ಗುಬ್ಬಿ
ತಾಲ್ಲೂಕಿನ ಬೇಣಚಗೆರೆ, ಹಾರನ ಹಳ್ಳಿ,ಸೇರಿದಂತೆ ಇನ್ನಿತರೆ ಭಾಗಗಳಿಗೆ ಸರಿಯಾದ ರೀತಿಯಲ್ಲಿ ರೈತರಿಗೆ ಹಾಗೂ ಗ್ರಾಮಗಳಿಗೆ ನಿರಂತರ ವಿದ್ಯುತ್ ನೀಡುತ್ತಿಲ್ಲ ಎಂದು ಆಗ್ರಹಿಸಿ ನೂರಾರು ರೈತರಿಂದ ನಿಟ್ಟೂರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪಂಚಾಕ್ಷರಿ, ಸುಮಾರು ಎರಡು ತಿಂಗಳಿನಿಂದಲೂ ಈ ಸಮಸ್ಯೆ ನಿರಂತರವಾಗಿದ್ದು ಇಲ್ಲಿನ ಅಧಿಕಾರಿಗಳು ಮಾತ್ರ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ ಅವರು ಮನೆಗಳಿಗೆ ನೀಡುವ ನಿರಂತರ ವಿದ್ಯುತ್ತನ್ನುಸಹ ಸರಿಯಾಗಿ ನೀಡುತ್ತಿಲ್ಲ ಇದರಿಂದ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ ಇಲ್ಲಿರುವಂತಹ ಏ ಇಇ ಅನಿಲ್ ಕುಮಾರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇರುವು ದರಿಂದ ನಿರಂತರವಾಗಿ ಇಲ್ಲಿ ಪ್ರತಿಭಟನೆಗಳು ನಡೆಯುತ್ತವೆ ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆ ಗ್ರಹ ಮಾಡಿದರು. ಗ್ರಾಮಪಂಚಾಯತಿ ಅಧ್ಯಕ್ಷ ನರಸೇಗೌಡ ಮಾತನಾಡಿ ಇಲ್ಲಿರುವ ಅಧಿಕಾರಿ ಯಾವುದೇ ರೀತಿಯಲ್ಲೂ ಜನರಿಗೆ ಸ್ಪಂದನೆ ಮಾಡುವುದಿಲ್ಲ ರೈತರ ಸಮಸ್ಯೆ ಬಗ್ಗೆ ಆತನಿಗೆ ತಿಳಿದೇ ಇಲ್ಲ ಇಂತಹ ಅಧಿಕಾ ರಿಗಳು ನಮಗೆ ಬೇಕಿಲ್ಲ ಯಾವುದೇ ಕೆಲಸ ಹೇಳಿದರು ಸಹ ತಿಂಗಳುಗಟ್ಟಲೆ ಕೆಲಸವನ್ನೇ ಮಾಡುವುದಿಲ್ಲ ಹಳ್ಳಿಯ ಜನರ ಕೆಲಸ ಮಾಡಿದ ಮೇಲೆ ಇಂತಹ ಅಧಿಕಾರಿಗಳು ಇಲ್ಲಿ ಬೇಕಿಲ್ಲ ಎಂದು ಒತ್ತಾಯ ಮಾಡಿದರು.
ರೈತ ಲೋಕೇಶ್ ಮಾತನಾಡಿ ಎರಡು ತಿಂಗಳಿನಿಂದಲೂ ಸಮಸ್ಯೆ ಬಗ್ಗೆ ಎಷ್ಟು ಬಾರಿ ತಿಳಿಸಿದರು ಸಹ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಇಂತಹ ಅಧಿಕಾರಿ ಇದ್ದರೆ ಮನೆಗಳಲ್ಲಿ ಮತ್ತು ರೈತರಿಗೆ ಅವಶ್ಯಕವಾದ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಪರೀಕ್ಷೆ ನಡೆಯುತ್ತಿದೆ ಮಕ್ಕಳು ಓದಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕಾಂತರಾಜು, ವಿಜಯ್ ಕುಮಾರ್, ಮಂಗಳ ಗೌರಮ್ಮ, ಗಿರೀಶ್ ಬಸವರಾಜು, ಸಿದ್ದರಾಮಣ್ಣ ಚಂದನ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.