ತುಮಕೂರು


ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮಧುಗಿರಿ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯ ಅವರು ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮಧುಗಿರಿ ಕ್ಷೇತ್ರದ ಮತದಾರರಾದ ವೀರಣ್ಣ ಬಿನ್ ಈರಮರಿಯಣ್ಣ ಸಿದ್ದಾಪುರ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸೋಮವಾರ ಲೋಕಾಯುಕ್ತ ಕಚೇರಿಗೆ ಮಧುಗಿರಿ ತಾಲೂಕಿನ ಹಲವು ಮತದಾರರೊಂದಿಗೆ ಲೋಕಾಯುಕ್ತ ಕಚೇರಿಗೆ ತೆರಳಿ ಮನವಿ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮನವಿ ಸಲ್ಲಿಸಿದ ಅವರು,ಕಾಮಗಾರಿಯೊಂದನ್ನು ಕ್ಷೇತ್ರದಲ್ಲಿ ನಡೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಲು ಐದು ಲಕ್ಷ ರೂಗಳ ಕಮಿಷನ್ ಬೇಡಿಕೆ ಇಟ್ಟಿದ್ದು,ಇದರಲ್ಲಿ ಒಂದು ಲಕ್ಷ ರೂಗಳನ್ನು ಸಂಬಂಧಿಸಿದ ವ್ಯಕ್ತಿಯಿಂದ ಪಡೆಯವ ಕುಟುಕು ಕಾರ್ಯಾಚರಣೆಯಲ್ಲಿ ಕ್ಷೇತ್ರದ ಶಾಸಕರು ಸಿಕ್ಕಿಬಿದ್ದಿರುವುದು ಸಾಮಾಜಿಕ ಜಾಲತಾಣ ಹಾಗೂ ಖಾಸಗಿ ವಾಹಿನಿಯಲ್ಲಿ ಹರಿದಾಡುತ್ತಿರುವ ದೃಶ್ಯಗಳೇ ಸಾಕ್ಷಿಯಾಗಿವೆ.ಹಾಗಾಗಿ ಸದರಿ ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರನ್ನು ಲೋಕಾಯುಕ್ತದವರು ದಾಖಲಿಸಿ, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಧುಗಿರಿಯ ಇತಿಹಾಸದಲ್ಲಿಯೇ ಇಂತಹ ಘಟನೆ ನಡೆದಿಲ್ಲ.ಇದು ಕ್ಷೇತ್ರದ ಮತದಾರರಿಗೆ ಎಸಗಿದ ದ್ರೋಹವಾಗಿದೆ.ಕೂಡಲೇ ಶಾಸಕರಾದ ಎಂ.ವಿ.ವೀರಭದ್ರಯ್ಯ ಮಧುಗಿರಿ ಕ್ಷೇತ್ರದ ಮತದಾರರ ಕ್ಷಮೆ ಕೋರಬೇಕು ಎಂದು ವೀರಣ್ಣ ಒತ್ತಾಯಿಸಿದ್ದಾರೆ.
ಈ ವೇಳೆ ಕ್ಷೇತ್ರದ ಮತದಾರರಾದ ವೀರಣ್ಣ ಬಿನ್‍ಈರಮರಿಯಣ್ಣ, ರಾಮಾಂಜನಪ್ಪ,ರಾಜಗೋಪಾಲ್,ಜೆ.ಪಿ.ಮಂಜುನಾಥ್, ಹೇಮಂತ್,ಲೋಕೇಶ್,ಬಾಬಾ ಪಕೃದ್ದೀನ್,ಗಂಗಾಧರ್,ನವರತ್ನಕುಮಾರ್,ಶಿವಣ್ಣ ಐಡಿಹಳ್ಳಿ,ಪುರುಷೋತ್ತಮ್, ನಾರಾಯಣಗೌಡ, ಲಕ್ಷ್ಮಿನಾರಾಯಣ್, ಟಿ.ಪಿ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 2 times, 1 visits today)