ತುಮಕೂರು
ಬಗರ್ ಹುಕುಂ ಜಮೀನಿನಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾರಣಾಂತಿಕ ಹಲ್ಲೆ ಮಾಡಿ ಕ್ರೌರ್ಯ ಮೆರೆದಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಬಳಿಯ ಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ.
ಕಳೆದ 8 ವರ್ಷಗಳಿಂದ ಬಗರ್ ಹುಕುಂ ಜಮೀನಿನಲ್ಲಿ ಹಲವು ರೈತರು ಸಾಗುವಳಿ ಮಾಡುತ್ತಿದ್ದು ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸಂಬಂಧಿಸಿದಂತೆ ರೈತರು ಹಾಗೂ ಅರಣ್ಯ ಇಲಾಖೆಯ ನಡುವೆ ಜಟಾಪಟಿ ನಡೆಯುತ್ತಿದ್ದು ಇತ್ತೀಚೆಗೆ ರೈತರು ಹಾಗೂ ಅರಣ್ಯ ಇಲಾಖೆಯ ಗಲಾಟೆ ಕಳೆದೊಂದು ವಾರದಿಂದ ನಡೆಯುತ್ತಿದ್ದು ಇಂದು ಏಕಾಏಕಿ ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೌಡಿಗಳಂತೆ ವರ್ತಿಸಿ ಮಾರಣಾಂತಿಕ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆಯಲು ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಅರಣ್ಯ ಇಲಾಖೆ ಅಧಿಕಾರಿ ದುಗ್ಗಯ್ಯ ಘಟನೆಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದು ಮಾಧ್ಯಮದವರು ತೆರಳಿ ಕೂಡಲ ಆಸ್ಪತ್ರೆಗೆ ದಾಖಲಾದ ರೈತರ ಮೇಲು ಸಹ ಆಸ್ಪತ್ರೆಯ ವಾಡ್ರ್ನಲ್ಲಿ ರೈತರ ಮೇಲೆ ನಿಂದಿಸಲು ಮುಂದಾದ ಘಟನೆಗೂ ಸಹ ಸಾಕ್ಷಿಯಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿ ದುಗ್ಗಯ್ಯ ರವರ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದು ಕಳೆದ ಒಂದು ವಾರದ ಹಿಂದೆ ರೈತ ಮುಖಂಡರು ಒಬ್ಬರನ್ನ ಅಪಹರಿಸಿ ಕೆ.ಬಿ ಕ್ರಾಸ್ ಬಳಿಯ ಅರಣ್ಯದ ಬಳಿ ಬಿಟ್ಟು ಹೋದ ಆರೋಪ ಸಹ ಕೇಳಿ ಬಂದಿದ್ದು ಇನ್ನೂ ಆ ಘಟನೆ ಮಾಸುವ ಮುನ್ನವೇ ರೈತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಎಷ್ಟು ಸರಿ ಎನ್ನುವುದು ಪ್ರಗತಿಪರ ಸಂಘಟನೆಗಳ ಪ್ರಶ್ನೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಬಗ್ಗೆ ಕ್ರಮ ತೆಗೆದುಕೊಳ್ಳುವರೇ ಕಾದು ನೋಡಬೇಕಿದೆ.