ತುಮಕೂರು


ಕ್ರಿಯಾಶೀಲ ಸಂಸದನಾಗಿದ್ದ ನನಗೆ ಟಿಕೆಟ್ ನಿರಾಕರಿಸಲಾಯಿತು, ಕಾಂಗ್ರೆಸ್ ನವರೇ ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಹೇಳಿದರು, ನಾನೇನು ತಪ್ಪು ಮಾಡಿದ್ದೆ ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಜೆಡಿಎಸ್ ನವರು ಬೇಡ ಅಂದ್ರು ಲೋಕಸಭಾ ಟಿಕೆಟ್ ಅನ್ನು ಒಪ್ಪಿಸಿ ಬಂದರು ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಡಾ.ಜಿ.ಪರಮೇಶ್ವರ್ ಅವರು ನನ್ನ ಸಂಸದನಾಗಿ ಮಾಡಲು ಸಹಾಯ ಮಾಡಿದರು, 2018ರಲ್ಲಿ ಅವರು ಉಪಮುಖ್ಯಮಂತ್ರಿ ಯಾಗಲು, ಕೊರಟಗೆರೆಯಲ್ಲಿ ಶಾಸಕನಾಗಲು ನಾನು ಸಹಾಯ ಮಾಡಿಲ್ಲವೇ? ಅವರದ್ದು ದೊಡ್ಡ ಸಹಾಯ ಇರಬಹುದು, ನನ್ನದು ಸಣ್ಣ ಅಳಿಲು ಸೇವೆ ಇರಬಹುದು, ಕೊರಟಗೆರೆಯ ಜನನ್ನ ಕೇಳಿ, ನಾನೇನು ಮಾಡಿಲ್ಲ ಅಂತ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಸಮ್ಮಿಶ್ರ ಸರ್ಕಾರದಲ್ಲಿದ್ದ ಜೆಡಿಎಸ್ ಗೆ ಸ್ಥಾನ ಕೇಳುವ ಹಕ್ಕಿತ್ತು, ಅವರು ಕೇಳದೇ ಇದ್ರು ಸಹ ನಮ್ಮವರೇ ಕೊಟ್ಟರು, ಜೆಡಿಎಸ್ ನವರು ಒಬ್ಬ ಕ್ರಿಯಾಶೀಲ ಸಂಸದನಿಗೆ ಅನ್ಯಾಯವಾಗಬಾರದು ಎನ್ನುವ ಹೃದಯ ವೈಶಾಲತೆಯನ್ನು ತೋರಲಿಲ್ಲ. ದೇವೇಗೌಡರು, ಕುಮಾರಣ್ಣ ಯಾರು ತುಮಕೂರು ಬಿಟ್ಟುಕೊಡಿ ಎಂದು ಕೇಳದಿದ್ದರು ಸಹ ಅಣ್ಣ ತಮ್ಮಂದಿರ ರಾಜಕೀಯ ಹಪಾಹಪಿತನದಿಂದ ನನಗೆ ಟಿಕೆಟ್ ನಿರಾಕರಿಸಲಾಯಿತು.
ಲೋಕಸಭಾ ಕ್ಷೇತ್ರದಲ್ಲಿನ ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದೆ ಹಳ್ಳಿಗಳಿಗೆ ಹೋಗಿ ಕೆಲಸ ಮಾಡಿದ್ದೆ ಗೆದ್ದ 44 ಜನರಲ್ಲಿ ಕ್ರಿಯಾಶೀಲವಾಗಿದ್ದ ನಾಲೈದು ಸಂಸದರಲ್ಲಿ ನಾನು ಒಬ್ಬ ಹೈಕಮಾಂಡ್ ಜೊತೆ ಸ್ನೇಹ ಸಾಧಿಸುತ್ತಾನೆ, ಒಕ್ಕಲಿಗ ಲೀಡು ಬೆಳೆಯುತ್ತಾನೆ ಎಂಬ ಕಾರಣಕ್ಕೆ ನನ್ನ ಟಿಕೆಟ್ ನಿರಾಕರಿಸಲಾಯಿತು.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಣುಗೋಪಾಲ್ ಫೆÇೀನ್ ಮಾಡಿ, ನಾಮಪತ್ರ ವಾಪಾಸ್ ಪಡೆಯಲು ಹೇಳಿದ್ದರು, ರಾಜ್ಯಸಭೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರು, ನಾಮಪತ್ರ ಹಿಂತೆಗೆದುಕೊಂಡ ನಂತರ ಒಂದು ಫೆÇೀನ್ ಸಹ ಮಾಡಲಿಲ್ಲ, ಪಕ್ಷಕ್ಕಾಗಿ ಗಾಣದ ಎತ್ತುತರ ದುಡಿಯುತ್ತಲೇ ಇರಬೇಕಾ? ಅಧಿಕಾರ ಕೊಡುವುದು ಬೇಡ, ಕತ್ತು ಹಿಸುಕಲು ಬಂದರೆ ಹೆ ಇರಬೇಕು ಎಂದು ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಯಾಗಿದ್ದ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ಎಲ್ಲ ವಿಚಾರಗಳಿದ್ದರು ಸಹ ಸುಮ್ಮನೆ ಇದ್ದರು, ಅವರು ನನಗೆ ಸಹಾಯ ಮಾಡಿದರು ಸಹ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಜೊತೆ ಕೈ ಜೋಡಿಸಿದರು ಟಿಕೆಟ್ ನಿರಾಕರಿಸಲಾಯಿತು, ನಂತರ ಬಂದ ಎರಡು ರಾಜ್ಯಸಭೆ, ಎರಡು ವಿಧಾನ ಪರಿಷತ್ ಚುನಾವಣೆ ಬಂದರು ನನಗೆ ಅವಕಾಶ ನೀಡಲಿಲ್ಲ, ಕನಿಷ್ಠ ನನ್ನ ಬಗ್ಗೆ ವಿಚಾರಿಸಲಿಲ್ಲ, ನಿರ್ಲಕ್ಷ್ಯಕ್ಕೆ ಒಳಗಾದೆ ಜನ ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದರಿಂದಲೇ ಪಕ್ಷಾಂತರ ಮಾಡಿದೆ ಎಂದರು.
ಹತ್ತು ವರ್ಷ ಶಾಸಕನಾಗಿದ್ದೇ, ಹತ್ತು ವರ್ಷ ಕ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಜಿಲ್ಲೆ ನನಗೂ ಜನರಿದಾರೆ, ನಾನು ಕೆಲಸ ಮಾಡಿದೇನೆ.
ಹತ್ತು ವರ್ಷ ಶಾಸಕನಾಗಿದ್ದೇ, ಹತ್ತು ವರ್ಷ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಜಿಲ್ಲೆಯಲ್ಲಿ ನನಗೂ ಜನರಿದ್ದಾರೆ, ನಾನು ಕೆಲಸ ಮಾಡಿದ್ದೇನೆ ಯಾರೋ ಮೂರು ಜನ ಲೀಡ್ರು ಬೇಡ ಅಂದ್ರೆ ರಾಜಕಾರಣ ಮುಗಿದು ಹೋಗುತ್ತಾ? ಜನ ಬೇಡ ಎಂದರೆ ಮಾತ್ರ ಯಾರ ರಾಜಕಾರಣ ಬೇಕಾದರೂ ಮುಗಿತ್ತೆ ಜನರ ಪ್ರೀತಿ ಇರೋವರ್ಗೂ ರಾಜಕಾರಣದಲ್ಲಿ ಇರುತ್ತೇನೆ, ನಾನು ರಾಜಕಾರಣ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

(Visited 1 times, 1 visits today)