ತುಮಕೂರು
ದೇಶವನ್ನು ಹಿಂದೂ, ಮುಸ್ಲಿಂ ಎಂದು ವಿಭಾಗ ಮಾಡಿದ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಯಾತ್ರೆ ಹಾಗು ಪ್ರಜಾಧÀ್ವನಿ ಕಾರ್ಯಕ್ರಮ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಸುರೇಶ್ ಗೌಡ ಎರಡು ಬಾರಿ ಶಾಸಕರಾಗಿ ಜನರಿಗೆ ಸ್ಪಂದಿಸಿ ದೀನ ದಲಿತರ ಪರ ಕೆಲಸ ಮಾಡುತ್ತಿದ್ದಾರೆ. ಬೇರೆ ಪಕ್ಷದವರು ಈಗ ಪಂಚತಂತ್ರ ಯಾತ್ರೆ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಆದರೆ ದೇಶದ ಜನರಿಗೆ ಗೊತ್ತಿದೆ. ಹಾಗಾಗಿ ಜನರ ನಾಡಿಮಿಡಿತ ಅರಿತು ಕೆಲಸ ಮಾಡುತ್ತಿರುವ ಬಿಜೆಪಿ ಯನ್ನು ರಾಜ್ಯದಲ್ಲಿ ಜನರು ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ 09 ವರ್ಷಗಳಲ್ಲಿ ಅತ್ಯಂತ ನಿಕೃಷ್ಟಕ್ಕೆ ಒಳಗಾದ ಸಮುದಾಯಗಳಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡಿದೆ. ಜಿಲ್ಲೆಯ ಡಾ.ಸೂಲಗಿತ್ತಿ ನರಸಮ್ಮ, ಕೋಲಾರ ಜಿಲ್ಲೆಯ ತಮಟೆ ಮುನಿವೆಂಕಟಪ್ಪ ಇಂತಹವರು ನಾಡಿಗೆ ಪರಿಚಯವಾಗಿದ್ದು ಬಿಜೆಪಿ ಕಾಲದಲ್ಲಿ ,ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು ಸಹ ಬಿಜೆಪಿಯೇ ,ದಲಿತರ ಬಗ್ಗೆ ಕಾಂಗ್ರೆಸ್ ಪಕ್ಷದ್ದು ಕೇವಲ ಮೊಸಳೆ ಕಣ್ಣೀರು ಎಂದು ಕೆಂದ್ರ ಸಚಿವ ಎ.ನಾರಾಯಣಸ್ವಾಮಿ ಹರಿಹಾಯ್ದರು
ಬಡವರ ಬಗ್ಗೆ ಕಾಳಜಿ ಹೊಂದಿರುವ ಬಿಜೆಪಿ ಅವರಿಗೆ ಗುಣಮಟ್ಟದ ಶಿಕ್ಷಣ,ಆರೋಗ್ಯ ದೊರೆಯಬೇಕೆಂಬ ಉದ್ದೇಶದಿಂದ ಆಯುಷ್ಮಾನ್ ಭಾರತ್ ಕಾರ್ಡು, ಮನೆ, ಶೌಚಾಲಯ,ಕೃಷಿ ಮಹಿಳೆಯರಿಗೆ ಮಾಸಿಕ ತಲಾ ಒಂದು ಸಾವಿರ ರೂ,ಎಸ್ಸಿ,ಎಸ್ಟಿ ಮೀಸಲಾತಿಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಇನ್ನು ಆನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.ಹಾಗಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮತ ಕೇಳುವ ನೈತಿಕ ಹಕ್ಕು ಬಿಜೆಪಿ ಪಕ್ಷಕ್ಕೆ ಇದೆ. ಮುಂದಿನ ದಿನಗಳಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವುದು ಶತಸಿದ್ದ ಎಂದು ಸಚಿವರು ನುಡಿದರು
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ಅವರು ಕ್ಷೇತ್ರದ ಅಭಿವೃದ್ದಿಗೆ ನಿರಂತರ ಹೋರಾಟ ನಡೆಸಿದ್ದಾರೆ. ಕ್ಷೇತ್ರದ ನೀರಾವರಿ, ಶಾಲೆಗಳ ಅಭಿವೃದ್ದಿ, ರಸ್ತೆ, ಕುಡಿಯುವ ನೀರು, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಅದೇರೀತಿ ಕ್ಷೇತ್ರದಲ್ಲಿ ಹೆಚ್ಚು ದಲಿತರನ್ನು ರಾಜಕೀಯ ಕ್ಷೇತ್ರದಲ್ಲಿ ಬೆಳಸಿರುತ್ತಾರೆ.