ಕೊರಟಗೆರೆ
ಲೋಕಸಭಾ ಚುನಾವಣೆಗೆ ನಾನು ನಿಲ್ಲೋದಿಲ್ಲ ಅಂತಾ ಹೇಳ್ದೆ.. ಆದರೇ ಕಾಂಗ್ರೆಸ್ ಪಕ್ಷದವ್ರು ನನಗೇ ತುಮಕೂರು ಜಿಲ್ಲೆಗೆ ಕರೆತಂದು ಸೋಲಿಸಿ ಅವಮಾನ ಮಾಡಿದ್ರು.. ನನಗೇ ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡ್ತೀದೆ.. ನಮ್ಮೇಲ್ಲರ ಆತ್ಮೀಯ ಸುಧಾಕರಲಾಲ್ ಗೆಲ್ಲಿಸಿ ನನ್ನ ಕಣ್ಣೀರು ಒರೆಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕೇಂದ್ರದ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನಾನು 1994ರಲ್ಲಿ ಸಿಎಂ ಆಗಿದ್ದಾಗ 11ಕ್ಷೇತ್ರದಲ್ಲಿ 9ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೇ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡ್ತೀದೆ. ಸುಧಾಕರಲಾಲ್ ಬಡಕುಟಂಬದ ಓಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ. 25ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡಜನರ ಸೇವೆ ಮಾಡ್ತೀದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿದ್ದಿರಾ 2023ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ ಸರಕಾರ ಸುಧಾಕರಲಾಲ್‍ಗೆ ವಿಶೇಷ ಸ್ಥಾನಮಾನ ನೀಡ್ತಾರೇ ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಭ್ರಾಹಿಂ ಮಾತನಾಡಿ ಜೆಡಿಎಸ್ ಪಕ್ಷ ಮುಸ್ಲಿಂ ಸಮಾಜಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಯಾವುದೇ ಪಕ್ಷ ರಾಜ್ಯಾಧ್ಯಕ್ಷನ ಪಟ್ಟ ನೀಡಿಲ್ಲ ಆದರೇ ಜೆಡಿಎಸ್ ನನಗೇ ನೀಡಿದೆ. ಮುಸ್ಲಿಂ ಸಮಾಜ ಜೆಡಿಎಸ್ ಪಕ್ಷದ ಪರವಾಗಿ ಇರಬೇಕಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿಗೆ ರೈತರ ಚಿಂತೆ ಆದರೇ ಪರಮೇಶ್ವರ್‍ಗೆ ಜೀರೋ ಟ್ರಾಫಿಕ್ ಚಿಂತೆ. ಮುಸ್ಲಿಂ ಮೀಸಲಾತಿ ರದ್ದತಿಯ ಬಗ್ಗೆ ಪರಮೇಶ್ವರ್ ಮಾತನಾಡಿದ್ರಾ ನೀವೇ ಹೇಳಿ. ಚುನಾವಣೆ ಭಾಷಣ ಮತ್ತು 1ಸಾವಿರ ಹಣಕ್ಕೆ ನಾವು ಯಾಮಾರಬಾದ್ರು ಎಂದು ಮನವಿ ಮಾಡಿದರು.
ಜೆಡಿಎಸ್ ಹಿಂದುಳಿದ ವರ್ಗಗಳ ಕಾರ್ಯಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ನಿಮ್ಮ ಮನೆ ಬಾಗಿಲಿಗೆ ಮತ ಯಾಚನೆಗೆ ಬರುವ ಜನಸೇವಕ ಮತ್ತೇ ನಿಮ್ಮ ಬಳಿಯ ಇರ್ತಾರೇ. ಚುನಾವಣೆ ವೇಳೆಯಲ್ಲೇ ಕೊರಟಗೆರೆ-ತುಮಕೂರು ನಗರಕ್ಕೆ ಮುಖಂಡರನ್ನ ಕರೆಸಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ನಾಯಕ ಮುಂದೆ ನಿಮ್ಮ ಕೈಗೇ ಸೀಗ್ತಾರೇ. 2023ಕ್ಕೆ ಅಭಿವೃದ್ದಿಯ ಚಿಂತನೆಯುಳ್ಳ ಜನನಾಯಕ ಸುಧಾಕರಲಾಲ್ ಗೆಲುವು ಖಚಿತ ಎಂದು ತಿಳಿಸಿದರು.
ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಶನ್‍ಬೇಗ್, ಎಸ್‍ಸಿ ಘಟಕದ ಕಾರ್ಯಧ್ಯಕ್ಷ ಶ್ರೀರಾಮ್, ಜಿಲ್ಲಾಧ್ಯಕ್ಷ ಅಂಜಿನಪ್ಪ, ಮಹಿಳಾಧ್ಯಕ್ಷೆ ಕುಸುಮಾ, ಹಿರಿಯ ಮುಖಂಡ ಅಂದಾನಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್,ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ಸಿದ್ದಮಲ್ಲಪ್ಪ, ಪ್ರಕಾಶ್, ಪಾರುಕ್, ಲಕ್ಷ್ಮೀನರಸಪ್ಪ, ವೆಂಕಟೇಶ್, ರಮೇಶ್, ಲಕ್ಷ್ಮೀಕಾಂತ, ಸಂತೋಷಗೌಡ, ಕಿಶೋರ್, ನಯಾಜ್, ರವಿಕುಮಾರ್, ಮರುಡಪ್ಪ, ರೇಣುಕಾ ಸೇರಿದಂತೆ ಇತರರು ಇದ್ದರು.