ತುಮಕೂರು


ಭಾರತ್ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಮುಂದಿನ 2028ರಲ್ಲಿ ನಡೆಯಲಿರುವ ಒಲಂಪಿಕ್ ತರಬೇತಿ ಕೇಂದ್ರಕ್ಕೆ ತುಮಕೂರಿನ ವಿವೇಕಾನಂದ ರೈಫಲ್ ಶೂಟಿಂಗ್ ಸಂಸ್ಥೆಯ ಐವರು ಉದಯೋನ್ಮುಖ ಶೂಟರ್‍ಗಳು ಆಯ್ಕೆಯಾಗಿದ್ದಾರೆ.
ಭಾರತದ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿ 2028ರಲ್ಲಿ ಲಾಸ್ ಎಂಜಲಿಸ್‍ನಲ್ಲಿ ನಡೆಯುವ ಒಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅಗತ್ಯ ತರಬೇತಿ ನೀಡುವ ಸಲುವಾಗಿ ರೈಫಲ್ ಶೂಟಿಂಗ್, ಸುಮ್ಮಿಂಗ್ ಹಾಗೂ
ಅಥ್ಲೇಟಿಕ್ ಕ್ರೀಡಾಪಟುಗಳನ್ನು ಆಯ್ಕೆ ಪ್ರಕ್ರಿಯೆ ನಡೆದಿದ್ದು,ತುಮಕೂರು ವಿವೇಕಾನಂದ ರೈಫಲ್ ಶೂಟಿಂಗ್ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸಿದ್ದಗಂಗಾ ಮಹಿಳಾ ಕಾಲೇಜಿನ ಕಿರಣ್‍ನಂದನ್,ವಿದ್ಯಾವಾಹಿನಿ ಕಾಲೇಜಿನ ಧ್ಯಾನ್ ಪಿ.ಎಂ.,ಬಿಷಪ್ ಸಾರ್ಜೇಂಟ್ ಶಾಲೆಯ ಪೂರ್ಣ ಚಂದ್ರ,ಬಟವಾಡಿಯ ಸೆಂಟ್ ಮೇರಿಸ್ ಶಾಲೆಯ ಸಾಧಿಕ್ ಸುಲ್ತಾನ್ ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ವಿಜೇತ ಶೆಟ್ಟಿ ಅವರುಗಳು ಆಯ್ಕೆಯಾಗಿದ್ದಾರೆ.
ಒಲಂಪಿಕ್ ತರಬೇತಿ ಕ್ಯಾಂಪ್‍ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಬೆಂಗಳೂರಿನ ವಿದ್ಯಾನಗರದಲ್ಲಿ ಸುಮಾರು 82 ಕೋಟಿ ರೂ ವೆಚ್ಚದಲ್ಲಿ ಸಿದ್ದಗೊಂಡಿರುವ ಖೇಲೋ ಇಂಡಿಯಾ ಕ್ರೀಡಾ ಹಾಸ್ಟಲ್ ನಲ್ಲಿ ಉಚಿತ ಊಟ, ವಸತಿ, ಶಿಕ್ಷಣದೊಂದಿಗೆ ತರಬೇತಿ ನೀಡಿ, 2028ರ ಒಲಂಪಿಕ್ಸ್‍ನಲ್ಲಿ ಭಾಗವಹಿಸಲು ಅಗತ್ಯವಿರುವ ತರಬೇತಿ ನೀಡುವ ಕೆಲಸವನ್ನು ಖೇಲೋ ಇಂಡಿಯಾ ಯೋಜನೆಯ ಮೂಲಕ ಮಾಡಲಾಗುತ್ತಿದೆ.
ಕ್ಯಾಂಪ್‍ಗೆ ಆಯ್ಕೆಯಾದ ಐದು ಜನರನ್ನು ವಿವೇಕಾನಂದ ರೈಫಲ್ ಶೂಟಿಂಗ್ ಅಕಾಡೆಮಿ ವತಿಯಿಂದ ಅಭಿನಂದಿಸಿ ಬಿಳ್ಕೋಡುಗೆ ನೀಡಿದರು.ಈ ವೇಳೆ ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್,ನಿವೃತ್ತ ಪ್ರಾಂಶುಪಾಲ ಮೇಜರ್ ಹೆಚ್.ಎನ್.ನಾರಾಯುಣಪ್ಪ,ಸಿದ್ದಗಂಗಾ ಮಹಿಳಾ ಕಾಲೇಜು ಪ್ರಾಂಶುಪಾಲ ಜಯಸ್ವಾಮಿ,ಸೆಂಟ್ ಮೇರಿಶ್ ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ರೀಟಾ ಕ್ಲಾರೆನ್ಸ್,ವಿವೇಕಾನಂದ ರೈಫಲ್ ಶೂಟಿಂಗ್ ಅಕಾಡೆಮಿ ತರಬೇತುದಾರರ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)