನರ ಮನಸ್ಸನ್ನು ಹತೋಟಿಯಲ್ಲಿಡಬೇಕೆಂಬ ಸಲಹೆಗಳನ್ನು ಪ್ರಾಸ ಪದಗಳನ್ನು ಉಪಯೋಗಿಸಿ ಆಕರ್ಷಿಣಿಯವಾಗಿ, ಅರ್ಥವಾಗುವಂತೆ ಮಾಡನಾಡುತ್ತಾ ಒಬ್ಬ ತರಬೇತುದಾರ ಕನಿಷ್ಠ ಒಂದು ಲಕ್ಷ ಜನರ ಜೀವನವನ್ನು ಬದಲಾಯಿಸಲು ಸಾಧ್ಯವಿದೆ ಹಾಗೂ ಯಾವುದೇ ತರಬೇತುದಾರನು ಕೂಡ ತಮ್ಮ ವಿಶಿಷ್ಟವಾದ ಸ್ವಭಾವ ಹಾಗೂ ಕಲೆಯಿಂದ ಜನರನ್ನು ಸುಲಭವಾಗಿ ತಲುಪಬಹುದೆಂಬ ಕಿವಿ ಮಾತು ಹೇಳಿದರು.

(Visited 5 times, 1 visits today)