ಚಿಕ್ಕನಾಯಕನಹಳ್ಳಿ


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹೆಚ್ಚಿಸಿ 38 ವರ್ಷಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಲಂಬಾಣಿ ಜನಾಂಗಕ್ಕೆ ಶೇಕಡ ಮೂರರಿಂದ ನಾಲ್ಕುವರೆ ಹೆಚ್ಚಿಸಿದ್ದೇವೆ ಇದನ್ನು ಕಾಂಗ್ರೆಸ್ಸಿಗರು
ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಬಿಜೆಪಿ ಅಭ್ಯರ್ಥಿ ಜೆಸಿ ಮಾಧುಸ್ವಾಮಿ ಪ್ರಶ್ನಿಸಿದರು.
ಅವರು ಚಿಕ್ಕನಾಯಕನಹಳ್ಳಿ ಪಟ್ಟಣದ ತಾತಯ್ಯನಗೋರಿಗೆ ಹಾಗೂ ಹಳೆಯೂರು ಆಂಜನೇಯ ಸ್ವಾಮಿಗೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎ ಇ ರಘು ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಅರ್ಚನಾ ಭಟ್ ಇವರಿಗೆ ನಾಮಪತ್ರ ಸಲ್ಲಿಸಿದರು ನಂತರ ತಾಲೂಕು ಕಚೇರಿ ಎದುರು ಸಾರ್ವಜನಿಕರು ಉದ್ದೇಶಿಸಿ ಮಾತನಾಡುತ್ತಾ ನನ್ನ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯಗಳೇ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಈಗ ತಾಲೂಕು ಯಾವ ರೀತಿ ಇದೆ ಎಂದು ಜನರನ್ನು ಪ್ರಶ್ನಿಸಿದರು
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ನೀಡಿದ ಮನೆಗಳನ್ನು ಬಿಟ್ಟು ವೆಸ್ಟ್ ಇಂಡಲ್ಲಿ ಅಧಿಕಾರ ಮಾಡುತ್ತಿದ್ದರು ಎರಡು ಕೋಟಿ ಕಾರಿನಲ್ಲಿ ಓಡಾಡುತ್ತಾರೆ ಇವನು ನನಗೆ ದುರಹಂಕಾರಿ ಎಂದು ಹೇಳುತ್ತಾನೆ ನಾನು ನಮ್ಮ ಹಳ್ಳಿಯಲ್ಲೇ ವಾಸ ಮಾಡುತ್ತೇನೆ ಇವನ ತರಹ ಹೋಟೆಲ್ ನಲ್ಲಿ ವಾಸ ಮಾಡುತ್ತಿಲ್ಲ ಜಿಲ್ಲೆಯ 155 ಕೆರೆಗಳಿಗೆ ಬೇಸಿಗೆಯಲ್ಲಿ ನೀರು ಹರಿಸಿದ್ದೇನೆ ಸಣ್ಣ ನೀರಾವರಿ ಸಚಿವನಾಗಿ ತಾಲೂಕು ಕೆರೆಗಳು ತುಂಬಿರುವುದರಿಂದ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟ ತಪ್ಪಿದೆ
