ತುಮಕೂರು
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತತ್ವಜ್ಞಾನಿ ಆದಿ ಶಂಕರಾಚಾರ್ಯರ ದಿನಾಚರಣೆಯನ್ನು ತತ್ವಜ್ಞಾನಿಗಳ ದಿನವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಸಾಪ ಜಂಟಿಯಾಗಿ ಆಯೋಜಿಸಿದ್ದ ಶ್ರೀಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿಸಂಹಿತೆ ಅಗತ್ಯವಿರುವ ಎರಡು ಸಂಪತ್ತುಗಳು. ಇವುಗಳೇ ಮನುಷ್ಯನನ್ನು ಮೋಕ್ಷಕ್ಕೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂಬುದನ್ನುಜಾರಿಯಲ್ಲಿರುವುದರಿಂದ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುμÁ್ಟರ್ಚನೆ ಸಲ್ಲಿಸುವ ಮುಖೇನ ಸರಳ ಹಾಗೂ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ವಿದ್ಯೆ ಮತ್ತು ಜ್ಞಾನ ಈ ಪ್ರಪಂಚದಲ್ಲಿ ಬದುಕಲು ತಮ್ಮ ಅದೈತ ಸಿದ್ದಾಂತದ ಮೂಲಕ ಶ್ರೀಆದಿ ಶಂಕರಾಚಾರ್ಯರು ತೋರಿಸಿಕೊಟ್ಟಿದ್ದಾರೆ.ಎಲ್ಲರನ್ನು ಒಳಗೊಂಡ ಸೌಹಾರ್ಧ, ಸಾಮಾರಸ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡುವಂತೆ ಶಂಕರಾಚಾರ್ಯರು ಕರೆ ನೀಡಿದ್ದರು ಎಂದರು.
ಎಂ.ವಿ.ನಾಗರಾಜರಾವ್ ಮಾತನಾಡಿ, ಜಗತ್ತಿಗೆ ಶಿವನೇ ತಂದೆಯಾದರೆ, ಪಾವರ್ತಿಯೇ ತಾಯಿ ಎಂದು ಪ್ರತಿಪಾದಿಸಿದ ಆದಿ ಶಂಕರಾಚಾರ್ಯರು, ತಮ್ಮ ಸಿದ್ದಾಂತಗಳ ಬದುಕಿನ ದರ್ಶನ ಮಾಡಿಸಿದರು ಎಂದರು.
ವೇದಿಕೆಯಲ್ಲಿ ಟೂಡಾ ಅಧ್ಯಕ್ಷರಾದ ಹೆಚ್ ಜಿ ಚಂದ್ರಶೇಖರ್, ಶಂಕರ ಮಠದ ಮುಖ್ಯಸ್ಥರಾದ ನಂಜುಂಡೇಶ್ವರ, ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕುಮಾರ್,ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಸುರೇಶ್ ಹೊಳ್ಳ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಅನಂತರಾಮು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ ಎಂ ರವಿಕುಮಾರ್ ಉಪಸ್ಥಿತರಿದ್ದರು.