ತುಮಕೂರು


ಭಾರತವು ಇಂದು ವಿಶ್ವದ ಗಮನವನ್ನು ಸೆಲೆಯುತ್ತಿದ್ದು, ವಿಶ್ವಗುರುವಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಯುವಕರು ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಿಕಟಪೂರ್ವ ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣ್ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇಂದು ಎಬಿವಿಪಿ ಆಯೋಜಿಸಿದ್ದ ತುಮಕೂರು ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಭಾರತವನ್ನು ಎಲ್ಲಾ ದೇಶಗಳು ಗೌರವದಿಂದ ನೋಡುತ್ತಿವೆ. ಇಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಮತ್ತು ಶೈಕ್ಷಣಿಕ ಉನ್ನತಿಯನ್ನು ಸಾಧಿಸಲು ಈ ದೇಶದ ಯುವ ಸಮುದಾಯವಾದ ವಿದ್ಯಾರ್ಥಿ ಸಮುದಾಯದ ಕೊಡುಗೆ ಅತ್ಯವಶ್ಯಕ ಎಂದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯತೆ ಬೆಳೆಸುವ ಎಬಿವಿಪಿಯು ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ನಿರಂತರ ಹೋರಾಟ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಯುವಕರಲ್ಲಿ ನಾಯಕತ್ವಗುಣ, ಹೋರಾಟದ ಮನೋಭಾವನೆಯನ್ನು ಬೆಳೆಸುತ್ತಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬೆಳ್ಳಾವೆಯ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಮಾತನಾಡಿ ವಿದ್ಯಾರ್ಥಿಗಳು ಸುಂಸ್ಕøತರಾಗಿ ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳುವಂತಾಗಬೇಕು. ಮೆಕಾಲೆ ಶಿಕ್ಷಣ ಪದ್ದತಿಯು ಭಾರತೀಯ ಮೌಲ್ಯಗಳನ್ನು ಈಗಾಗಲೇ ನಾಶಮಾಡಿದ್ದು ಸಮಾಜ ಸಂವೇದನೆಯನ್ನು ಕಳೆದುಕೊಂಡಿದೆ ಇದನ್ನು ಮರು ಸ್ಥಾಪಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು. ಮಕ್ಕಳು ದೇವರೆಂದು ಮೂವತ್ತು ವರ್ಷಗಳವರೆಗೆ ಎಲ್ಲವನ್ನು ಕೊಡಿಸಿ ತಂದೆ ತಾಯಿಯರು ನೋಡಿಕೊಳ್ಳುತ್ತಾರೆ. ಆದರೆ ವೃದ್ದಾಪ್ಯದಲ್ಲಿ ಅವರು ಮಕ್ಕಳಾಗುತ್ತಾರೆ, ಆ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳಲ್ಲಿ ಬೆಳೆಯಬೇಕು. ವೃದ್ದರಾದ ತಂದೆತಾಯಿಯನ್ನು ವೃದ್ದಾಶ್ರಮಗಳಿಗೆ ದೂಡುವುದು ಮನುಷ್ಯತ್ವವಲ್ಲ. ಎಬಿವಿಪಿಯು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಹಿರಿಯರನ್ನು ಗೌರವಿಸುವ ಗುಣ, ಅನ್ಯಾಯವನ್ನು ಪ್ರಶ್ನಿಸುವಂತಹ ಸಾಮಾಜಿಕ ಮೌಲ್ಯಗಳನ್ನು ಮತ್ತು ಸಂಸ್ಕಾರವನ್ನು ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಬಿವಿಪಿ ದಕ್ಷಿಣ ಪ್ರಾಂತ ಉಪಾಧ್ಯಕ್ಷರಾದ ಡಾ. ಎಂ.ವಿ. ಅಜಯ್ ಕುಮಾರ್ ಮಾತನಾಡಿ ಕೆಲವೇ ಅಧ್ಯಾಪಕರು ಮತ್ತು ವಿದ್ಯಾರ್ಥಿ ಸಮೂಹದಿಂದ ಆರಂಭವಾದ ವಿದ್ಯಾರ್ಥಿ ಪರಿಷತ್ ಇಂದು ಅತ್ಯಂತ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಪ್ರಪಂಚದ ಏಕೈಕ ವಿದ್ಯಾರ್ಥಿ ಸಂಘಟನೆಯಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಹೋರಾಟ ಮತ್ತು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ನಿರ್ಮಾಣ ಮಾಡಲು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರ ಪುನರ್‍ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಪ್ರದೀಪ್ ಕುಮಾರ್ ಮಾತನಾಡಿರು.
ಕಾರ್ಯಕ್ರಮದ ಪ್ರಾಸ್ತಾನಿಕ ನುಡಿಗಳನ್ನು ಜಿಲ್ಲಾ ಪ್ರಮುಖರಾದ ರವೀಂದ್ರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಅಧ್ಯಕ್ಷರಾದ ಪ್ರೊ. ಶ್ರೀನಿವಾಸರಾವ್, ಉಪಾಧ್ಯಕ್ಷರಾದ ಡಾ. ಪೃಥ್ವೀರಾಜ, ಜಿಲ್ಲಾ ಸಂಚಾಲಕರಾದ ಗಣೇಶ್, ಶ್ರೀನಿವಾಸ, ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಪುನೀತ್, ಮನೋಜ್, ನವ್ಯಶ್ರೀ, ಸ್ಪೂರ್ತಿ, ಗೀತಾ, ಅರ್ಪಿತಾ, ಕಲ್ಯಾಣ್ ಸೇದಿದಂತೆ ನಗರದ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

(Visited 5 times, 1 visits today)