ಚಿಕ್ಕನಾಯಕನಹಳ್ಳಿ
ಜೆ.ಸಿ.ಮಾದುಸ್ವಾಮಿ ರವರು ತಾಲ್ಲೂಕಿನ ವೀರಶೈವ ಲಿಂಗಾಯಿತರನ್ನು ಗುತ್ತಿಗೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ತಾ ಪಂ ಮಾಜಿ ಅಧ್ಯಕ್ಷ ಶಶಿಧರ್ ಹೇಳಿದರು.
ಅವರು ತಾಲ್ಲೂಕಿನ ಶಾವಿಗೆಹಳ್ಳಿ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯಿತರ ಜೆಡಿಎಸ್ ಸಮಾವೇಶದಲ್ಲಿ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಅವರು ಮಾತನಾಡಿ, ನಾಲ್ಕು ಬಾರಿ ಗೆದ್ದು ಬಂದು ಸಚಿವರಾದರೂ ಇದುವರೆಗೆ ವೀರಶೈವರಿಗೆ ಏನೂ ಮಾಡಿಲ್ಲ, 20 ವರ್ಷಗಳಿಂದ ಅವರ ಹಿಂಬಾಲಕರಾಗಿ ಲಕ್ಷಾಂತರ ರುಪಾಯಿ ಕಳೆದುಕೊಂಡಿದ್ದೇನೆ, ತಾಲ್ಲೂಕಿನಲ್ಲಿ 40 ರಿಂದ 45 ಸಾವಿರ ವೀರಶೈವ ಲಿಂಗಾಯಿತರಿದ್ದರೂ ಇದುವರೆಗೂ ಒಂದು ಸಮುದಾಯವನ್ನಾಗಲಿ, ವೀರಶೈವ ಬ್ಯಾಂಕ್ ಆಗಲಿ ಮಾಡಿಲ್ಲ, ಕೇವಲ ಅಧಿಕಾರಕ್ಕೋಸ್ಕರ ಲಿಂಗಾಯಿತರನ್ನು ಉಪಯೋಗಿಸಿಕೊಂಡು ಶಾಸಕ, ಸಚಿವರಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ನೀಡುವ ಅನುದಾನದಿಂದ ಅಭಿವೃದ್ದಿ ಮಾಡಿದ್ದಾರೆ ಹೊರೆತು ಒಂದು ರೂಪಾಯಿ ಸಮಾಜಕ್ಕೆ ನೀಡಿಲ್ಲ, ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ದೇವಾಲಯಗಳಿಗೆ ತಮ್ಮ ಸ್ವಂತ ಹಣವನ್ನು ನೀಡಿದ್ದಾರೆ, ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡುವಾಗ ಸಂಸದ ಜಿ.ಎಸ್.ಬಸವರಾಜು ರವನ್ನು ಪೆÇ್ರೀಟೋ ಕಾಲ್ ತರಹ ಹಾಕದೇ ಅವರನ್ನು ಆಹ್ವಾನಿಸದೇ ಅವರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ತಾವೇ ಸುಪ್ರಿಂ ಎನ್ನುವಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು
ಅವರು ಕಾಂಗ್ರೆಸ್ ನಲ್ಲಿ ಕೇವಲ ಅಲ್ಪ ಖುಷಿ ಪಡುವಂತಹ ಯೋಜನೆಗಳನ್ನು ಹೊರ ತರಲು ಹೊರಟಿದ್ದಾರೆ ನಮ್ಮ ಕುಮಾರಣ್ಣ ರೈತರು ಹಾಗೂ ಕರ್ನಾಟಕದ ಜನತೆ ಸ್ವಾಭಿಮಾನಿಗಳು ಅವರ ಹಕ್ಕುಗೆ ಚುತಿ ಉಂಟಾಗಬಾರದು ಎಂದು ಅವರ ಇತರ ಕ್ಷಣೆ ಶಾಶ್ವತವಾಗಿ ಕಾಯುವ ಉದ್ದೇಶದಿಂದ ಪಂಚರತ್ನ ಯೋಜನೆಗಳ ಮೂಲಕ ರಾಜ್ಯದ ಜನತೆಯ ಹಿತ ಕಾಯಲು ಹೊರಟಿದ್ದಾರೆ ಅಂತವರಿಗೆ ರಾಜ್ಯದ ಜನತೆ ಮತ ನೀಡಿದರೆ ಸ್ಥಳೀಯ ಪ್ರಾದೇಶಿಕ ಪಕ್ಷ ಸ್ಥಳೀಯ ಸಮಸ್ಯೆಗಳ ಕುರಿತು ಬೆಲೆ ನಿಯಂತ್ರಣ ಮಾಡುವಲ್ಲಿ ನಮ್ಮ ಪಾತ್ರ ಕೂಡ ಇರುತ್ತದೆ ಎಂದರು
ಇದೇ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡುತ್ತಾ ವೀರಶೈವ ಸಮುದಾಯ ಭವನ ನಿರ್ಮಾಣಕ್ಕೆ ನಾನು ಕಟ್ಟಿಬದ್ಧನಾಗಿದ್ದು ಎಲ್ಲಾ ಸಮುದಾಯಗಳ ಒಗ್ಗೂಡಿಸಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದರು
ಪಾಪಂ ನಮ್ಮಾಜಿ ಸದಸ್ಯ ಹೇಮಾವತಿ ಮಾತನಾಡುತ್ತಾ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಬಾಬು ಅವರು ಸಾಮಾಜಿಕ ನ್ಯಾಯ ಕೂಡಲೆಂದೇ ನನಗೆ ಉಪಾಧ್ಯಕ್ಷ ಸ್ಥಾನ ಕೂಡ ಕಲ್ಪಿಸಿಕೊಟ್ಟರು ಅದೇ ರೀತಿ ಶೆಟ್ಟಿಕೆರೆ ತಾಪಂ ಸದಸ್ಯೆ ಜಯಮ್ಮ ಈಶ್ವರಯ್ಯ ಇವರಿಗೂ ಕೂಡ ತಾಪಂನಲ್ಲಿ ಅಧ್ಯಕ್ಷ ಸ್ಥಾನ ಹೊಂದಲು ಕೂಡ ಅವಕಾಶ ಮಾಡಿಕೊಟ್ಟರು ಎಂದು ಸಭೆಯಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರುಗಳಾದ ಎಂ.ಎನ್.ಸುರೇಶ್, ಸುಧಾ ಸುರೇಶ್, ಶೈಲಾ ಶಶಿಧರ್, ಗಂಗಾಧರಯ್ಯ ಗ್ರಾಪೆಂಧ್ಯಕ್ಷೆ ರಮ್ಯಾ ರಾಮಲಿಂಗಾಪುರದ ದೇವರಾಜು ರುದ್ರಯ್ಯ ಈಶ್ವರಪ್ಪ ನಿರ್ಮಲ ಪ್ರದೀಪ್ ರಜನಿ ಶ್ರೀನಿವಾಸ್ ಮಮತಾ ಉಮೇಶ್ ಬಸವರಾಜು ಮಂಜುನಾಥ್, ರಮ್ಯ, ಸಿದ್ದರಾಮಯ್ಯ, ತೋಟದಾರ್ಯ, ರಜನಿ ಹಾಜರಿದ್ದರು.