ತುಮಕೂರು
ಹೊಟೇಲ್ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ಅಂತುರಾಜ್ ಎಂಬ ವ್ಯಕ್ತಿಗೆ ತುಮಕೂರಿನ ದ ಬೀವ್ ಹೈವ್‍ಗ್ರಾಂಡ್ ಹೊಟೇಲ್ ಮಾಲೀಕರು ಮತ್ತು ಕುಟುಂಬದವರು ಕಿರಿಕುಳು ನೀಡಿ, ಅರ್ಥಿಕವಾಗಿ ಮೋಸ ಮಾಡಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಒಂದು ವಾರದೊಳಗೆ ಸೂಕ್ತ ನ್ಯಾಯ ದೊರಕಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂರಕ್ಷ ಸಮಿತಿ ರಾಜ್ಯ ಅಧ್ಯಕ್ಷ ಲಯನ್ ಕೆ.ವಿ.ಬಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ ಬೀವ್ ಹೈವ್ ಗ್ರಾಂಡ್ ಹೊಟೇಲ್‍ನ ಮಾಲೀಕರಾದ ಬಸವರಾಜು ಮತ್ತು ಆತನ ಮಗ ದರ್ಶನ ಮತ್ತು ಜಿ.ಪಂ.ಮಾಜಿ ಸದಸ್ಯರಾದ ವೈ.ಸಿ.ಸಿದ್ದರಾಮಯ್ಯ ಅವರುಗಳು ಅಂತುರಾಜ್ ಕುಟುಂಬಕ್ಕೆ ಕಿರುಕುಳ ನೀಡಿ,ಇಡೀ ಕುಟುಂಬವೇ ಬೀದಿಗೆ ಬೀಳುವಂತೆ ಮಾಡಿದೆ.ಇದನ್ನು ವಿರೋಧಿಸಿ ಕಳೆದ 155 ದಿನದಿಂದಲೂ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗು ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಯಾರು ಸಹ ತಿರುಗಿ ನೋಡಿಲ್ಲ.ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದರು.
ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಅಂತುರಾಜು ಅಂತಹ ವಿದ್ಯಾವಂತನಿಗೆ ಮೋಸ ಮಾಡುವ ಮೂಲಕ ದಲಿತ ಉದ್ಯಮಿಗಳು ಬೆಳೆಯದಂತಹ ವಾತಾವರಣವನ್ನು ಸೃಷ್ಟಿಸುವ ಹುನ್ನಾರ ಇದಾಗಿದೆ.ದಿ ಬೀವ್ ಹೈವ್ ಗ್ರಾಂಡ್ ಹೊಟೇಲ್ ಮಾಲೀಕರು ಅಂತುರಾಜು ಅವರಿಗಲ್ಲದೆ ಬ್ಯಾಂಕುಗಳಿಗೆ, ಸಹಕಾರ ಸಂಸ್ಥೆಗಳಿಗೆ ಮೋಸ ಮಾಡಿ, ಸುಳ್ಳು ದಾಖಲೆ ನೀಡಿ, ಸಾಲ ಮಾಡಿದ್ದು, ಈ ಬಗ್ಗೆ ಕುಲಂಕಷ ತನಿಖೆ ನಡೆಸಿ,ತಪ್ಪಿತಸ್ಥರನ್ನು ಬಂಧಿಸಬೇಕು.ಅಂತುರಾಜು ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಿ, ಅವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನಾ ಆಂದೋಲನದ ವೈ.ಮರಿಸ್ವಾಮಿ,ಸ್ಲಂ ಜನಾಂದೋಲನದ ನರಸಿಂಹಮೂರ್ತಿ, ಹೋರಾಟಗಾರರಾದ ರಾಮಯ್ಯ,ದಲಿತ ಸಂರಕ್ಷ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಸಿ.ಸುರೇಶ್,ಅನ್ಯಾಯಕ್ಕೆ ಒಳಗಾಗಿರುವ ಅಂತುರಾಜ್ ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು