ತುಮಕೂರು
ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ಸಂಪನ್ಮೂಲ ಕೇಂದ್ರದಲ್ಲಿ 890ನೇ ಬಸವೇಶ್ವರರ ಜಯಂತಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಇಕ್ಬಾಲ್ ಅಹಮದ್ ಸಮಿತಿಯ ಕಛೇರಿಗೆ ಭೇಟಿ ನೀಡಿ ಬಸವಣ್ಣನವರ ಜಯಂತಿಯಲ್ಲಿ ಬಾಗಿಯಾಗಿ ಮತಯಾಚನೆ ಮಾಡಿ ಮಾತನಾಡಿದರು.
ನಾನು ನಜರಾಬಾದ್ ಸ್ಲಂನಲ್ಲಿ ಜನಿಸಿ ಸ್ಲಂ ಜನರ ಕಷ್ಟ ಸುಖದ ಅನುಭವವಾಗಿದೆ ಈಗ ಈದ್ಗಾ ಮೊಹಲ್ಲದ್ದಲ್ಲಿದ್ದೇನೆ ಹಾಗಾಗಿ ನಾನು ಸ್ಲಂ ನಿವಾಸಿಯಾಗಿ ಬದುಕಿದ ಅನುಭವವಿದೆ ಕಳೆದ 20 ವರ್ಷಗಳಿಂದ ಸ್ಲಂ ಸಮಿತಿ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ, ತುಮಕೂರು ನಗರ ಮಾತ್ರವಲ್ಲದೇ ಜಿಲ್ಲೆಯಲ್ಲಿ ಸಾವಿರಾರು ಸ್ಲಂ ಜನರಿಗೆ ಸಂವಿಧಾನದ ಆಶಯದಂತೆ ಹಕ್ಕುಗಳನ್ನು ದೊರಕಿಸುವ ಭೂಮಿ ಮತ್ತು ವಸತಿ ಮೇಲೆ ಕೆಲಸ ಮಾಡಿ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಸಂಘಟನೆ ತಡೆದಿದೆ, ಹೋರಾಟದಿಂದ ತುಮಕೂರು ನಗರದಲ್ಲಿ ಸಾವಿರಾರು ಸ್ಲಂ ಜನರು, ಬಡವರು ಪ್ರತಿಫಲ ಪಡೆದಿದ್ದಾರೆ ಇದರಲ್ಲಿ ದಿಬ್ಬೂರು ವಸತಿ ಮತ್ತು ಮಾರಿಯಮ್ಮ ವಸತಿ ಸಂಕೀರ್ಣ ಸೇರಿದಂತೆ ನಗರದಲ್ಲಿ 5 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ದೊರಕಿಸಿಕೊಟ್ಟಿರುವುದು ಸುಲಭವಲ್ಲ ಇತ್ತಿಚೆಗೆ ನಿವೇಶನ ರಹಿತರ ಹೋರಾಟದಿಂದ 17 ಎಕರೆ ಭೂಮಿ ನಗರ ಪಾಲಿಕೆಗೆ ಹಸ್ತಾಂತರಿಸಿರುವುದರಲ್ಲಿ ಸಂಘಟನೆ ಪಾತ್ರ ಇದೆ ನನಗೆ ನೀವೆಲ್ಲರು ಶಕ್ತಿ ತುಂಬಿ ಅಧಿಕಾರಿ ನೀಡಿದರೆ ಸ್ಲಂ ಸಮಿತಿಯ ಮಾರ್ಗದರ್ಶನದಲ್ಲಿ ನಗರದಲ್ಲಿರುವ ನಿವೇಶನ ರಹಿತರಿಗೆ ಷಫಿ ಅಹಮದ್ ರೀತಿಯಲ್ಲಿ ಸೈಟು ಮತ್ತು ಮನೆಗಳನ್ನು ನೀಡುತ್ತೇನೆ. ಹಾಗೇ ಶಾಸಕರ ಅನುದಾನದಲ್ಲಿ ಆಧ್ಯತೆ ನೀಡಿ ಮಾಧರಿ ಸ್ಲಂಗಳನ್ನು ಅಭಿವೃದ್ಧಿ ಪಡಿಸುತ್ತೇನೆ ಸ್ಲಂ ಸಮಿತಿಗೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನಗರಪಾಲಿಕೆ, ಆಶ್ರಯ ಸಮಿತಿಯಲ್ಲಿ ಆಧ್ಯೆತೆ ನೀಡುತ್ತೇನೆ ಈ ಮೂಲಕ ಸಮಸಮಾಜ ನಿರ್ಮಾಣಕ್ಕೆ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತೇನೆ ಹಾಗಾಗಿ ನನಗೆ ತುಮಕೂರು ಸ್ಲಂ ಜನರು ಮತ ನೀಡಿ ಬೆಂಬಲಿಸಬೇಕು ಸ್ಲಂ ಜನರ ಪ್ರಣಾಳಿಕೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ ಎಂದರು.
