ಚಿಕ್ಕನಾಯಕನಹಳ್ಳಿ
ಸರ್ಕಾರದಿಂದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಸಂಜೀವಿನಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರಿಗೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಅವರನ್ನು ಸ್ವ ಉದ್ಯೋಗ ಕಲ್ಪಿಸಿಕೊಟ್ಟಿರುವುದು ಸಂತೋಷದ ವಿಷಯ ಎಂದು ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.
ನಗರದಲ್ಲಿ ಗುರುವಾರದಂದು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲಾಭಿವೃದ್ಧಿ ಉದ್ಯೋಗಶೀಲತೆ ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ತಾಲ್ಲೂಕಿನ ತೀನಂಶ್ರೀ ಭವನದಲ್ಲಿ “ವಿಶೇಷ ಕೇಂದ್ರೀಯ ನೆರವು ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಸ್ತ್ರೀ ಸಾಮಥ್ರ್ಯ ಯೋಜನೆಯ ಪಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದಲ್ಲಿ ಬರುವ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಿರ್ವಹಣೆಗೆ ಪಾತ್ರರಾಗಿ ಎಂದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಸಂತ ಕುಮಾರ್ ಮಾತನಾಡಿ, ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಸಂಘದ ಎಲ್ಲಾ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಹಾಗೂ ಸದೃಢರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ತಾಲ್ಲೂಕು ಮಟ್ಟದ ಘಟಕದಿಂದ ಬ್ಯಾಂಕ್ ಗಳೊಂದಿಗೆ ಮಾತನಾಡಿ ಹೆಚ್ಚು ಸಾಲ ಸೌಲಭ್ಯಗಳನ್ನು ಕೊಡಿಸಲು ಮುಂದಾಗಿದ್ದೇವೆ. ಸೌಲಭ್ಯಗಳು ಯಾವುದೇ ಒಂದು ಭಾಗಕ್ಕೆ ಉಪಯೋಗವಾಗುವುದು ಬೇಡ ಎಂಬ ಉದ್ದೇಶದಿಂದ ಎಲ್ಲಾ ಪಂಚಾಯಿತಿಗಳಿಗೂ ಸಮಾನವಾದ ಸೌಲಭ್ಯಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ ಎಂದರು
ಕಾರ್ಯಕ್ರಮದಲ್ಲಿ ಸಚಿವರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಘದ ಮಹಿಳೆಯರಿಗೆ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ತಾಂತ್ರಿಕ ಸಂಯೋಜಕರು ವಿಜಯ್, ರವಿ, ರಮೇಶ್, ತಾಲ್ಲೂಕು ಐಇಸಿ ಸಂಯೋಜಕರಾದ ರಮ್ಯ ಕೆ.ಎಸ್, ವಲಯ ಮೇಲ್ವಿಚಾರಕರಾದ ಸುಬ್ಬರಾಯಪ್ಪ, ವಲಯ ಮೇಲ್ವಿಚಾರಕರಾದ ಯಮುನ ಟಿ.ವಿ, ಗ್ರಾಮ ಪಂಚಾಯಿತಿ ಒಕ್ಕೂಟ ಸಹಾಯಕಿ ಸಿಂಧು, ರುಕ್ಮಿಣಿ , ಎಂಬಿಕೆಗಳು, ತಾಲ್ಲೂಕಿನ ಎಲ್ಲಾ ಪಂಚಾಯಿತಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.