ಕೊರಟಗೆರೆ
ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದ ಹಿನ್ನೆಲೆ…
ಮದುಗಿರಿ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಕೊರಟಗೆರೆ ತಹಸಿಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೆÇಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿಯಲ್ಲಿ ಸುಮಾರು 80 ವಯಸ್ಸಿನ ಕಾವಲಮ್ಮ ವೃದ್ದೆಗೆ ತಾನು ವಾಸಿಸುತ್ತಿದ್ದ ಮನೆಯನ್ನು ಅಜ್ಜಿಯ ಮೊಮ್ಮಗನೇ ಆದ ಮಾರುತಿ ಬಲವಂತವಾಗಿ ಮನೆಯಿಂದ ಅಜ್ಜಿಯನ್ನು ಹೊರ ಹಾಕಿದ್ದ ಇದನ್ನು ಗಮನಿಸಿದ ಅಧಿಕಾರಿಗಳು ಕಾನೂನಿನ ಪ್ರಕಾರ ಅಜ್ಜಿಗೆ ತನ್ನ ಮನೆಯನ್ನು ಹಿಂತಿರುಗಿಸಿ ಕೊಟ್ಟಿರುವ ಘಟನೆ ಕೊರಟಗೆರೆ ಪಟ್ಟಣದ ಮೂರನೇ ವಾರ್ಡಿನಲ್ಲಿ ನಡೆದಿದೆ..
ತಹಶೀಲ್ದಾರ್ ನರಸಿಂಮೂರ್ತಿ ಮಾತನಾಡಿ :- ಮಾನ್ಯ ಉಪವಿಭಾಗಾಧಿಕಾರಿಗಳ ಆದೇಶದಂತೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಲೇಟ್ ರಾಮಯ್ಯ ಎನ್ನುವವರನ್ನು ಮಾರುತಿ ಎನ್ನುವವರು ಬಲವಂತದಿಂದ ಮನೆಯಿಂದ ಹೊರ ಹಾಕಿದ್ದ ದೂರಿನ ಅನ್ವಯ ಮೇಲಾಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ದೆಯಾದ ಕಾವಲಮ್ಮನಿಗೆ ಇವರ ಮುಂದಿನ ಜೀವನವನ್ನು ಮನದಲ್ಲಿಟ್ಟುಕೊಂಡು ಕಾವಲಮ್ಮನಿಗೆ ಮನೆಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಹಿಂತಿರುಗಿಸಲಾಯಿತು
ವಯೋವೃದ್ದೆಯಾದ ಕಾವಲಮ್ಮ ಇನ್ನು ಮುಂದೆ ಸಂತೋಷದಿಂದ ತನ್ನ ಮನೆಯಲ್ಲಿ ವಾಸಿಸಬಹುದು ಎಂದು ತಿಳಿಸಿದರು…
ತನ್ನ ಮನೆಗೆ ಮರಳಿ ಬಂದ ಅಜ್ಜಿ ಕಾವಲಮ್ಮ ಮಾತನಾಡಿ.. ಯಾವಾಗಲೂ ತನ್ನ ಮೊಮ್ಮಗ ಮಾರುತಿ ನನಗೆ ಬಹಳ ತೊಂದರೆ ಕೊಟ್ಟು ಸದಾ ಹಿಂಸೆ ಕೊಡುತ್ತಿದ್ದ ನನ್ನ ಗಂಡ ನಾನು ಕಷ್ಟಪಟ್ಟು ಕೂಲಿ ನಾಲಿ ಮಾಡಿ ಕಟ್ಟಿಕೊಡ ಮನೆಯಿಂದ ನನ್ನನ್ನೇ ಹೊರಹಾಕಿದ ಎಷ್ಟು ಬಾರಿ ಹೇಳಿದರೂ ಕೇಳುತ್ತಿರಲಿಲ್ಲ ಇದೀಗ ಅಧಿಕಾರಿಗಳು ಬಂದು ನನ್ನ ಮನೆಯನ್ನು ನನಗೆ ಹಿಂತಿರುಗಿಸಿ ಕೊಟ್ಟಿದ್ದಾರೆ ತುಂಬಾ ಸಂತೋಷವಾಗಿದೆ ನನ್ನ ಮುಂದಿನ ಜೀವನವನ್ನು ಸಂತೋಷದಿಂದ ನನ್ನ ಮನೆಯಲ್ಲಿ ನಡೆಸುತ್ತೇನೆ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೆÇಲೀಸ್ ಇಲಾಖೆ ಅಧಿಕಾರಿಗಳಾದ ಎ ಎಸ್ ಐ ಧರ್ಮೆಗೌಡ ಸಿಬ್ಬಂದಿ ಮಲ್ಲೇಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಾದ ಆರ್ ಐ ಪ್ರತಾಪ್, ಪವನ್ ಕುಮಾರ್, ಬಸವರಾಜ್, ರಾಘವೇಂದ್ರ, ದೊಡ್ಡೇಗೌಡ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.
(Visited 5 times, 1 visits today)