ಚಿಕ್ಕನಾಯಕನಹಳ್ಳಿ:

      ವಕೀಲರ ಸಮಸ್ಯೆ ನೀಗಿಸಲು ಸ್ಟಾಂಪ್ ತೆಗೆದು ಹಾಕುವ ಮೂಲಕ ಆನ್‍ಲೈನ್ ಮೂಲಕ ಮೊಬೈಲ್‍ನಲ್ಲಿ ಆಪ್ ರೀತಿಯಲ್ಲಿ ಪೇಮೆಂಟ್ ಮಾಡುವ ವ್ಯವಸ್ಥೆಗೆ ರಾಜ್ಯ ವಕೀಲರ ಪರಿಷತ್ ಚಿಂತನೆಯಲ್ಲಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಹೆಚ್. ಎಲ್ ವಿಶಾಲ್ ರಾಘು ತಿಳಿಸಿದರು.

      ಪಟ್ಟಣದ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರಿಗೆ ಆಯೋಜಿಸಿದ್ದ ಕಾನೂನು ಕಾರ್ಯಗಾರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ವಕೀಲರ ಪರಿಷತ್ ಸದಾ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ. ಹತ್ತು ಹಲವಾರು ವಕೀಲರ ಬೇಡಿಕೆಗೆ ಪರಿಷತ್ ಕೂಡ ಪೂರಕವಾಗಿ ಕೆಲಸ ಮಾಡಲು ಕಂಕಣ ಬದ್ದವಾಗಿದೆ ಈಗಾಗಲೇ ರಾಜ್ಯದ ನಾನಾ ಮೂಲಗಳಿಂದ ವಕೀಲರ ಸ್ಟಾಂಪ್‍ವೇಲ್‍ಪೇರ್ ಬಗ್ಗೆ ಇದ್ದ ಪ್ರಶ್ನೆಗೆ ಪೂರಕವಾಗಿ ಸ್ಟಾಂಫ್ ತೆಗೆದುಹಾಕುವಂತೆ ಇರುವ ಬೇಡಿಕೆಗೆ ಪೂರಕವಾಗಿ ಚರ್ಚೆ ನಡೆಯುತ್ತಿದ್ದು, ಆನ್‍ಲೈನ್ ಮೂಲಕವೇ ಪೇಮೆಂಟ್ ಮಾಡುವ ವ್ಯವಸ್ಥೆಯ ಮೂಲಕ ಗ್ರಾಮಾಂತರ ಪ್ರದೇಶದ ವಕೀಲರಿಗೂ ಅನುಕೂಲ ಆಗುವ ರೀತಿಯಲ್ಲಿ ಮೊಬೈಲ್ ಆಪ್ ತರುವ ಯೋಜನೆ ಮೂಲಕ ಪರಿಷತ್ ಜಾಗೃತವಾಗುತ್ತಿದೆ ವಕೀಲರ ಭದ್ರತೆಗಾಗಿ ಮರಣ ನಿಧಿಯಲ್ಲಿಂದ 20 ಲಕ್ಷದವರೆಗೆ ಯೋಜನೆ ಸೌಲಭ್ಯ ಸಿಗಲಿದೆ ಎಂದರು.

      ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್‍ಕುಮಾರ್ ಡಿ.ವಡಿಗೇರಿ ಮಾತನಾಡಿ 3 ದಿನದ ಈ ಕಾರ್ಯಗಾರದಲ್ಲಿ ವಕೀಲರು ತಿಳಿದಿದ್ದನ್ನು ನಮಗೆ ಪಾಠ ಮಾಡಬಹುದು ಲೋಕ ಆದಾಲತ್‍ಗೆ ಸ್ಟಾಂಪ್ ಇಮ್‍ಪ್ರೋವ್ ಮಾಡಿಕೊಳ್ಳುವಂತೆ ವಕೀಲರಿಗೆ ಸೂಚನೆ ನೀಡಿದರು ಯಾವುದೇ ವಕೀಲರ ಬಳಿ ಎಂತಹ ಪ್ರಕರಣಗಳೇ ಬಂದರೂ ಸಮರ್ಪಕ ಹಾಗೂ ಸಮಗ್ರವಾಗಿ ವಿವರಣೆ ತಿಳಿಯುವುದು ಅವುಗಳ ಬಗ್ಗೆ ಗುಣಾತ್ಮಕವಾದ ತಿಳುವಳಿಕೆನಿಟ್ಟುಕೊಂಡು ಕಾನೂನಿನ ಪರಿಮಿತಿಯಲ್ಲಿ ನ್ಯಾಯಾಧೀಶರ ಎದುರು ಸರಿಯಾದ ರೀತಿ ವಿವರಿಸುವ ಜಾಣ್ಮೆ ಹೊಂದಿರಬೇಕು ಎಂದರು.

