ಗುಬ್ಬಿ
ತಾಲೂಕಿನ ನಿಟ್ಟೂರು ಹೋಬಳಿ ಶ್ರೀ ಗಂಗಾಕ್ಷೇತ್ರದಲ್ಲಿ ಇನ್ನೂರಕ್ಕೂ ಹೆಚ್ಚು ಜನ ರೈತರು ಸಭೆ ಸೇರಿ ಈ ಭಾಗಕ್ಕೆ ಎಂವಿಎಸ್‍ಎಸ್ ಮಾಡಿಕೊಡಲೇಬೇಕು ಎಂದು ಆಗ್ರಹಿಸಿ ಸಭೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ತಾತಯ್ಯ ಇಈ ಭಾಗದ ನಂದಿಹಳ್ಳಿ, ದೊಣ್ಣೆರೆ, ಡಿ.ರಾಂಪುರ, ಅತ್ತಿಕಟ್ಟೆ, ಬಿ ಕೋಡಿಹಳ್ಳಿ, ಬೆಣ್ಣೂರು, ಗಂಗಸಂದ್ರ, ಸೇರಿದಂತೆ ಸುಮಾರು 20 ಗ್ರಾಮಗಳ ರೈತರಿಗೆ ಅನುಕೂಲ ವಾಗುವಂತಹ ಕೆಇಬಿ ಸ್ಟೇಷನ್ ಮಂಜೂರಾಗಿದೆ ಇಲಾಖೆಯವರು ಸಹ ಕೆಲಸವನ್ನು ಪ್ರಾರಂಭಿಸಲು ಸಿದ್ಧತೆಯನ್ನು ಮಾಡಿದ್ದಾರೆ ಆದರೆ ಸ್ಥಳೀಯ ರೈತರೊಬ್ಬರೂ ನಿಗದಿ ಮಾಡಿರುವ ಜಾಗ ನಮ್ಮದು ಎಂದು ಉಚ್ಚ ನ್ಯಾಯಾಲಯಕ್ಕೆ ಹೋಗಿರುವ ಕಾರಣದಿಂದಾಗಿ ಹಲವು ªಷರ್Àಗಳಿಂದ ನೆನಗುದಿಗೆ ಬಿದ್ದಿದೆ ಹಾಗಾಗಿ ಈ ಭಾಗದ ರೈತರೆಲ್ಲರು ಸೇರಿಕೊಂಡು ಕೂಡಲೇ ನ್ಯಾಯಾಲಯದಲ್ಲಿರುವಂತಹ ಪ್ರಕರಣವನ್ನು ತೆರವು ಗೊಳಿಸಿ ನಮಗೆ ಇಲ್ಲಿಗೆ ಸ್ಟೇಷÀನ್ ಮಾಡಿ ಕೊಡಬೇಕು ಹಾಗಾಗಿ ಸರ್ಕಾರ ಈ ವಿಚಾರದಲ್ಲಿ ಸಹಕಾರ ಮಾಡಿ ಕೊಡಬೇಕು ಎಂದು ಅಗ್ರಹ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮುರುಳಿಧರ್ ಹಾಲಪ್ಪ ಮಾತನಾಡಿ ಕೆಪಿಟಿಸಿಎಲ್ ನಿಂದ 10 ವ?ರ್Àದ ಹಿಂದೆ ವಿದ್ಯುತ್ ಸಬ್ ಸ್ಟೇಷÀನ್ ಮಾಡುವುದಕ್ಕೆ ಸರ್ಕಾರ ಮುಂದಾಗಿತ್ತು ಆದರೆ ಇಲ್ಲಿನ ರೈತರು ನ್ಯಾಯಾಲಯಕ್ಕೆ ಹೋಗಿರುವ ಕಾರಣ ಆ ರೈತನಿಗೂ ಅನ್ಯಾಯವಾಗದಂತೆ ಅವರಿಗೂ ಪರಿಹಾರವನ್ನು ನೀಡಿ ಇಲ್ಲಿನ ಸಮಸ್ಯೆ ಬಗೆಹರಿಸಿದರೆ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ತ್ರೀ ಫೇಸ್ ವಿದ್ಯುತ್ ಈ ಭಾಗದಲ್ಲಿ ಸಿಗುವುದರಿಂದ ರೈತ ಬಾಂಧವರಿಗೆ ಅನುಕೂಲವಾಗುತ್ತದೆ ಹಾಗಾಗಿ ನಾವೆಲ್ಲರೂ ಸೇರಿ ಚರ್ಚೆ ಮಾಡಿದ್ದು ಬೆಸ್ಕಾಂ ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನ್ಯಾಯಾಲಯ ಪ್ರಕರಣ ತೆರವು ಗೊಳಿಸಿ ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಎರಡು ಎಕರೆ ಜಾಗದಲ್ಲಿ ಸರ್ಕಾರ ಕೆ ಇ ಬಿ ಸ್ಟೇ?Àನ್ ಮಾಡಬೇಕು ಎಂದು ನಿರ್ಧಾರ ಮಾಡಿ ಎಲ್ಲಾ ರೀತಿಯ ಯೋಜನೆಯನ್ನು ರೂಪಿಸಿದೆ ಆದರೆ ಸ್ಥಳೀಯರೋಬ್ಬರು ನ್ಯಾಯಾಲಯದ ಮರೆ ಹೋಗಿರುವುದರಿಂದ ಸಮಸ್ಯೆಯಾಗಿದ್ದು ಇಲ್ಲಿಗೆ ಕೆಇಬಿ ಸ್ಟೇಷÀನ್ ನೀಡದೆ ಹೋದಲ್ಲಿ ಈ ಭಾಗದ ರೈತರಿಗೆ ಸಾಕ?À್ಟು ಸಮಸ್ಯೆಯಾಗುತ್ತದೆ ಹಾಗಾಗಿ ಎಲ್ಲಾ ರೈತರು ಸೇರಿಕೊಂಡು ಈ ಸಮಸ್ಯೆ ಬಗ್ಗೆ ಹರಿಸಿ ಈ ಭಾಗಕ್ಕೆ ಸ್ಟೇ?Àನ್ ಮಾಡಿಕೊಡಬೇಕು ಎಂಬುದು ಎಲ್ಲರ ಆಗ್ರಹವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಮಾತನಾಡಿ ಇಲ್ಲಿರುವಂತಹ ಜಾಗ ಸರ್ಕಾರಿ ಜಾಗವಾಗಿದೆ ಹಾಗಾಗಿ ಸರ್ಕಾರ ಇಲ್ಲಿಗೆ ಯೋಜನೆಯನ್ನು ಹಿಂದೆ ರೂಪಿಸಿದೆ ಆದರೆ ಒಬ್ಬ ರೈತರು ಈ ಭಾಗದಲ್ಲಿ ಸಾಕ?À್ಟು ದಿನಗಳಿಂದ ಉಳುಮೆ ಮಾಡಿದ್ದು ನಮಗೆ ಸೇರಬೇಕು ಎಂದು ಸರ್ಕಾರಕ್ಕೆ ಅರ್ಜಿ ಹಾಕಿ ರುವ ಕಾರಣ ಅವರಿಗೆ ಬರಬೇಕು ಎಂದು ತಿಳಿಸಿದ್ದಾರೆ ಹಾಗಾಗಿ ಆ ರೈತರು ಇಲ್ಲಿ ತೋಟ ಅಥವಾ ಮರ ಗಿಡಗಳನ್ನು ಬೆಳೆಸಿದ್ದಲ್ಲಿ ಅವುಗಳಿಗೆ ಅನುಕೂಲ ಮಾಡಿಕೊಡುವಂತಹ ಕೆಲಸವನ್ನು ಸಹ ಸರ್ಕಾರ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ, ಸದಸ್ಯ ರಾಜ ಶೇಖರ್, ಕೆ. ಟಿ ಸ್ವಾಮಿ,ರೈತ ರಾದ ಶಿವಶಂಕರ್,ರೇವಣ ಸಿದ್ದಯ್ಯ,ಸತೀಶ್,ಭರತ್ ಗೌಡ,ಭರತ್, ಸೇರಿದಂತೆ ನೂರಾರುರೈತರು ಹಾಜರಿದ್ದರು.