ದಲಿತರ ಕಾಲೋನಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರನ್ನು ಮತ್ತೊಂದು ಬಾರಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಬಿಜೆಪಿ ಪಕ್ಷ ನೀಡಿದ ಕೊಡುಗೆ ಅಪಾರ,ಸುರೇಶಗೌಡ ಅನುಭವವುಳ್ಳ ರಾಜಕಾರಣಿ ಅವರ ಸೇವೆ ನಿಮಗೆ ದಕ್ಕಬೇಕೆಂದರೆ ತಾವೆಲ್ಲರೂ ಮತ್ತೊಂದು ಬಾರಿ ಅವರಿಗೆ ಶಾಸಕರಾಗಲು ಮತ ನೀಡುವಂತೆ ಕೋರಿದರು ಅದೇರೀತಿ ಕ್ಷೇತ್ರದಲ್ಲಿ ಈಗಲೂ ಸಹ ಕಾಲಿಗೆ ಚಕ್ರಕಟ್ಟಿಕೊಂಡು ಬಡವರು ಶೋಷಿತರ ಪರ ಕೆಲಸ ಮಾಡುತ್ತಿರು ಪ್ರಮುಖ ರಲ್ಲಿ ಇವರು ಒಬ್ಬರು ಹಾಗಾಗಿ ಇವರ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಮಾಜಿ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ,ಕಳೆದ ಒಂದು ತಿಂಗಳಿನಿಂದ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ನನ್ನ 10 ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರತಿ ಎಸ್ ಸಿ ಕಾಲೋನಿಗೂ ಸಿ.ಸಿ.ರಸ್ತೆ, ಚರಂಡಿ, ಪಕ್ಕಾ ಮನೆ,ಕುಡಿಯಲು ನೀರು,ಹೊಲಗದ್ದೆಗಳಿಗೆ ಹೊಗಲು ರಸ್ತೆ,ಬಡವರ ಮಕ್ಕಳಿಗೆ ಶಾಲೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೆನೆ.ಮುಂದೆಯು ನಿಮ್ಮ ಅಭಿವೃದ್ಧಿಗೆ ಶ್ರಮಿಸಲಿದ್ದೆನೆ. ನಾನೆನಾದರು ತಪ್ಪು ಮಾಡಿದ್ದರೆ ಕ್ಷಮೀಸಿ ಮತನೀಡುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಹೆಬ್ಬಾಕ ರವಿಶಂಕರ್,ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಸಮಾವೇಶ ನಡೆಸುತ್ತಿದೆ.,ಎಲ್ಲಾ ವರ್ಗಗಳಿಗೆ ಪ್ರಾದ್ಯಾನತೆ ನೀಡಿದೆ.ಇದಕ್ಕೆ ಎ.ನಾರಾಯಣಸ್ವಾಮಿ ಅವರು ಮಂತ್ರಿಯಾಗಿ ರುವುದೆ ಸಾಕ್ಷಿ ಎಂದರು ಅಯುಷ್ಮಾನ್ ಭಾರತ್ ನಿಂದ ಬಡವರಿಗೆ ಗುಣಮಟ್ಟದ ಚಿಕ್ಸಿತೆದೊರೆಯುತ್ತಿದ್ದು, ಬಂದುಗಳೆ ತುಮಕೂರು ಗ್ರಾಮಾಂತರ ದಿಂದ ಹೆಚ್ಚು ಬಹುಮತದಿಂದ ಸುರೇಶ್ ಗೌಡರ ಗೆಲುವು ಆರಂಭವಾಗಲಿದೆ ಎಂದರು.
ವೇದಿಕೆಯಲ್ಲಿ, ಶಾಸಕ ಜಿ.ಬಿ.ಜೋತಿ ಗಣೇಶ್, ಚಲವಾದಿ ಮಹಾ ಸಭಾ ರಾಜ್ಯಾಧ್ಯಕ್ಷ ಕೆ.ಶಿವರಾಂ, ಬಿಜೆಪಿ ಅಧ್ಯಕ್ಷ ರವಿ ಶಂಕರ್ ಹೆಬ್ಬಾಕ, ಶ್ರೀ ಮತಿ ಶಾರದ,ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ
ನರಸಿಂಹಮೂರ್ತಿ, ಹೆಚ್.ವಿ.ವೆಂಕಟೇಶ, ವೈ.ಹೆಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ಮಾಸ್ತಿಗೌಡ, ಡಾ.ಲಕ್ಷ್ಮಿಕಾಂತ್, ಗಂಗಾಂಜನೇಯ್ಯ ದೊಡ್ಡೇರಿ ವೆಂಕಟೇಶ್, ರಾಜುಗೌಡ, ಉಮೇಶ್ ಗೌಡ, ವೆಂಕಟೇಶ್, ರಘುನಾಥ್, ಅರೆಕೆರೆ ರವೀಶ್, ರಾಮಚಂದ್ರಪ್ಪ, ಶಂಕರ್, ರಮೇಶ್ ಯಲ್ಲಾಪುರ, ಅಂಜನಪ್ಪ, ಪಾಪಣ್ಣ, ವೈ.ಟಿ.ನಾಗರಾಜು. ಅನಿತಾ ಸಿದ್ದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.