      ಅಪರ ಸಿವಿಲ್ ಮತ್ತು ಜೆ.ಎಮ್,ಎಫ್.ಸಿ ನ್ಯಾಯಾಧೀಶ ಎನ್.ಕೃಷ್ಣಮೂರ್ತಿ ಮಾತನಾಡಿ ಕಾರ್ಯಗಾರಕ್ಕೆ ಕೇವಲ ವಕೀಲರು ಮಾತ್ರ ಸೀಮಿತವಲ್ಲ ನಮಗೂ ಅದರ ಅಗತ್ಯತೆ ಬಹಳಷ್ಟಿದೆ ಇಂತಹ ಕಾರ್ಯಗಾರದಲ್ಲಿ ಭಾಗವಹಿಸದೇ ಇರುವುದು ವಿಷಾಧನೀಯ ಮುಂದಿನ ದಿನಗಳಲ್ಲಿ ಇಂತಹ ಅವಕಾಶ ವಂಚಿತನಾಗುವುದಿಲ್ಲ ಕೆಲಸದ ಒತ್ತಡದ ನಡುವೆಯೂ ಕಾರ್ಯಗಾರದಲ್ಲಿ ಭಾಗವಹಿಸುತ್ತೇವೆ. ಇಂತಹ ಕಾರ್ಯಗಾರದಲ್ಲಿ ತಿಳಿದ ಅಂಶವನ್ನು ನಮಗೂ ತಿಳಿಸಿ ನ್ಯಾಯಾಧೀಶರಿಗೂ ಕಲಿಕೆ ನಿರಂತರವಾಗಿರುತ್ತದೆ ಇಂತಹ ಕಾರ್ಯಗಾರದ ಪ್ರಯೋಜನ ಪಡೆದು ವಕೀಲರು ವಾದ ಮಂಡಿಸುವಾಗ ಕಾನೂನು ಪರಿಕಲ್ಪನೆಯ ಅರ್ಥೈಸುವ ರೀತಿಯಲ್ಲಿ ಗುಣಾತ್ಮಕವಾಗಿರಬೇಕು ಆಗ ನಿಜವಾದ ತೀರ್ಪು ನೀಡಲು ನ್ಯಾಯಾಧೀಶರಿಗೂ ಸಹಕಾರಿಯಾಗುತ್ತದೆ ಎಂದರು.

      ಸಹಾಯ ಸರ್ಕಾರಿ ಅಭಿಯೋಜಕ ಮುನಿರಾಜು ಮಾತನಾಡಿ ಗುಣಾತ್ಮಕ ತೀರ್ಪು ಬರಬೇಕಾದರೆ ವಕೀಲರ ಮಹತ್ವದ್ದು, ನ್ಯಾಯಾಂಗದ ಇತಿಹಾಸದಲ್ಲಿ ಕೆಲವು ನ್ಯಾಯಾಧೀಶರನ್ನು ಇಂದಿಗೂ ನೆನಪಿಸಿಕೊಂಡು ಅವರ ತೀರ್ಪುಗಳನ್ನೇ ನಿರಂತರ ವಾಸ್ತವತೆಯ ಕೈಗನ್ನಡಿಯಂತೆ ನೋಡುತ್ತೇವೆ ನ್ಯಾಯಾಂಗದ ಘನತೆ ಉಳೀಯಬೇಕಾದರೆ ನ್ಯಾಯಾಧೀಶರ ಜೊತೆಗೆ ವಕೀಲರು ಬಹಳ ಮುಖ್ಯವಾಗಿ ವೃತ್ತಿ ಧರ್ಮದ ಜೊತೆಗೆ ಸತ್ಯ ಧರ್ಮವನ್ನು ಮಾತ್ರ ಮನರೆಯದೇ ಪಾಲಿಸಿದರೆ ಅವರು ಕಾರಣಿಕತೃರಾಗುತ್ತಾರೆ ಎಂದರು.

      ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಮ್.ಮಹಾಲಿಂಗಯ್ಯ ಮಾತನಾಡಿ ಮಧ್ಯಂತರ ಅಪ್ಲಿಕೇಷನ್ 20ರೂಪಾಯಿ ವಕಾಲತ್ ಗೆ 30 ರೂಪಾಯಿ ಕಟ್ಟಿಸಿಕೊಳ್ಳುವ ಪರಿಷತ್ ವಕೀಲರ ಮರಣ ನಿಧಿಯನ್ನು 30 ಲಕ್ಷಕ್ಕೆ ಏರಿಸುವ ಅವಶ್ಯಕತೆ ಇದೆ ಎಂದರು.

      ಸಮಾರಂಭದಲ್ಲಿ ವಕೀಲ ಸಂಘದ ಕಾರ್ಯದರ್ಶಿ ಹೆಚ್.ಎಸ್.ಚಂಧ್ರಶೇಖರಯ್ಯ, ಚನ್ನಬಸವಯ್ಯ, ಜಿ.ಶ್ರೀನಿವಾಸಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಮಧುಕರ್ ದೇಶಪಾಂಡೆ, ಯಶೋದ್‍ದೇಶಪಾಂಡೆ, ಮತ್ತಿತರರು ಭಾಗವಹಿಸಿದ್ದರು.

 

(Visited 18 times, 1 visits today)