ತುರುವೇಕೆರೆ
ಕಾಂಗ್ರೇಸ್ ಪಕ್ಷ ದೇಶದ ಎಲ್ಲ ಕಡೆಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಿದ್ದು ದಿವಾಳಿ ಹಂತಕ್ಕೆ ಹೋಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ವಿಜೆಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ನಮಗೆ ಸರಿ ಸಾಟಿ ಅಲ್ಲ, ದೇಶದ ಹಲವು ಕಡೆಗಳಲ್ಲಿ ನೆಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಿದೆ. ಕಾಂಗ್ರೆಸ್ ರಾಹುಲ್‍ಗಾಂದಿ ನಮ್ಮ ನಾಯಕ ಮೋದಿ ಮುಂದೆ ಯಾವ ಲೆಕ್ಕ, ದೇಶ ಭಕ್ತಯಾಗಿರುವ ಮೋದಿಜೀಯವರನ್ನು ಇಡೇ ಜಗತ್ತೇ ಕೊಂಡಾಡುತ್ತಿದೆ, 8 ವರ್ಷದಲ್ಲಿ ಅದಿಕಾರದ ಅವದಿಯಲ್ಲಿ 1 ದಿನ ವಿಶ್ರಾಂತಿ ಪಡೆಯದೆ ದೇಶದ ಅಬಿವೃದ್ದಿಗೆ ಕೆಲಸ ಮಾಡುತ್ತಿದ್ಧಾರೆ, ನಮಗೆ ಅವರೇ ಅದರ್ಶ ಅದನ್ನು ಕಾರ್ಯಕರ್ತರು ಮನದಲ್ಲಿ ಇಟ್ಟುಕೊಂಡು ದೇಶಕ್ಕೆ ಗೌರವ ಕೊಡುವಂತ ಕೆಲಸ ಮಾಡಬೇಕು ಎಂದು ನೀಡಿದರು.
ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ಮಸಾಲೆ ಇಲ್ಲದ ಮನೆಯಂತೆ ಎಲ್ಲ ಮನಸ್ಸಿನಲ್ಲಿಯೂ ಸಹ ಮಸಾಲಜಯರಾಮ್ ಇದ್ದಾರೆ. ಕೂಲಿ ಕೆಲಸ ಮಾಡಿದವರಿಗೆ ಕೂಲಿ ನೀಡುವುದು ದರ್ಮ, ಕ್ಷೇತ್ರದ ಕೆಲಸ ಮಾಡಿದವನಿಗೆ ಮತ ಹಾಕುವುದು ದರ್ಮ, ಕೆಲವರು ಹಣ ಮಾಡಲು ರಾಜಕೀಯಕ್ಕೆ ಬರುತ್ತಾರೆ, ಕೆಲವರು ಗಂಟು ಹೊಡೆದುಕೊಂಡು ಹೋಗುವವರು ಅಂತವರಿಗೆ ಮತ ನೀಡಬೇಡಿ. ಮಸಾಲಜಯರಾಮ್ ಕ್ಷೇತ್ರವನ್ನು ಒಳ್ಳೆಯ ಅಭಿವೃದ್ದಿ ಮಾಡಿದ್ದಾರೆ, ಕಳೆದ ಬಾರಿ 2000 ಲೀಡ್ ಈ ಬಾರಿ 20000 ಲೀಡ್ ನೀಡಬೇಕು ಎಂದರು.
ಶಾಸಕ ಮಸಾಲಜಯರಾಮ್ ಮಾತನಾಡಿ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಪಣ ತೊಟ್ಟು 1200 ಕೋಟಿ ಕೆಲಸ ಮಾಡಿದ್ದೇನೆ. ಬಿಎಸ್.ವೈರವರು ನೀಡಿದ ಹೆಚ್ಚಿನ ಅನುದಾನದಿಂದ ನನ್ನ ಕ್ಷೇತ್ರದ ಅಭಿವೃದ್ದಿಯಾಗಿದೆ ಎಂದು ಸ್ಮರಿಸುತ್ತಾ, ದೆಬ್ಬೇಗಟ್ಟ ಏತ ನೀರಾವರಿ, ತಾಲೂಕಿನ 150 ರಿಂದ 200 ಹಳ್ಳಿಗಳಲ್ಲಿ ಮಣ್ಣು ಮುಕ್ತ ಮಾಡಲಾಗಿದೆ. ಇನ್ನು ಹೆಚ್ಚಿನ ಕೆಲಸ ಮಾಡುತ್ತೇನೆ. ಇಂದಿನ ಕಾರ್ಯಕ್ರಮದಲ್ಲಿ 30ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಎಲ್ಲರನ್ನೂ ಸ್ವಾಗತ್ತಿಸಿದ್ದು ನಿಮಗೆ ಸಾಷ್ಟಾಂಗ ನಮನ ಸಲ್ಲಿಸುತ್ತಿದೇನೆ. ಚುನಾವಣೆ ಹತ್ತಿರ ಬಂದಿದೆ ಎಲ್ಲರೂ ಹೆಚ್ಚಿನ ಹೋರಾಟ ಮಾಡಿ ಮತ್ತೊಮ್ಮೆ ಶಾಸಕರನ್ನಾಗಿ ಮಾಡಿದೆ ನಿಮ್ಮ ಮನೆಯ ಮಗನಾಗಿ ಇನ್ನು ಅಭಿವೃದ್ದಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ವೈ.ಎ. ನಾರಾಯಣಸ್ವಾಮಿ, ಮಾಜಿ ಸಂಸದ ಮುದ್ದಹನಮೇಗೌಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿಕುಮಾರ್, ಉಪಾಧ್ಯಕ್ಷ ಕೆಂಪೇಗೌಡ, ತಾಲೂಕು ಅಧ್ಯಕ್ಷ ಮುತ್ತಣ್ಣ, ಪಟ್ಟಣ ಪಂಚಾಯಿತಿ ಅದ್ಯಕ್ಷ ಟಿ.ಕೆ.ಪ್ರಭಾಕರ್, ಉಪಾಧ್ಯಕ್ಷೆ ಶಿಲಾಶಿವಪ್ಪನಾಯಕ ಸೇರಿದಂತೆ ಸದಸ್ಯರು ಹಾಗೂ ಎಲ್ಲ ಮೋರ್ಚ ಅಧ್ಯಕ್ಷರುಗಳು ಇದ್ದರು.