ಪಾವಗಡ
ತಾಲ್ಲೂಕಿನ ಹಿಂದುಳಿದ ಹಾಗೂ ಗಡಿ ಪ್ರದೇಶ, ಪಾವಗಡದಿಂದ 35 ಕಿ.ಮೀ. ದೂರವಿರುವ ವಡ್ರೇವು ಎಂಬ ಕುಗ್ರಾಮಕ್ಕೆ ಪೂಜ್ಯ ಸ್ವಾಮೀಜಿಯವರು ಅಲ್ಲಿಯ ಗೋಪಾಲಕರ ವಿನಂತಿಯ ಮೇರೆಗೆ ಹುಲ್ಲನ್ನು ವಿತರಿಸಲು ಸ್ವತಃ ತಾವೇ ಅಲ್ಲಿಗೆ ತೆರಳಿದ್ದರು. ಸುಮಾರು 150 ಹಸುಗಳಿಗೆ ಶುಭ್ರವಾದ ಹಾಗೂ ತಾಜಾ ಮೇವನ್ನು ವಿತರಿಸಿದ ದೃಶ್ಯ ನಿಜಕ್ಕೂ ಪೂಜ್ಯ ಸ್ವಾಮೀಜಿಯವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.
ಇಡೀ ರಾಜ್ಯ ಚುನಾವಣಾ ರಣಾಂಗಣದಲ್ಲಿ ತೊಡಗಿರುವಾಗ ದೂರದೂರದ ಮೂಕ ಪ್ರಾಣಿಗಳ ಮೂಕ ವೇದನೆ ಸ್ವಾಮೀಜಿಯವರ ಹೃದಯಕ್ಕೆ ತಟ್ಟಿದೆ. ಪ್ರತಿ ನಿತ್ಯ ಇಷ್ಟು ಜನರಿಗೆ ಹುಲ್ಲನ್ನು ನೀಡುವುದರ ಜೊತೆಗೆ ದೂರದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ನಾಯಕನಹಟ್ಟಿಗಳಿಗೆ ಹುಲ್ಲನ್ನು ವಿತರಿಸುತ್ತಿರುವುದು ಸ್ವಾಮೀಜಿಯವರ ಹೃದಯಾಂತರಾಳದ ವೇದನೆಯನ್ನು ಕಾಣಬಹುದಾಗಿದೆ.
ಗೋಮಾತೆಯ ಸೇವೆಯನ್ನು ಕಳೆದ 30 ವರ್ಷಗಳಿಂದ ನಡೆಸುತ್ತಿರುವುದು ಯಾವುದೇ ಸರ್ಕಾರಿ ಸಹಾಯವಿಲ್ಲದೆ ಕೇವಲ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀಮತಿ ಸುಧಾಮೂರ್ತಿ ರವರ ಮೆ.ಮೂರ್ತಿ ಫೌಂಡೇಷನ್ ಇವರ ನೆರವಿನಿಂದ ಮುಂಗಾರು ಮಳೆ ಬರುವವರೆಗೆ ನಡೆಯುತ್ತದೆ ಎಂದು ಪೂಜ್ಯ ಸ್ವಾಮೀಜಿಯವರು ತಿಳಿಸಿರುತ್ತಾರೆ.