ಹೆಣ್ಣು ಮಕ್ಕಳು ಬೀದಿಗಳಲ್ಲಿ ಬಿಂದಿಗೆ ಹಿಡಿದು ನೀರು ತರುತ್ತಿದ್ದರು ಈಗ ಪ್ರತಿ ಹಳ್ಳಿಗಳಲ್ಲಿ ಪ್ರತಿ ಮನೆಮನೆಗೂ ನಲ್ಲಿಗಳನ್ನು ಹಾಕಿದ್ದೇನೆ ತಾಲೂಕಿನಲ್ಲಿ ಐದು ಹೊಸ ವಿದ್ಯುತ್ತು ಸ್ಟೇಷನ್ ಗಳನ್ನು ತಲೆ ತಾಯಿಗೆ ಮಕ್ಕಳ ಆಸ್ಪತ್ರೆ ಕೆಎಸ್‍ಆರ್ಟಿಸಿ ಡಿಪೆÇೀ ಪಾಲಿಟೆಕ್ನಿಕ್ ಹೊಸ ತಾಲೂಕ್ ಕಚೇರಿ ಚಿಕ್ಕರಾಜನಹಳ್ಳಿ ಮತ್ತು ಹುಳಿಯಾರ್ನಲ್ಲಿ ಪೆÇಲೀಸ್ ಸ್ಟೇಷನ್ ನಿರ್ಮಾಣ ಕಾರ್ಯಗಳು ಬಹಳಷ್ಟು ವೇಗವಾಗಿ ಮುಗಿಸಿದ್ದೇನೆ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಅಟಲ್ ಬುಜ್ಜಲ ಯೋಜನೆ ಅಡಿಯಲ್ಲಿ ಮನೆ ಮನೆಗೆ ನೀರು ಈ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಇದನ್ನು ಜನತೆ ಮರೆಯಬಾರದು ಎಂದರು
ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಕಾಂಗ್ರೆಸ್ ಬಿಜೆಪಿಯಲ್ಲಿ ಸಿಡಿದು ಬಂದವರನ್ನು ಸೆಳೆಯಲು ಬಿ ಫಾರಂ ಇಟ್ಟುಕೊಂಡು ಕಾಯುತ್ತಿದ್ದಾರೆ ಬಿಜೆಪಿ ಪಕ್ಷದಲ್ಲಿ ರಾಜಕೀಯ ಲಾಭ ಪಡೆದು ಅಧಿಕಾರದ ಊಟ ಮಾಡಿ ಈಗ ಬೇರೆ ಪಕ್ಷಕ್ಕೆ ಜಿಗಿದ್ದು ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಕಿರಣ್ ಕುಮಾರ್ ಅನ್ನು ಟೀಕಿಸಿದರು ಬಿಸಿಲು ತೆಗೆಯನ್ನು ಲೆಕ್ಕಿಸದೆ ಮಾಧುಸ್ವಾಮಿಯ ಅಭಿಮಾನಿಗಳು ಕಾರ್ಯಕರ್ತರು ಸಾಲು ಸಾಲಾಗಿ ರಸ್ತೆಯಲ್ಲಿಯೇ ಮೆರವಣಿಗೆ ಮೂಲಕ ತಾಲೂಕ ಕಚೇರಿಗೆ ಬರುವವರೆಗೂ ಬಿಜೆಪಿ ಅಭ್ಯರ್ಥಿ ಮಾಧುಸ್ವಾಮಿಗೆ ಸಾತ್ ನೀಡಿದರು ಈ ಸಂದರ್ಭದಲ್ಲಿ ಇವರನ್ನು ನಿಯಂತ್ರಿಸಲು ಪೆÇಲೀಸರು ಅರಸಹಸ ಪಟ್ಟರು ಸಾಧ್ಯವಾಗಲಿಲ್ಲ ಸಂಚಾರ ಕೂಡ ಅಸ್ತವ್ಯಸ್ತವಾಗಿತ್ತು
ನಾಮಪತ್ರ ಸಲ್ಲಿಸುವ ವೇಳೆ ಪತ್ನಿ ತ್ರಿವೇಣಿ ತಾಪಂ ಸದಸ್ಯ ಕೇಶವಮೂರ್ತಿ ವಕೀಲರುಗಳಾದ ಅನಿಲ್ ಕುಮಾರ್ ಹಾಗೂ ಚನ್ನಬಸವಯ್ಯ ಮೆರವಣಿಗೆಯಲ್ಲಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಹರಿಯಾಣ ಸಂಸದ ರಾಜೀವ್ ಜೈನ್ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು

(Visited 3 times, 1 visits today)