ತುಮಕೂರು
ಸರ್ವರಲ್ಲೂ ಸಮಾನತೆಯ ಧ್ಯೇಯ ಇಟ್ಟುಕೊಂಡ ಮೇರು ವ್ಯಕ್ತಿತ್ವ ಡಾ. ಬಾಬು ಜಗಜೀವನ ರಾಮ್ ಅವರದು. ಬಾಬೂಜಿ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಸಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನಾಂಜಿನಯ್ಯ ಡಿ. ಆರ್. ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠವು ಬುಧವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ 116ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಸಿರು ಕ್ರಾಂತಿಯ ಹರಿಕಾರನಾಗಿ ಹಸಿವು ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪಣತೊಟ್ಟ ಧೀಮಂತ ವ್ಯಕ್ತಿತ್ವ ಬಾಬೂಜಿಯವರದು. ರಾಜಕೀಯ ಜೀವನದಲ್ಲಿ ಯಾವುದೇ ಖಾತೆ ಕೊಟ್ಟರೂ ನಿμÁ್ಠವಂತ ನಾಯಕನಾಗಿ ಕಾರ್ಯಸಾಧನೆ ಮಾಡಿ ತಮ್ಮ ಆದರ್ಶಯುತ ಬದುಕನ್ನು ಇಂದಿನ ಸಮೃದ್ಧ ಭಾರತಕ್ಕಾಗಿ ಮುಡಿಪಾಗಿಟ್ಟವರು ಬಾಬೂಜಿ ಎಂದು ತಿಳಿಸಿದರು.
ಭಾರತದ ಭವಿಷ್ಯ ಯುವಪೀಳಿಗೆಯಲ್ಲಿದೆ. ಹೋರಾಟ ಎಂದಿಗೂ ದುರ್ಬಲರ ಪರವಾಗಿರಬೇಕು. ನಮ್ಮ ಬದುಕು ಇನ್ನೊಬ್ಬರ ಬೆಳವಣಿಗೆಗೆ ಮಾದರಿಯಾಗಬೇಕು. ಬಲಿಷ್ಠ ರಾಷ್ಟ್ರ ಕಟ್ಟಲು, ಹೋರಾಡಲು ಹಿಂಜರಿಯಬಾರದು. ನಮ್ಮ ಕಾರ್ಯಗಳೇ ನಮ್ಮ ವ್ಯಕ್ತಿವನ್ನು ಸಾರುತ್ತವೆ ಎಂದು ಬಾಬೂಜಿಯವರು ನಂಬಿ ನಡೆದರು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಎಲ್ಲಾ ಮಹನೀಯರ ದಿನವನ್ನು ಸ್ಮರಿಸುವುದμÉ್ಟೀ ಅಲ್ಲ, ಅವರ ಜೀವನಕ್ರಮ ಹಾಗೂ ಅವರ ವಿಚಾರಗಳನ್ನು ಅನುಸರಿಸಬೇಕು. ಅವರಲ್ಲಿರುವ ಕ್ರೀಯಾಶಿಲ ಗುಣವನ್ನು ಅಳವಡಿಸಿಕೊಂಡಾಗಲೇ ಅವರ ಜಯಂತಿಗಳು ಸಾರ್ಥಕವಾಗುವುದು. ವಿದ್ಯಾರ್ಥಿ ಹಂತದಲ್ಲೇ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ಬಾಬೂಜಿಯವರ ಕಾರ್ಯಬದ್ಧತೆ, ಏಕಾಗ್ರತೆ, ಕ್ರೀಯಾಶೀಲತೆ ಸ್ಮರಿಸುವಂಥದ್ದು. ರಾಜಕೀಯ ದಿನಗಳಲ್ಲಿ ಅವರದೇ ಆದ ಛಾಪನ್ನು ಮೂಡಿಸಿ ಅಧಿಕಾರದ ಆಸೆ ತೊರೆದು ಹೋರಾಟದ ಹೆಜ್ಜೆ ಹಿಡಿದ ಬಾಬೂಜಿ ಅವರನ್ನು ನಾವೆಲ್ಲರೂ ಶ್ಲಾಘಿಸಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠದ ಸಂಚಾಲಕ ಡಾ. ದ್ವಾರಕಾನಾಥ್ ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಲಿಂಗ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಎ. ಎಂ. ಮಂಜುನಾಥ್ ವಂದಿಸಿದರು.