ತುಮಕೂರು


ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಮತ್ತು ಪ್ರಗತಿ ರಥಕ್ಕೆ ಸಿದ್ದಗಂಗಾ ಮಠದಲ್ಲಿಂದು ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಚಾಲನೆ ನೀಡಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ರಥಯಾತ್ರೆ ಹಾಗೂ ವಿಜಯರಥಯಾತ್ರೆ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯಾದ್ಯಂತ ಈ ವಿಜಯ ರಥಯಾತ್ರೆ ನಡೆಯುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಸರ್ಕಾರದ ಸಾಧನಗಳ ಕುರಿತು ಜನರಿಗೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ದೊಡ್ಡ ಎಲ್.ಸಿ.ಡಿ. ಸ್ಕ್ರೀನ್ ಇರುವ ವಾಹನದ ಮೂಲಕ ಕಾರ್ಯಕರ್ತರು ಪ್ರತಿ ಬಡಾವಣೆ, ಮನಗೆ ತೆರಳಿ ಪಕ್ಷದ ಕರಪತ್ರ ಹಂಚುವ ಜತೆಗೆ, ಪ್ರಣಾಳಿಕೆಗೆ ಅಗತ್ಯ ಸಲಹೆ, ಸೂಚನೆಗಳನ್ನು ಪಡೆಯಲಿದ್ದಾರೆ ಎಂದರು.
ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಚಾಮರಾಜನಗರ ಜಿಲ್ಲೆ ಮಲೆಯ ಮಹದೇಶ್ವರ ದೇವಾಲಯದ ಆವರಣದಲ್ಲಿ ವಿಜಯ ಸಂಕಲ್ಪ ಮತ್ತು ವಿಜಯರಥಯಾತ್ರೆಗೆ ಚಾಲನೆ ನೀಡಿದ್ದಾರೆ. ನಾವು ಕೂಡ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಈ ರಥಯಾತ್ರೆಯನ್ನು ಆಯೋಜಿಸಿದ್ದೇವೆ. ಚುನಾವಣೆ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನೋಪಯೋಗಿ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವುದೇ ಇದರ ಹಿಂದಿನ ಉದ್ದೇಶ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಬಿಜೆಪಿಯ ಎಲ್ಲಾ ಮುಖಂಡರ ಸಮ್ಮುಖದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ನಗರದ ದೇವಮೂಲೆಯಾದ ದೇವರಾಯಪಟ್ಟಣದಿಂದ ವಿಜಯರಥಯಾತ್ರೆ ಆರಂಭವಾಗಿದೆ. ಇಂದು 35ನೇ ವಾರ್ಡಿನಲ್ಲಿ ಸಂಚರಿಸಲಿದೆ. ಮುಂದಿನ 25 ದಿನಗಳಲ್ಲಿ ನಗರದ 35 ವಾರ್ಡ್‍ಗಳ ಎಲ್ಲಾ ಬೂತ್‍ಗಳಿಗೂ ಈ ರಥಯಾತ್ರೆ ತಲುಪಲಿದೆ ಎಂದರು.
ಮಾರ್ಚ್ 1 ರಂದು ರಾಜ್ಯದ ನಾಲ್ಕು ಮೂಲೆಗಳಿಂದ ವಿಜಯ ರಥಯಾತ್ರೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ರಾಜನಾಥಸಿಂಗ್, ಅಮಿತ್ ಷಾ, ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರುಗಳು ಚಾಲನೆ ನೀಡಿದ್ದಾರೆ. ನಮ್ಮದು ಯಾವುದೇ ವೈಯುಕ್ತಿಕ ಇಲ್ಲ. ಎಲ್ಲವೂ ಪಕ್ಷದ ಕಾರ್ಯಕ್ರಮ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ದೇವರಾಯಪಟ್ಟಣದ ದೇವಮೂಲೆಯಾದ ಸಿದ್ದಿವಿನಾಯಕ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಗತಿ ರಥ ಯಾತ್ರೆಯೊಂದಿಗೆ ಪ್ರಚಾರ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ನಗರ ಮಂಡಲ ಅಧ್ಯಕ್ಷ ಹನುಮಂತರಾಜು, ನಗರಪಾಲಿಕೆಯ ಎಲ್ಲಾ ಕಾಪೆರ್Çೀರೇಟರ್ಸ್, ಯುವಮೋರ್ಚಾ ಕಾರ್ಯಕರ್ತರು, ಪಕ್ಷದ ಮುಖಂಡರುಗಳು ಭಾಗಿಯಾಗಿದ್ದರು.

(Visited 5 times, 1 visits today)