ತುಮಕೂರು
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆಯ ಎಂಎಸ್‍ಎಂಇ ಸೆಂಟರ್ ಆಫ್ ಎಕ್ಸಲೆನ್ಸ್‍ನ ಎಲೆಕ್ಟ್ರಾನಿಕ್ಸ್ ಸಿಸ್ಟಂ ಎಂಜಿನಿಯರಿಂಗ್ ವಿಭಾಗ, ಲಘು ಉದ್ಯೋಗ ಭಾರತಿ ಮತ್ತು ಅಖಿಲ ಭಾರತ ನಿರ್ವಹಣಾ ಸಂಸ್ಥೆ ಜಂಟಿಯಾಗಿ ಎಂಎಸ್‍ಎಂಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ) ಮತ್ತು ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರದ ಯೋಜನೆಗಳ ಒಂದು ದಿನದ ಅರಿವು ಕಾರ್ಯಕ್ರಮ ನಗರದ ಎಸ್‍ಎಸ್‍ಐಟಿ ಕ್ಯಾಂಪಸ್‍ನ ಪಿಜಿ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿತ್ತು.
ತುಮಕೂರಿನಲ್ಲಯೇ ಹಲವಾರು ಹೊಸ ಆವಿಷ್ಕಾರ ಉದ್ಯಮ ಸೃಷ್ಟಿಗೆ ಅವಕಾಶಗಳು ಇದ್ದು, ವಿದ್ಯಾರ್ಥಿಗಳು ಸ್ಮಾರ್ಟ್ ಸ್ವಿಚ್‍ಗಳಿಂದ ಹಿಡಿದು ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸ್ಮಾರ್ಟ್ ಮಾಡುವ ಅವಕಾಶಗಳು ಮುಂದಿವೆ ಅವುಗಳಿಗಾಗಿ ಕೇಂದ್ರ ಸರ್ಕಾರ ಎಂಎಸ್‍ಎಂಇ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಎಂಎಸ್‍ಎಂಇ ಸಂಯೋಜಕರಾದ ಡಾ. ಟಿ.ವಿ. ಪ್ರಭಾಕರ್ ವಿದ್ಯಾರ್ಥಿಗಳಿಗೆ ಹೊಸ ಉದ್ಯಮ ಸೃಷ್ಟಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ತುಮಕೂರಿನಲ್ಲಿಯೇ ಡ್ರೋನ್ ಮತ್ತು ತೇಜಸ್ ಏರ್‍ಕ್ರಾಫ್ಟ್ ಉತ್ಪಾದನಾ ಘಟಕಗಳಿದ್ದು, ಉತ್ಪಾದನಾ ಘಟಕಗಳಿಂದ ಹೊರ ಬರುವ ಅನುಪಯುಕ್ತ ವಸ್ತುಗಳ ನಿರ್ವಹಣೆಯಿಂದ ಹೊಸ ಉದ್ಯಗಳ ಸೃಷ್ಟಿ ಸಾಧ್ಯ ಈ ಕುರಿತು ಯೋಚಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯಶಸ್ವಿ ಮತ್ತು ಸೋಲಿನ ವಿವಿಧ ಆವಿಷ್ಕಾರಗಳ ಪರಿಕಲ್ಪನೆಯಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೀನಿವಾಸ ಎಂ ಜಮಖಂಡಿ ವಿದ್ಯಾರ್ಥಿಗಳಿಗೆ ಬೆಳಕು ಚೆಲ್ಲಿದ್ದರು.
ಕಿನ್ನಾಳ ಕಲೆಯಲ್ಲಿ ಸೃಜನಾತ್ಮಕ ಮತ್ತು ಉದ್ಯಮ ಸೃಷ್ಟಿ ಕುರಿತು ಲಘು ಉದ್ಯೋಗ ಭಾರತಿ ಉಪಾಧ್ಯಕ್ಷರಾದ ಶ್ರೀನಿವಾಸ ಉಪ್ಪಲುರಿ ಮಾತನಾಡಿದರು, ಬೌದ್ಧಿಕ ಆಸ್ತಿಗಳ ಹಕ್ಕು ಮತ್ತು ಪೇಟೆಂಟ್‍ಗಳ ಕುರಿತು ಎಸ್‍ಎಸ್‍ಐಟಿ ಸಂಶೋಧನಾ ಸಂಯೋಜಕರಾದ ಡಾ.ಎಸ್‍ಜಿ. ಶ್ರೀಕಂಠೇಶ್ವರ ಸ್ವಾಮಿ ಮಾಹಿತಿ ನೀಡಿದರು.
ಎಂಎಸ್‍ಎಂಇ ಮತ್ತು ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರದ ಯೋಜನೆಗಳ ಒಂದು ದಿನದ ಅರಿವು ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲರಾದ ಡಾ.ಕೆ.ಕರುಣಾಕರ, ಲಘು ಉದ್ಯೋಗ ಭಾರತಿ ಉಪಾಧ್ಯಕ್ಷರಾದ ಶ್ರೀನಿವಾಸ ಉಪ್ಪಲುರಿ, ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೀನಿವಾಸ ಎಂ ಜಮಖಂಡಿ, ಎಂಎಸ್‍ಎಂಇನ ಉಪ ನಿರ್ದೇಶಕರಾದ ಆರ್ ಗೋಪಿನಾಥ್ ರಾವ್, ಎಸ್‍ಎಸ್‍ಐಟಿ ಕಾಲೇಜಿನ ಇಇಇ ವಿಭಾಗದ ಮುಖ್ಯಸ್ಥರಾದ ಡಾ.ಸಂಜೀವ್ ಕುಮಾರ್ ಎಲ್, ಇಇಇ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರವೀನ್ ಕುಮಾರ್ ಸಿ, ಎಸ್‍ಎಸ್‍ಐಟಿ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.