ನಂತರ ಮಾತನಾಡಿದ ನಗರ ಸಭೆ ಮಾಜಿ ಅಧ್ಯಕ್ಷರು ಮತ್ತು ಟಿ.ಜಿ.ಎಂ.ಸಿ ಬ್ಯಾಂಕ್ ನಿರ್ದೇಶಕರಾದ ಎಂ.ಪಿ ಮಹೇಶ್ ದಯೆಯೇ ಇಲ್ಲದ ಧರ್ಮ ಯಾವುದು ಎಂದ ಬಸವಣ್ಣ ವಿದ್ಯೆಗಿಂದ ಅನುಭವಕ್ಕೆ ಪ್ರಾತಿನಿಧ್ಯ ನೀಡಿ ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ಧಯೇ ದೊಡ್ಡದ್ದು, ವಿದ್ಯೆ ದೊಡ್ಡದಲ್ಲ ಅನುಭವ ದೊಡ್ಡದು ಎಂಬ ಸತ್ಯವನ್ನು ಬಸವಣ್ಣ ಕಂಡುಕೊಂಡಿದ್ದರು ನಮ್ಮ ನಡೆ ನುಡಿ, ಆಚಾರ ವಿಚಾರ ಬಸವಣ್ಣನವರ ವೈಚಾರಿಕತೆಯನ್ನು ಅನುಸರಿಸುತ್ತಿದ್ದೇನೆ, ಇದನ್ನೇ ನಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೀನ ದಲಿತರಿಗೆ, ಸ್ಲಂ ನಿವಾಸಿಗಳಿಗೆ ಮತ್ತು ಎಲ್ಲಾ ಜಾತಿಯ ಬಡವರಿಗೆ ಕೆಲಸ ಮಾಡಿದ್ದೇನೆ, ತುಮಕೂರು ಅಭಿವೃದ್ಧಿ ಮತ್ತು ಸಾಮಾನ್ಯ ಜನರಿಗೆ ಅಧಿಕಾರ ದೊರೆಯಲು ಬದಲಾವಣೆ ಬಯಸುತ್ತಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಇಕ್ಬಾಲ್ ಅಹಮದ್ ರವರಿಗೆ ತಾವು ಬೆಂಬಲ ನೀಡಿದರೆ ಸ್ಲಂ ಜನರ ಎಲ್ಲಾ ಬೇಡಿಕೆಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ರಾಜ್ಯದ ಸ್ಲಂ ನಿವಾಸಿಗಳ 12 ಅಂಶಗಳ ಪ್ರಣಾಳಿಕೆಯನ್ನು ನೀಡಿ ಸಂವಿಧಾನ ರಕ್ಷಣೆ ಮತ್ತು ಬಹುತ್ವ ಕರ್ನಾಟಕ ಉಳಿವಿಗಾಗಿ ನಮ್ಮ ಮತವನ್ನು ವಸತಿ ಹಕ್ಕಿಗೆ, ನಗರ ಉದ್ಯೋಗ ಖಾತ್ರಿಗೆ ಮತ್ತು ಬಡತನ ಮುಕ್ತಕ್ಕಾಗಿ ಚಲಾಯಿಸುತ್ತೇವೆ. ಎಂದರು
ಕಾರ್ಯದರ್ಶಿ ಅರುಣ್ ತುಮಕೂರು ನಗರ ವಿಧಾನಸಭೆಗೆ ಸಂಬಂದಿಸಿದಂತೆ 6 ಪ್ರಮುಖ ಬೇಡಿಕೆಗಳ ಪ್ರಣಾಳಿಕೆಯನ್ನು ನೀಡಿ ಸ್ಲಂ ಜನರ ಸಮಗ್ರ ಅಭಿವೃದ್ಧಿಗೆ ಜೊತೆಯಾಗುವಂತೆ ಒತ್ತಾಯಿಸಿದರು.
ಗೌರವಧ್ಯಕ್ಷರಾದ ದೀಪಿಕಾ ಸ್ವಾಗತಿಸಿದರು ಸಹಕಾರ್ಯದರ್ಶಿ ತಿರುಮಲಯ್ಯ ವಂದಿಸಿದರು, ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಾರದಮ್ಮ, ಗಂಗಾ, ರಂಗನಾಥ್, ಅನುಪಮಾ, ಪುಟ್ಟರಾಜು, ಶಾಬುದ್ದೀನ್, ಕೆಂಪಣ್ಣ, ತಿರುಮಲಯ್ಯ, ಮಂಗಳಮ್ಮ,ರಾಜ,ಮುರುಗ,ವೆಂಕಟೇಶ್,ಅಶ್ವತ್ ಯುವಘಟಕದ ಕೃಷ್ಣಮೂರ್ತಿ, ಮುಬಾರಕ್, ಮೋಹನ್, ಧನಂಜಯ್, ಲೋಕೇಶ್, ಗಣೇಶ್,ಪ್ರಥಮ್ ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ ಮುಂತಾದವರು ಪಾಲ್ಗೊಂಡಿದ್ದರು.