ಪಾವಗಡ
ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಪೊನ್ನಸಮುದ್ರ ಗ್ರಾಮಪಂಚಾಯಿತಿ ವ್ಯಾಪ್ತಿಯ ಕನಿಕಲಬಂಡೆ ಗ್ರಾಮದ ಕೆರೆಯ ಕಟ್ಟೆಯಲ್ಲಿ ಬೇಳೆದಿರುವ ಸೀಮೆಜಾಲಿ ಗಿಡಗಳನ್ನು ಕಿತ್ತು ಹಣ ಸಂಪಾದಿಸುವ ಉದ್ದೇಶದಿಂದ ಇಬ್ಬರು ವ್ಯಕ್ತಿಗಳು ಜೆ.ಸಿ.ಬಿ.ಯಿಂದ ಸುಮಾರು 1 ಕೀಲೋಮೀಟರ್ ದೂರದವರೆಗೂ ರಾತ್ರಿಗೆ ರಾತ್ರಿ ದ್ವಂಸ ಮಾಡಿರುವುದರಿಂದ ಕೆರೆಯ ನೀರೆಲ್ಲಾ ಖಾಲಿಯಾಗುತ್ತಿರುವ ಘಟನೆ ನಡೆದಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಕೃತ್ಯ ದಲ್ಲಿ ಬಳಸಿದ್ದ ಜೆ.ಸಿ.ಬಿ. ಚಾಲಕನನ್ನು ಹಿಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಈ ಕೃತ್ಯವನ್ನು ಕನಿಕಲಬಂಡೆ ಗ್ರಾಮಸ್ಥರು ಖಂಡಿಸಿದ್ದು ಸಂಬಂದಪಟ್ಟ ತಹಶೀಲ್ದಾರ್, ಕಾರ್ಯಾಲಯ ಹಾಗೂ ಜಿಲ್ಲಾಪಂಚಾಯಿತಿ ಕಛೇರಿ ಹಾಗೂ ಪೊನ್ನಸಮುದ್ರ ಗ್ರಾಮಪಂಚಾಯಿತಿಗಳಿಗೆ ದೂರು ಸಲ್ಲಿಸಿದ್ದು ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯೂ ಸಹ ಸ್ಥಳಕ್ಕೆ ಬೇಟಿ ನೀಡದೆ ನಿರ್ಲಕ್ಷವಹಿಸಿದ್ದಾರೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಿದ್ದಾರೆ.
ಏನಿದು ಘಟನೆ
ಬಿ. ಅಚ್ಚಮ್ಮನಹಳ್ಳಿ ಗ್ರಾಮದಿಂದ ಕನಿಕಲಬಂಡೆಗೆ ಹೋಗುವ ಮಾರ್ಗ ಮದ್ಯೆ ಸರ್ವೇ ನಂ 28 ರಲ್ಲಿ ನೂರಾರು ಎಕರೆಯ ಬ್ರಹ್ಮಯ್ಯನ ಕೆರೆ ಇದ್ದು, ಕಳೆದ 40 ವರ್ಷಗಳಿಂದ ಭತ್ತಿಹೋಗಿದ್ದ ಕೆರೆ, ಕಳೆದ ಸಾಲಿನಲ್ಲಿ ಮಳೆಯಿಂದ ಕೆರೆ ತುಂಬಿತ್ತು, ಇದರಿಂದ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯಲು ನೀರು ಲಭ್ಯವಾಗುತ್ತಿತ್ತು ಅಲ್ಲದೆ ಗಂಗಸಾಗರ, ಅಚ್ಚಮ್ಮನಳ್ಳಿ, ಯರ್ರಮ್ಮನಹಳ್ಳಿ, ಮತ್ತಿತರ ಗ್ರಾಮಗಳ ಕೊಳವೆಬಾವಿಗಳಲ್ಲಿ ಅಂರ್ತಜಲಮಟ್ಟ ಹೆಚ್ಚಾಗಿತ್ತು ಅದರೆ ಈ ಕೃತ್ಯದಿಂದ ಕೆರೆಯ ನೀರೆಲ್ಲಾ ಖಾಲಿಯಾಗುತ್ತಿದ್ದು, ಈ ಕೃತ್ಯದಲ್ಲಿ ಬಿ. ಅಚ್ಚಮ್ಮನಹಳ್ಳಿ ಗ್ರಾಮದ ಮುತ್ತಪ್ಪ ಮತ್ತು ರಾಮಾಂಜಿನಪ್ಪ ಎನ್ನುವರು ಸೀಮೆಜಾಲಿಯನ್ನು ಇಟ್ಟಿಗೆ ಸುಡಲು ಮತ್ತು ಕಲ್ಲಿದ್ದಲು ತಯಾರಿಸಲು ಮಾರಾಟ ಮಾಡಲು ಜೆ.ಸಿ.ಬಿ.ಯಿಂದ ಕೆರೆಕಟ್ಟೆಯನ್ನು ಹಾಳು ಮಾಡಿದ್ದು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು ಕೆರೆಯನ್ನು ನವೀಕರಣಮಾಡಿಸಬೇಕಾಗಿ ಗ್ರಾಮಸ್ಥರಾದ ಮಹೇಂದ್ರ, ತಿಮ್ಮರಾಜು, ಟಿ.ಅಂಜಯ್ಯ, ಗಿರಿಯಣ್ಣ, ನರಸಿಂಹಪ್ಪ,ಎಚ್. ನರಸಿಂಹಮೂರ್ತಿ, ರಾಮಾಂಜಿನರೆಡ್ಡಿ, ಕಾರ್ತಿಕ್, ಕನಕರೆಡ್ಡಿ, ಅಶೋಕ್, ಪವನ್, ಮನೋಹರ್, ಚಂದ್ರಶೇಖರ್, ಧರ್ಮಪಾಲ್, ಸಂಬಂದಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ದೂರು ಕೊಟ್ಟರೂ ಖ್ಯಾರೆ ಎನ್ನದೆ ಅಧಿಕಾರಿಗಳು
ಕೆರೆಕಟ್ಟೆಗಳನ್ನು ಸಂರಕ್ಷಿಸುವುದು ಎಲ್ಲರ ಕರ್ಥವ್ಯವಾಗಿದ್ದು, ತಾಲ್ಲೂಕು ಬರಪೀಡಿತ ವಾಗಿದ್ದು, ಲಭ್ಯ ಇರುವ ಕೆರೆಕುಂಟೆಗಳನ್ನು ಪುರ್ನರಜೀವನಗೊಳಿಸಬೇಕಾಗಿದೆ, ಅದರೆ ಕೆರೆಕಟ್ಟೆಗಳನ್ನು ಹಾಳು ಮಾಡುತ್ತಿದ್ದರೂ ಸಹ , ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯೂ ಸಹ ಬೇಟಿ ನೀಡದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.