ತುಮಕೂರು


ಅನಾದಿಕಾಲದಿಂದಲೂ ಶ್ರೇಷ್ಠ ಜಂಗಮರೆ ಜೈನ ಮುನಿಗಳಾಗಿದ್ದಾರೆ ಎಂದು ಚಿಕ್ಕತೊಟ್ಲುಕೆರೆಯ ಆಟವೀ ಜಂಗಮ ಸುಕ್ಷೇತ್ರದ ಶ್ರೀ ಆಟವೀ ಶಿವಲಿಂಗ ಮಹಾಸ್ವಾಮೀಜಿ ಹೇಳಿದರು.
ಮಂದಾರಗಿರಿ (ಬಸ್ತಿಬೆಟ್ಟ)ಯಲ್ಲಿ ನಡೆಯುತ್ತಿರುವ ಶ್ರೀ ದಿವ್ಯಾಕಾಶ ಸಮವಸರಣ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿಗಂಬರ ಜೈನ ಮುನಿಗಳು ಎಲ್ಲೆಲ್ಲಿ ಕುಳಿತು ಧರ್ಮೋ ಪದೇಶ ಮಾಡುತ್ತಾರೆಯೋ ಅದೇ ಮಠ ವಾಗಿ ಪರಿವರ್ತನೆಗೊಳ್ಳುತ್ತದೆ. ಅವರು ಎಲ್ಲೆಲ್ಲಿ ಪಾದಸ್ಪರ್ಶ ಮಾಡುತ್ತಾರೆಯೋ ಅದೇ ಒಂದು ಪುಣ್ಯಕ್ಷೇತ್ರವಾಗಿ ರೂಪಾಂತರಗೊಳ್ಳುತ್ತದೆ ಎಂದು ವಿಶ್ಲೇಷಣೆ ಮಾಡಿದರು.
ನಾವು ಯಾರೂ ಕೈಲಾಸವನ್ನೂ ಇದುವರೆಗೂ ನೋಡಿಲ್ಲ ಆದ್ರೆ ಇಂದು ಮಂದಾರಗಿರಿಯಲ್ಲಿ ನೋಡಬಹುದಾಗಿದೆ. ಪರ್ವತದ ಮೇಲೆ ಇರುವ ಮಹಾವೀರ ತೀರ್ಥಂಕರ ದಿವ್ಯಾಕಾಶ ಸಮವಸರಣದಲ್ಲಿ ಕಾಣಬಹುದಾಗಿದೆ. ಸಮವಸರಣದಲ್ಲಿ ಸರಸ್ವತಿ ಹಾಗೂ ಲಕ್ಷ್ಮಿ ಪೂಜೆಯನ್ನು ಸಹ ನೋಡಬಹುದಾಗಿದೆ ಎಂದು ಹೇಳಿದರು.
ಭೂಮಿಯ ಮೇಲೆ ಸಲ್ಲುವವರು ಭೂಲೋಕದಿಂದ ಹೊರಗೆ ಹೋದವರು ಅಲ್ಲಿಯೂ ಕೂಡ ಸಲ್ಲುವವರು ಎಂದು ಹೇಳಿದರು.
ಮಂದಾರ ಗಿರಿಯು ನಿಸರ್ಗದ ಕೈಲಾಸದಂತೆ ಭಾಸವಾಗುತ್ತದೆ.
ಈ ದೇಹವು ಆತ್ಮದ ದೇವಾಲಯವಾಗಿದೆ. ಅದನ್ನು ಶ್ರದ್ದಾ ಭಕ್ತಿಯಿಂದ ನಾವು ಕಾಪಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಅದು ಕಾಪೆರ್Çರೇಷನ್ ಡಬ್ಬಿಯಾಗಲಿದೆ ಎಂದರು.
ಆತ್ಮನಿಗೆ ಕಲ್ಯಾಣ ಮಾಡುವುದೇ ಅದು ಸಮವಸರಣದ ಕಲ್ಯಾಣ ಮಹೋತ್ಸವವಾಗಿದೆ. ಜೈನ ಧರ್ಮದಲ್ಲಿ ಸತ್ಯ, ಶುದ್ಧ, ಕಾಯಕ ದಾಸೋಹ ಪ್ರಮುಖವಾದುದಾಗಿದೆ. ಲಿಂಗಾಯತ ಧರ್ಮದಲ್ಲಿಯೂ ಕೂಡ ಚತುರ್ವಿಧಕ್ಕೇ ಪ್ರಮುಖ ಸ್ಥಾನ ನೀಡಲಾಗಿದೆ ಎಂದರು.
ದಯಯೇ ಧರ್ಮದ ಮೂಲವಯ್ಯ ಎಂಬ ಬುನಾದಿಯೊಂದಿಗೆ ಜೈನ ಧರ್ಮ ಹಾಗೂ ಲಿಂಗಾಯತ ಧರ್ಮ ನಿಂತಿವೆ ಎಂದರು.
ಕಾರ್ತಿಕ ಮಾಸ ಎಂಬುದು ಜೈನ ಮಹಾರಾಣಿ ಕಾರ್ತಿಕೇಯಿಂದ ಚಾಲನೆ ದೊರೆತಿದ್ದು. ಅದನ್ನು ಪ್ರಸ್ತುತ ಸಮಾಜದ ಎಲ್ಲ ಧರ್ಮೀಯರು ಪಾಲಿಸುತ್ತಿದ್ದಾರೆ. ಜೈನ ಜಂಗಮ ಎರಡಕ್ಕೂ ಅನ್ಯೋನ್ಯ ಸಂಬಂಧವಿದೆ ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಮೂಡಬಿದರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿದರು.ತುಮಲ್ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಹಾಲು ಒಕ್ಕೂಟದಿಂದ ಮಹೋತ್ಸವ ಯಶಸ್ವಿಗೆ ಸರ್ವ ರೀತಿಯಲ್ಲಿಯೂ ಸಹಕಾರ ನೀಡಿದ್ದೇವೆ. ಇನ್ನಷ್ಟು ಸಹಕಾರ ನೀಡಲು ಸಿದ್ದರಿದ್ದೇವೆ. ಧಾರ್ಮಿಕ ಕಾರ್ಯಗಳು ಸುಲಲಿತವಾಗಿ ನಡೆದರೆ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಶ್ರೀ ಅಮರ ಕೀರ್ತಿ ಮಹಾರಾಜ್ ಸಾನಿಧ್ಯ ವಹಿಸಿದ್ದರು. ಕಾರ್ಕಳ ದ ಜೈನ ಮಠದ ಲಲಿತ ಕೀರ್ತಿ ಭಟ್ಟರಕ ಸ್ವಾಮೀಜಿ, ಮುಂಬಯಿಯ ರಾಕೇಶ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಅರ್ ಜೇ ಸುರೇಶ್, ಮಾಜಿ ಸಚಿವ ಅಭಯ್ ಚಂದ್ರ ಜೈನ್, ಧರ್ಮ ಸ್ಥಳದ ಸುರೇಂದ್ರ ಕುಮಾರ್, ಮೂಡಬಿದರೆ ಜೈನ್ ಮಠದ ಶ್ರೀ ಸ್ವಾಮೀಜಿ, ಜೈನ್ ಭವನ ನಿರ್ದೇಶಕ ವಿನಯ, ಮಹಾನಗರ ಪಾಲಿಕೆ ಸದಸ್ಯರಾದ ಗಿರಿಜಾ ಧನ್ಯಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಟಿ ಬೀ ಶೇಖರ್, ದಾ. ನೀರಜಾ ನಾಗೇಂದ್ರ ಕುಮಾರ್, ಸಾಹಿತಿ ಪದ್ಮಪ್ರಸಾದ್, ಬಿಜೆಪಿ ಮುಖಂಡ ಧನಿಯಾಕುಮಾರ್ ಹಾಜರಿದ್ದರು. ಶ್ರೀ ದಿಗಂಬರ ಜೈನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ್ ಮಂದಿರ ಸಮಿತಿ ಅಧ್ಯಕ್ಷ ಎಸ್ ಜೇ ನಾಗರಾಜ್ ಸ್ವಾಗತಿಸಿದರು. ಪೂಜ್ಯ ಮೋಹನ್ ಪ್ರಾರ್ಥಿಸಿದರು. ಕುಮುದ ನಿರೂಪಿಸಿದರು. ಆರ್ ಜೇ ಸುರೇಶ್ ವಂದಿಸಿದರು.

(Visited 9 times, 1 visits today)