ಚಿಕ್ಕನಾಯಕನಹಳ್ಳಿ
ತಾಲೂಕಿನ ವ್ಯಾಪ್ತಿಯಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಕೆಲವು ಕಾಮಗಾರಿಗಳು ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಪೂರ್ಣಗೊಳ್ಳದೆ ಉದ್ಘಾಟನೆಗೆ ಸನ್ಮಾನ್ಯ ಮುಖ್ಯಮಂತ್ರಿ ಅವರು ಹಾಗೂ ಆಗಮಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ತಾಲೂಕಿನ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಸಾಸಲುನಲ್ಲಿ ನಿರ್ಮಾಣಗೊಂಡು ಉದ್ಘಾಟನೆ ಕೂಡ ಆಗಿರುವ ಕಟ್ಟಡ ಕಳೆದ ಬಾರಿ ಮಳೆಯ ಒತ್ತಡಕ್ಕೆ ತತ್ತರಿಸಿ ಶಿಥಿಲವಾಗಿದ್ದರೂ ಅಂತಹ ಕಟ್ಟಡವನ್ನು ಮತ್ತೆ ಮುಖ್ಯಮಂತ್ರಿ ಉದ್ಘಾಟನೆಗೆ ಕಾಮಗಾರಿಗಳ ಪಟ್ಟಿಯಲ್ಲಿ ಸೇರಿರುವುದು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟಿದೆ ಅಲ್ಲದೆ ಸುಮಾರು 15 ಕೋಟಿ ವೆಚ್ಚದ ನಿರ್ಮಾಣಗೊಳ್ಳುತ್ತಿರುವ ಆಡಳಿತ ಸೌಧ ಪೂರ್ಣ ಪ್ರಮಾಣದಲ್ಲಿ ಕಟ್ಟಡ ಕಾಮಗಾರಿ ಮುಗಿಯದೆ ಏಕಾ ಏಕೆ ಉದ್ಘಾಟನೆಗೆ ಮುಂದಾಗಿರುವುದು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಕಾರಣ ಆಡಳಿತ ಸೌಧ ಇನ್ನೂ ಆರು ತಿಂಗಳಾದರೂ ಕಟ್ಟಡ ಪೂರ್ಣಗೊಳ್ಳಲು ಅವಧಿ ಬೇಕಾಗುತ್ತದೆ ಹೀಗಿರುವಾಗ ಚುನಾವಣೆ ಸಮೀಪಿಸುತ್ತಿದ್ದು ನೀತಿ ಸಂಹಿತೆ ಜರೂರು ಬರುವ ಕಾರಣದಿಂದ ಉದ್ಘಾಟನೆ ಮಾಡಲಾಗದು ಎಂಬ ಕಾರಣಕ್ಕಾಗಿ ಸಚಿವರ ನಾಮಫಲಕ ಬೀಳಬೇಕು ಎಂಬ ಕಾರಣಕ್ಕಾಗಿಯೇ ತುರ್ತಾಗಿ ಉದ್ಘಾಟನೆಗೆ ಮುಂದಾಗಿದ್ದಾರೆ ಎಂಬ ಕೆಲವರ ಅಭಿಪ್ರಾಯವಿದ್ದರೆ ಇನ್ನು ಕೆಲವರು ಸಚಿವರು ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಆದರೆ ಅವರಿಗೆ ಸೋಲುವ ಭೀತಿ ಉಂಟಾಗಿರಬಹುದು ಏನೋ ಹೀಗಾಗಿ ನನ್ನ ಅವಧಿಯಲ್ಲಿಯೇ ಉದ್ಘಾಟನೆ ಗೊಂಡರೆ ನನ್ನ ಹೆಸರು ದಾಖಲಾಗುತ್ತದೆ ಎಂಬ ಕಾರಣಕ್ಕಾಗಿಯೇ ಈ ಉದ್ಘಾಟನೆ ಇರಬಹುದೇನೋ ಎಂದು ಕೆಲವರು ಟಿ ಅಂಗಡಿಗಳಲ್ಲಿ ಹಳ್ಳಿ ಕಟ್ಟೆಗಳಲ್ಲಿ ಮಾತನಾಡುವ ಸಂಗತಿ ಹೆಚ್ಚಾಗಿದೆ
ಅದೇನೇ ಇರಲಿ ತಾಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಎಸ್ ಆರ್ ಬೊಮ್ಮೈ ಬರುತ್ತಿರುವುದು ತಾಲೂಕಿನ ಭಾಗ್ಯವೇ ಸರಿ ಇದರಿಂದಾಗಿ ರಸ್ತೆಗಳ ಗುಂಡಿಗಳು ಮುಚ್ಚಿ ಸರಗವಾಗುವ ಸ್ಥಿತಿ ನಿರ್ಮಾಣವಾಗಿರುವುದು ಶ್ಲಾಘನೀಯ.