ತುಮಕೂರು


ಕೇಂದ್ರದ ಜನತೆ ಮೋಸಗಾರ ಶಾಸಕರನ್ನು ಮನೆಗೆ ಕಳುಹಿಸಿ, ಅಭಿವೃದ್ದಿಯ ಹರಿಕಾರರಾಗಿರುವ ಸುರೇಶಗೌಡ ರನ್ನು ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿದ್ದು, ಮೇ.13ರ ಫಲಿತಾಂಶದಲ್ಲಿ ಅದು ವ್ಯಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶಗೌಡ ಅವರ ಪರವಾಗಿ ಮತಯಾಚಿಸಲು ಆಗಮಿಸಿ,ಕೈದಾಳದ ಶ್ರೀಚನ್ನಕೇಶವಸ್ವಾಮೀಗೆ ಪೂಜೆ ಸಲ್ಲಿಸಿದ ನಂತರ ತೆರೆದ ಜೀಪಿನಲ್ಲಿ ಮೆರವಣಿಗೆಯ ವೇಳೆ ಮಾತನಾಡಿದ ಅವರು,ಸುರೇಶಗೌಡರ ಕಾಲದಲ್ಲಿ ಜಕಣಚಾರಿ ಹುಟ್ಟಿದ ಈ ಊರಿನಲ್ಲಿ ಅವರ ಹೆಸರಿನಲ್ಲಿಯೇ ಒಂದು ಸಮುದಾಯಭವನವನ್ನು ನಿರ್ಮಿಸಿದರೆ, ಹಾಲಿ ಶಾಸಕರು ಅದರ ಬಾಗಿಲು ತೆಗೆಯುವ ಗೋಜಿಗೂ ಹೋಗದೆ, ಪಾಳು ಬೀಳುವಂತೆ ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಅಭಿವೃದ್ದಿಯ ಹರಿಕಾರರು ಬೇಕೋ, ಇಲ್ಲ ಜನರಿಗೆ ಮೋಸ ಮಾಡಿ ಗೆದ್ದ ಶಾಸಕರು ಬೇಕೋ ನೀವೇ ತೀರ್ಮಾನ ಮಾಡಿಕೊಂಡು ಮತ ನೀಡಿ ಎಂದರು.
ಹಾಲಿ ಶಾಸಕರನ್ನು ಮೋಸಗಾರ ಎಂದು ನಾನು ಹೇಳುತ್ತಿಲ್ಲ.ಈ ರಾಜ್ಯದ ಉಚ್ಚ ನ್ಯಾಯಾಲಯ ಹೇಳುತ್ತಿದೆ.ದೇಶ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರ ಜನರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಹತ್ತಾರು ವರ್ಷಗಳ ಕಾಲ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಆಳ್ವಿಕೆ ಮಾಡಿದ್ದರೂ ರೈತರು, ಬಡವರು ಇವರಿಗೆ ಜ್ಞಾಪಕಕ್ಕೆ ಬರಲಿಲ್ಲ. ರೈತರ ಖಾತೆಗೆ ನೇರವಾಗಿ ಹಣ ಹಾಕಲು ಬಿಜೆಪಿಯೇ ಬರಬೇಕಾಯಿತು.ಉಜ್ವಲ ಯೋಜನೆಯ ಮೂಕ ಗ್ಯಾಸ್,ನಿರ್ಮಲ್ ಭಾರತ್ ಯೋಜನೆಯ ಮೂಲಕ ಶೌಚಾಲಯ,ಜನಧನ್ ಯೋಜನೆಯ ಮೂಲಕ ಬ್ಯಾಂಕ್ ಖಾತೆ ನೀಡಿದರೆ, ರಾಜ್ಯದ ಬಿಜೆಪಿ ಸರಕಾರ ವಿದ್ಯಾನಿಧಿ,ಉಚಿತ ಸೈಕಲ್,ಹಾಲಿಗೆ ಪ್ರೋತ್ಸಾಹಧನ ನೀಡಿ ಬಡಜನರು ಘನತೆಯಿಂದ ಬಾಳುವ ಅವಕಾಶ ಕಲ್ಪಿಸಿದ್ದು ನರೇಂದ್ರಮೋದಿ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಭಾರತೀಯ ಜನತಾಪಾರ್ಟಿ ಸರಕಾರ.ಇದನ್ನು ಪ್ರತಿಯೊಬ್ಬ ಮತದಾರರು ಅರಿತುಕೊಳ್ಳಬೇಕೆಂದರು.
ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಜಾರಿಯಾಗಿದ್ದು ಸುರೇಶಗೌಡರು ಶಾಸಕರಾಗಿದ್ದ ಕಾಲದಲ್ಲಿ,ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರೊಂದಿಗೆ ಜಗಳ ಮಾಡಿ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ದಿ ಮಾಡಿದ್ದಾರೆ.ಆದರೆ 2018 ರಲ್ಲಿ ನಕಲಿ ಬಾಂಡ್ ಹಂಚಿ ಆಯ್ಕೆಯಾದ ಶಾಸಕರು ಅಭಿವೃದ್ದಿ ಬಿಟ್ಟು ಥೈಲಾಂಡ್, ಗೋವಾ ಅಂತ ಪ್ರವಾಸ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಯನ್ನು ಮರೆತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮನೆ ಮಠ ಬಿಟ್ಟು ಸುರೇಶಗೌಡರು ನಿಮ್ಮ ಸೇವೆ ಮಾಡಿದ್ದಾರೆ.ಮುಂಬರುವ ಬಿಜೆಪಿ ಸರಕಾರದ ಅವರು ಸಾವಿರಾರು ಕೋಟಿ ಅನುದಾನ ತಂದು ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಪಡಿಸಲಿದ್ದಾರೆ ಎಂದು ನಳೀನಿಕುಮಾರ್ ಕಟೀಲ್ ಭರವಸೆ ನೀಡಿದರು.
ಕೈದಾಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಅವರನ್ನು ಮಹಿಳೆಯರು ಪೂರ್ಣಕುಂಬ ಸ್ವಾಗತ ಮಾಡಿದರು.ನಂತರ ಕೈದಾಳದ ಶ್ರೀಚನ್ನಕೇಶವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.ತದನಂತರ ತೆರೆದ ಜೀಪಿನಲ್ಲಿಯೇ ಹೆತ್ತೇನಹಳ್ಳಿಗೆ ತೆರಳಿ, ಶ್ರೀಹೆತ್ತೇನಹಳ್ಳಿ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರು
ಈ ವೇಳೆ ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಹೆಬ್ಬಾಕ,ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ,ನ.ಲ.ನರೇಂದ್ರಬಾಬು, ವೈ.ಹೆಚ್.ಹುಚ್ಚಯ್ಯ, ಬೆಳ್ಳಿಲೋಕೇಶ್‍ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಎನ್.ಶಂಕರಪ್ಪ,ಸಿದ್ದೇಗೌಡ,ಉಮಾಶಂಕರ್, ಶಿವಕುಮಾರ್,ರಾಜಣ್ಣ,ನರಸಿಂಹಮೂರ್ತಿ, ವೆಂಕಟೇಶ್, ಉಪಸ್ಥಿತರಿದ್ದರು.

(Visited 3 times, 1 visits today)