ಗುಬ್ಬಿ
ಶಾಸಕ ಶ್ರೀನಿವಾಸ್ ಎಲ್ಲ ಸಮುದಾಯಗಳ ನಾಯಕನಾಗಿದ್ದು ಅವರು ಎಲ್ಲಿಗೆ ಯಾವ ಪಕ್ಷಕ್ಕೆ ತೆರಳಿದರು ನಾವೆಲ್ಲರೂ ಜೊತೆಯಾಗಿ ನಿಲ್ಲುತ್ತೇವೆ ಎಂದು ಮುಖಂಡ ಹೊಸಕೆರೆ ಬಾಬು ತಿಳಿಸಿದರು.
ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪರ್ವ ದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಮಾತನಾಡಿದ ಅವರು 20 ವರ್ಷಗಳ ಅವಧಿಯಲ್ಲಿ ನಮ್ಮ ಭಾಗಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ ಮುಂದೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷ ತಂದಿದ್ದು ಇಡೀ ತಾಲೂಕಿನ ಜನರ ಆಶೀರ್ವಾದ ಅವರ ಮೇಲಿದೆ ಎಂದು ತಿಳಿಸಿದರು.ಮುಖಂಡರಾಜು ಮಾತನಾಡಿ ಜಿಲ್ಲೆಯ ನಾಲ್ಕರಿಂದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕ ಶ್ರೀನಿವಾಸ್ ಅವರ ಶಕ್ತಿ ಏನೆಂಬುದು ಗೊತ್ತಿದೆ ಇಂದು ಜೆಡಿಎಸ್ ಪಕ್ಷ ಅವರನ್ನು ಕಳೆದುಕೊಳ್ಳುವ ಮೂಲಕ ಅನಾಥವಾಗಿದೆ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು
ಮುಖಂಡ ವೆಂಕಟೇಶ್ ಮಾತನಾಡಿ ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಸರಕಾರ ಬಂದಾಗ ನಿಂದ ಇಲ್ಲಿಯವರೆಗೂ ಯಾರು ಸಹ ನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿಲ್ಲ ಪ್ರತಿಯೊಂದು ವಸ್ತುವಿಗೂ ದರ ಹೆಚ್ಚುತ್ತಿದ್ದು ಜೀವನ ನಡೆಸುವುದೇ ದುಸ್ತರವಾಗಿದೆ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸತ್ಯ ಹಾಗೆಯೇ ಗುಬ್ಬಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಇಡೀ ತಾಲೂಕಿನ ಜನರು ಅವರ ಹಿಂದೆ ಕೆಲಸ ಮಾಡಲು ಭತ್ತ ರಾಗಿದ್ದಾರೆ ಈ ಭಾಗಕ್ಕೆ ನೀಡಬೇಕಿರುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಶಾಸಕ ಶ್ರೀನಿವಾಸ ನೀಡಿದ್ದು ಮತ್ತೊಮ್ಮೆ ಶಾಸಕರ ನ್ನು ಮಾಡುವಂತಹ ಹೊಣೆ ತಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಗುರು ರೇಣುಕಾರಾಧ್ಯ, ಸಂದೀಪ್, ಮೂರ್ತಿ, ಬಸವರಾಜು ಸೇರಿದಂತೆ ನೂರಾರು ಜನ ವಾಸಣ್ಣ ಅಭಿಮಾನಿಗಳು ಹಾಜರಿದ್ದರು.