ಕೊರಟಗೆರೆ


ನೂತನ ಗ್ರಾಪಂ ಕಾರ್ಯಾಲಯವು ಸುಂದರವಾಗಿ ನಿರ್ಮಾಣವಾಗಿದೆ, ಆ ಸುಂದರತೆ ಹಾಗೇ ಉಳಿಯಬೇಕಾದರೆ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ ಪ್ರಮಾಣಿಕವಾಗಿ ಸ್ಫಂದಿಸಿ ಉತ್ತಮ ಸೇವೆ ಸಲ್ಲಿಸಿದ್ದರೆ ಇದಕ್ಕೊಂದು ಸಾರ್ಥಕತೆ ಸಿಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದಲ್ಲಿ ನೂತನ ಗ್ರಾಮಪಂಚಾಯಿತಿ ಕಾರ್ಯಾಲಯ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಗ್ರಾ.ಪಂ ಕಾರ್ಯಾಲಯ ಸುಮಾರು 1ಕೋಟಿ 15ಲಕ್ಷ ರೂ ವೆಚ್ಚÀದಲ್ಲಿ ನಿರ್ಮಿಸಲಾಗಿದೆ, ಅಂದೇ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ನಡೆದಂತಹ ಬೇಲೂರು ಘೋಷಣೆ ಎಂಬ ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು.
ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸುಮಾರು 6ಕೋಟಿ 40ಲಕ್ಷ ರೂ.ಗಳನ್ನು ಅನುದಾನ ಮಂಜೂರಾಗಿ ಕಾರ್ಯರೂಪಕ್ಕೆ ತಂದಿದ್ದೇನೆ ಅವೆಲ್ಲವೂ ನಿಮ್ಮಗಳ ಕಣ್ಮುಂದೆಯೇ ಇದೆ ಎಂದು ಹೇಳಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಮಾತನಾಡಿ, ನಾನು ಹುಟ್ಟಿದ ಗ್ರಾಮ ಅಕ್ಕಿರಾಂಪುರ, ಈ ಹುದ್ದೆಯಲ್ಲಿ 4ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ ನಮ್ಮ ಗ್ರಾ.ಪಂ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದಾಗ ಅದು ನನ್ನ ಗಮನಕ್ಕೆ ಬಂದ ಕೂಡಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಸುಮಾರು 1ಕೋಟಿ15ಲಕ್ಷ ಅನುದಾನ ಬಿಡುಗಡೆಗೊಳಿಸಿ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ನನಗೆ ಖುಷಿ ತಂದಿದೆ, ಅಕ್ಕಿರಾಂಪುರ ಗ್ರಾಪಂಯವರು sಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಪ್ರಮಾಣಿಕ ಕೆಲಸ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಡಾ.ಕೆ ವಿದ್ಯಾಕುಮಾರಿ, ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ತಾಪಂ ಇಓ ಡಾ.ಡಿ ದೊಡ್ಡಸಿದ್ದಯ್ಯ, ಉಪಾಧ್ಯಕ್ಷೆ ಸುಶೀಲಮ್ಮ, ಗ್ರಾಪಂ ಪಿಡಿಓ ಪೃಥ್ವಿಭಾ, ಜಿಪಂ ಆಡಳಿತ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಅಭಿವೃದ್ಧಿ ಉಪ ಕಾರ್ಯದರ್ಶಿ ಅಥಿಕಾ ಪಾಷಾ, ಪಿಆರ್‍ಇಡಿ ಕಾರ್ಯಪಾಲಕ ಅಭಿಯಂತರರಾದ ದಯಾನಂದ್, ರವಿಕುಮಾರ್, ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿಗಳು
ಉಪಸ್ಥಿತರಿದ್ದರು.

(Visited 1 times, 1 visits today)