ತುಮಕೂರು


ಜ್ಞಾನಾರ್ಜನೆಯ ಜೊತೆಗೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ಯೋಜನೆ ತುಮಕೂರು ವಿಶ್ವವಿದ್ಯಾನಿಲಯವು ಕೈಗೊಂಡಿರುವುದು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳು ಅಳವಡಿಸಿಕೊಳ್ಳುವ ಮಾದರಿಯಾಗಿದೆ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯವು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಸಹಯೋಗದೊಂದಿಗೆ ಸೋಮವಾರ ಆಯೋಜಿದ್ದ ‘ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಭೋಜನ ಯೋಜನೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕಾದರೆ ವಿದ್ಯೆಯ ಜೊತೆಗೆ ಆರೋಗ್ಯವೂ ಮುಖ್ಯ. ಪೌಷ್ಠಿಕಾಂಶಯುತ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ಈ ಯೋಜನೆಯು ಸ್ಥಳೀಯ ಆಹಾರ ಪದ್ಧತಿಯನ್ನು ಬಳಸಿಕೊಂಡು ರೈತರನ್ನು ಪೆÇ್ರೀತ್ಸಾಹಿಸುವಂತಾಗಬೇಕು ಎಂದು ಹೇಳಿದರು.
ತುಮಕೂರು ವಿವಿ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಸ್ವಾಗತನುಡಿಗಳನ್ನಾಡಿ, ವಿದ್ಯಾಭ್ಯಾಸದ ಜೊತೆಗೆ ಆಹಾರ ನೀಡುವಂಥ ಶಕ್ತಿ ನಮ್ಮ ವಿವಿಗೆ ದೊರೆತಿರುವುದು ಭಾಗ್ಯವೇ ಸರಿ. ಸಾವಿರದ ಐನೂರು ವಿಧ್ಯಾರ್ಥಿಗಳಿಗೆ ಸತ್ವಭರಿತ ಆಹಾರ ನೀಡುವುದಕ್ಕೆ ಕೈಜೋಡಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಮಾತನಾಡಿ, ಕೃμÁ್ಣರಾಜ ಒಡೆಯರ್ ಆಳಿದ ನಾಡಿನಲ್ಲಿ ಇಂದು ಅನ್ನ ಸೇವೆ, ಜ್ಞಾನ ಸೇವೆಗೆ ಕೊರತೆಯೇ ಇಲ್ಲದಂತಾಗಿರುವುದು ನಮ್ಮ ಪುಣ್ಯ. ವಿವೇಕಾನಂದರು ಬಯಸಿದ ಯುವಜನತೆ ತುಮಕೂರು ವಿವಿಯಲ್ಲಿ ತಯಾರಾಗುತ್ತಿರುವುದು ದೇಶವೇ ತಿರುಗಿನೋಡುವ ಸಂಗತಿ. ಈ ಯೋಜನೆ ಭಾರತದಲ್ಲಿ ಮೊಟ್ಟಮೊದಲ ಪ್ರಯೋಗ ಎಂದರು.
ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್. ಸಂತೋμï ಹೆಗ್ಡೆ ಮಾತನಾಡಿ, ನಾಡು ಸಮೃದ್ಧಿಯಿಂದ ಇರಬೇಕಾದರೆ ಉಳ್ಳವರ ಕೊಡುಗೆಯ ಅಗತ್ಯವಿದೆ. ಮಾನವೀಯತೆಯ ಅಂಶಗಳಿಗೆ ಸಾಕ್ಷಿಯಾಗಿ ಬಂದಿರುವ ಈ ಯೋಜನೆ ಮಧ್ಯಾಹ್ನದ ಊಟಕ್ಕಷ್ಟೇ ಸೀಮಿತವಾಗಬಾರದು. ಹಿರಿಯರು ಕಟ್ಟಿರುವ ಸಮಾಜದಲ್ಲಿ ಮೌಲ್ಯಯುತ ಬದುಕುನ್ನು ನಿರೂಪಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ರತ್ನಕಲಾ ಮಾತನಾಡಿ, ಪೆÇೀಷಕರಿಗೆ, ಶಿಕ್ಷಕರಿಗೆ ಮತ್ತು ನಮ್ಮ ದೇಶಕ್ಕೆ ಕೊಡುಗೆಯನ್ನು ನೀಡಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಅನ್ನ ಜ್ಞಾನ ನೀಡುವಷ್ಟು ಪ್ರತಿಯೊಬ್ಬರೂ ಶಕ್ತರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್. ನಾಗಣ್ಣ, ಹೆಚ್. ಜಿ. ಚಂದ್ರಶೇಖರ್, ಆರ್. ಎಲ್. ರಮೇಶ್ ಬಾಬು, ನಟರಾಜ ಶೆಟ್ಟಿ ಬಿ. ಆರ್., ತಲ್ಲಂ ಬಾಬು, ಲಕ್ಷ್ಮಿ ತಲ್ಲಂ, ಸುಬ್ರಮಣ್ಯ ಶೆಟ್ಟಿ ಹಾಗೂ ಮುಂತಾದ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜóಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಭಾಗವಹಿಸಿದ್ದರು.

(Visited 7 times, 1 visits today)