ತುಮಕೂರು:


ದಿವ್ಯಾಂಗ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿ(ರಿ), ತುಮಕೂರು ಜಿಲ್ಲಾ ದಿವ್ಯಾಂಗ ಸ್ಪೋಟ್ರ್ಸ ಅಕಾಡೆಮಿ(ರಿ) ವತಿಯಿಂದ ವಿಕಲಚೇತರರಾಗಿ ಎರಡು ದಿನಗಳ ವ್ಹೀಲ್‍ಚೇರ್ ಕ್ರಿಕೆಟ್ ಟೂರ್ನಮೆಂಟ್‍ನ್ನು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಎರಡು ದಿನಗಳ ಈ ಟೂರ್ನಿಯಲ್ಲಿ ತುಮಕೂರು ಸುತ್ತಮುತ್ತಲಿನ ನಾಲ್ಕು ತಂಡಗಳು ಭಾಗವಹಿಸಿದ್ದು, ನಮ್ಮನಿಧಿ ಟ್ರಸ್ಟ್‍ನ ಸಹಯೋಗದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ತುಮಕೂರು, ಬಳ್ಳಾರಿ, ಬೆಂಗಳೂರು ಮತ್ತು ಬೆಳಗಾವಿಯ ಸುಮಾರು 70 ಜನ ದಿವ್ಯಾಂಗ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.ಇವರಲ್ಲಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಟವಾಡಿರುವ ಕ್ರೀಡಾಪಟುಗಳು ಭಾಗವಹಿಸಿರುವುದು ಹೆಮ್ಮಪಡುವಂತಹದ್ದು.ಇವರಿಗೆ ಶ್ರೀಸಿದ್ದಗಂಗಾ ಮಠದಲ್ಲಿ ವಸತಿ ವ್ಯವಸ್ಥೆ ಮಾಡಿದ್ದು,ಊಟದ ವ್ಯವಸ್ಥೆಯನ್ನು ಸಹ ಸಮಮ್ ಸಮಿತಿವತಿಯಿಂದ ಮಾಡಲಾಗಿದೆ. ನಾಲ್ಕು ತಂಡಗಳು ಭಾಗವಹಿಸುವ ಈ ಟೂನಿಯ ಮೊದಲ ವಿಜೇತರಿಗೆ 20 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ಎರಡನೇ ಬಹುಮಾನವಾಗಿ 10 ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.ವಿಕಲಾಂಗದಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸುವ ಸಲುವಾಗಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಟೂರ್ನಿಯನ್ನು ಆಯೋಜಿಸುವ ಇಚ್ಚೆ ಇದೆ ಎಂದು ಕ್ರೀಡಾಕೂಟದ ಆಯೋಜಕರಾದ ನಿವೇಧಿತ ತಿಳಿಸಿದ್ದಾರೆ.
ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್ ಮಾತನಾಡಿ,ಇಂದು ವಿವಿಧ ವಿಕಲಚೇತನ ಕ್ರೀಡಾಸಂಸ್ಥೆಗಳ ಸಹಕಾರದೊಂದಿಗೆ ದಿವ್ಯಾಂಗ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ.ಇಂತಹ ನೂರಾರು ಟೂರ್ನಿಗಳು ಈ ಮೈದಾನದಲ್ಲಿ ನಡೆದಿವೆ. ಆದರೆ ವಿಕಲಚೇತನ ಟೂರ್ನಿ ಇದೇ ಮೊದಲ ಬಾರಿ ಆಯೋಜಿಸಿರುವುದು ಸಂತೋಷದ ವಿಷಯ.ಎಲ್ಲವೂ ಸರಿ ಇರುವವರೇ ಇಂದು ಮೊಬೈಲ್‍ಗೆ ಅಂಟಿಕೊಂಡು ಕುಳಿತಿರುವಾಗ,ವ್ಹಿಲ್‍ಚೇರ್ ಮೇಲೆ ಕುಳಿತು ಕ್ರಿಕೆಟ್ ಆಟವಾಡುತ್ತಿರು ವುದನ್ನು ನೋಡಿದರೆ ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ.ಇಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪಾಲಿಕೆ ಮತ್ತು ಸರಕಾರ ವಿಕಲಚೇತನರ ಶೇ3ರ ಅನುದಾನದಲ್ಲಿ ಹೆಚ್ಚಿನ ದನಸಹಾಯ ಮಾಡಬೇಕೆಂದು ಒತ್ತಾಯಿಸಿದರು.

(Visited 1 times, 1 visits today)