ಚಿಕ್ಕನಾಯಕನಹಳ್ಳಿ


ಸ್ಥಳೀಯ ರೈತರ ಬೆಳೆದ ಬೆಳೆಗೆ ಸ್ಥಿರ ಬೆಲೆ ಸಿಗುವಂತೆ ಮಾಡುವಲ್ಲಿ ಜೆಡಿಎಸ್ ಪಕ್ಷ ಎಲ್ಲಾ ರೈತರಹಿತ ಕಾಯುತ್ತದೆ ರಾಜ್ಯದ ಮತದಾರರು ಕೂಡ ಜೆಡಿಎಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅವರು ತಾಲೂಕಿನ ಹಂದನಕೆರೆ ಹೋಬಳಿ ನಿರುವಗಲ್ಲು ದುರ್ಗಮ್ಮನ ಬೆಟ್ಟದ ತಪ್ಪಲಿನಲ್ಲಿ ಭಗೀರಥ ಸಮಾಜದ ಸಮಾವೇಶ ಹಾಗೂ ಯುವ ಜನತಾಳದಳದ ಸಮಾವೇಶವನ್ನು ಉದ್ಘಾಟಿಸಿ ನಟ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ಸ್ಥಳೀಯ ಪ್ರದೇಶಕ್ಕೆ ಅನುಗುಣವಾಗಿ ನಾನಾ ಸಮಸ್ಯೆಗಳು ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ ಅವುಗಳ ಮೂಲಭೂತ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಶೈಕ್ಷಣಿಕವಾಗಿ ಆರ್ಥಿಕವಾಗಿ ಎಲ್ಲಾ ಸಮುದಾಯಗಳಿಗೆ ನ್ಯಾಯಯುತ ಯೋಜನೆ ತರಬೇಕೆಂದೇ ಎಚ್ ಡಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಯನ್ನು ಅನುಷ್ಠಾನಗೊಳಿಸುವುದು ನನ್ನ ಕರ್ತವ್ಯ ಎಂದು ಏಕಾಂಗಿಯಾಗಿ ರಾಜ್ಯದ ತುಂಬೆಲ್ಲ ಓಡಾಡುತ್ತಿದ್ದಾರೆ.
ಮೊನ್ನೆ ನಡೆದ ಎರಡೂವರೆ ಲಕ್ಷ ರೂಪ್ಗಳ ಬಜೆಟ್ಟನ್ನು ಸರ್ಕಾರಕ್ಕೆ ನೀಡಿದ್ದೇವೆ ಸ್ವಾಮಿ ಎಲ್ಲಾ ಲೂಟಿಕೋರರ ಕೈಗೆ ಈ ಸರ್ಕಾರವನ್ನು ಕೊಟ್ಟಿದ್ದೇವೆ ಹಗರಣದಲ್ಲೇ ಮುಳುಗಿ ಹೋಗಿರುವ ಈ ಸರ್ಕಾರ ರೈತರ ಸಾಮಾನ್ಯ ಜನಪರ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ
ಸ್ಥಳೀಯ ಪ್ರದೇಶದಲ್ಲಿ ನಾ ರೈತರು ಬೆಳೆದ ಕೊಬ್ಬರಿಗೆ ಬೆಲೆ ಒಂಬತ್ತು ಸಾವಿರಕ್ಕೆ ಇಳಿದು ರೈತರು ಹೀನಾಯ ಸ್ಥಿತಿ ತಲುಪಿದ್ದಾರೆ ಈ ಸರ್ಕಾರಕ್ಕೆ ಕನಿಷ್ಠ ಜ್ಞಾನವು ಇಲ್ಲವಾಗಿ ರೈತರ ಬೆಳೆಗೆ ನಿಗದಿತ ಬೆಲೆ ನಿಗದಿ ಮಾಡುವಷ್ಟು ಸೌಜನ್ಯ ಈ ಸರ್ಕಾರಕ್ಕೆಲ್ಲವಾಗಿದ್ದು ನಮ್ಮ ಜೆಡಿಎಸ್ ಪಕ್ಷದ ಸರ್ಕಾರ ಬಂದರೆ ಕೊಬ್ಬರಿ ಬೆಲೆ 15000 ನಿಗದಿಪಡಿಸುವುದು ನಮ್ಮ ಕರ್ತವ್ಯವಾಗಿದೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 30 ಹಾಸಿಗೆ ಉಳ್ಳ ಹೈಟೆಕ್ ಆಸ್ಪತ್ರೆಯನ್ನು ನೀಡುವ ಮೂಲಕ ಉತ್ತಮ ಗುಣಮಟ್ಟದ ಶಾಲೆಗಳನ್ನು ತೆರೆಯುವ ಮೂಲಕ ಜನರ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು ಪ್ರತಿ ಜಿಲ್ಲೆಯ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸಲೆಂದೇ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಕಲ್ಪಿಸುವ ಕಾರ್ಯಕ್ಕೂ ಒತ್ತು ಕೊಡಬೇಕಾಗಿದೆ ಈ ಎಲ್ಲಾ ಅಂಶಗಳನ್ನು ನಮ್ಮ ಆದ್ಯ ಕರ್ತವ್ಯವಾಗಿದೆ ಹೀಗಾಗಿ ಕುಮಾರಣ್ಣ ಕಳೆದ 85 ದಿನಗಳಿಂದ ಪ್ರತಿನಿತ್ಯ ಎಂಬತ್ತರಿಂದ ನೂರು ಹಳ್ಳಿಗಳಿಗೆ ಪಂಚ ರತ್ನ ಯಾತ್ರೆಯ ಮೂಲಕ ಪ್ರತಿ ರೈತರ ಜನಸಾಮಾನ್ಯರ ಮನವರಿಕೆ ಮಾಡಿಕೊಡಲು ಕಟಿಬದ್ಧರಾಗಿ ಏಕಾಂಗಿಯಾಗಿ ಸುತ್ತುತ್ತಿದ್ದಾರೆ ಹೀಗಿರುವಾಗ ಕಲ್ಯಾಣ ಕರ್ನಾಟಕ ಕರಾವಳಿ ಕರ್ನಾಟಕ ಒಳನಾಡು ಕರ್ನಾಟಕ ಮಲೆನಾಡು ಕರ್ನಾಟಕ ಬಯಲು ಸೀಮೆ ಕರ್ನಾಟಕ ಈ ರೀತಿಯಾಗಿ ಅಲ್ಲಿನ ಸ್ಥಳಿಯ ಸಮಸ್ಯೆಗಳಿಗೆ ಅನುಗುಣವಾಗಿ ಪರಿಹಾರ ಕಂಡುಕೊಳ್ಳುವ ಕೆಲಸಕ್ಕೆ ಕುಮಾರಣ್ಣ ಮುಂದಾಗಿದ್ದಾರೆ ಹೀಗಿರುವಾಗ ರಾಜ್ಯದ ಜನತೆ ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ನಮ್ಮೆಲ್ಲರಿಗೂ ಅನ್ನ ನೀಡುವ ಅನ್ನದಾತನೆಯ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು ಕುಮಾರಣ್ಣ ಮುಂದಿನ ದಿನದಲ್ಲಿ ಮುಖ್ಯಮಂತ್ರಿಯಾದರೆ ಉಪಹಾರ ಸಮಾಜದ ನಿಗಮ ಮಂಡಳಿಗೆ ಸ್ಥಾಪನೆ ಮಾಡುವುದಾಗಿ ಭಗೀರಥ ಸಮಾವೇಶದ ಸಭೆಯಲ್ಲಿ ವಾಗ್ದಾನ ಮಾಡಿದರು
ಮಾಜಿ ಶಾಸಕ ಸಿ ಬಿ ಸುರೇಶ್ ಮಾತನಾಡುತ್ತಾ ಪಂಚರತ್ನ ಯೋಜನೆಯ ಅನುಷ್ಠಾನಕ್ಕೆ ನಾವೆಲ್ಲಾ ಸೇರಿದಂತೆ ಕುಮಾರಣ್ಣನ ಶಕ್ತಿಯಾಗಿ ಹೊರಹೊಮ್ಮಲು ಬೇಕಾಗಿದೆ ಅವರು ಮುಖ್ಯಮಂತ್ರಿ ಆದಾಗ ಯಾವುದೇ ಜಾತಿ ಧರ್ಮ ಯಾವುದನ್ನು ನೋಡದೆ ರಾಜ್ಯದ ರೈತರು ಎಂದು ತಿಳಿದು 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ಕುಮಾರಣ್ಣನಿಗೆ ಸಿಗುತ್ತದೆ ಮುಂದಿನ ದಿನದಲ್ಲಿ ಕುಮಾರಣ್ಣ ಮತ್ತೆ ಮುಖ್ಯಮಂತ್ರಿ ಆದರೆ ಶ್ರೀ ಶಕ್ತಿ ಸಂಘಕ್ಕೆ ಹತ್ತು ಎಕರೆಯವರಿಗೂ ಪ್ರತೀ ಎಕ್ಕರೆಗೆ 10 ಸಾವಿರದಂತೆ ಮುಂಗಾರು ಬೆಳಗಾಗಿ ಕೃಷಿ ಚಟುವಟಿಕೆ ತೊಡಗಿಸಿಕೊಳ್ಳಲೆಂದೆ ಬೀಜ ಗೊಬ್ಬರ ಇನ್ನಿತರೆ ಖರ್ಚಿ ಗಾಗಿ ತಲಾ ಪಾಣಿದಾರರಿಗೆ ಎಕರೆಗೆ 10,000 ನಂತೆ ನೀಡುವ ಬರವಸೆಯನ್ನು ಪಂಚ ರತ್ನ ಯೋಜನೆಯಲ್ಲಿ ಅಳವಡಿಸಿಕೊಂಡಿದ್ದಾರೆ ಹಾಗೆ 65 ವರ್ಷ ವಯೋವೃದ್ದರಿಗು ಕೂಡ 5000 ಪಿಂಚಣಿ ನೀಡುವ ಭರವಸೆಯನ್ನು ಅಳವಡಿಸಿಕೊಂಡಿದ್ದಾರೆ ಹೀಗಾಗಿ ರಾಜ್ಯದ ಜನರು ಇದಕ್ಕೆ ಮನಸ್ಸು ಮಾಡಬೇಕು ಎಂದರು
ಕಾರ್ಯಕ್ರಮದಲ್ಲಿ ಶಶಿಧರ್ ತಾಲೂಕ್ ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ ಜೀಪಂ ಮಾಜಿ ಸದಸ್ಯ ಜೈಪ್ರಕಾಶ್ ಶ್ರೀಹರ್ಷ ಗವಿರಂಗನಾಥ್ ಗೌಡಿ ಹನುಮಂತಯ್ಯ ಮಲ್ಲಿಕಾರ್ಜುನ್ ಮಂಜುನಾಥ್ ಪುಷ್ಪ ರೇಣುಕಮ್ಮ ಹೇಮಾವತಿ ಚೇತನ ಪುರಸಭಾ ಮಾಜಿ ಅಧ್ಯಕ್ಷ ಸಿಎಸ್ ರಮೇಶ್ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು ಸ್ವಾಗತ ರಾಮ್ದಾಸ್ ನೆರವೇರಿಸಿದರು

(Visited 7 times, 1 visits today)