ತುಮಕೂರು 


ಕ್ಷೇತ್ರದ ಜನರಿಗಷ್ಟೇ ಅಲ್ಲದೇ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೂ ಮೋಸ ಮಾಡಿರುವ ಶಾಸಕ ಗೌರಿಶಂಕರ್ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಜೆಡಿಎಸ್ ನಿಂದ ಹೊರ ಬಂದಿರುವ ಮುಖಂಡರು ಹೇಳಿದರು.
ಜೆಡಿಎಸ್ ಮಾಜಿ ಮುಖಂಡರಾದ ಪಂಚೆ ರಾಮಚಂದ್ರಯ್ಯ, ವೈ.ಟಿ.ನಾಗರಾಜ್, ಹೆತ್ತೇನಹಳ್ಳಿ ವೆಂಕಟೇಶ್, ಬೀಮಸಂದ್ರ ಕೃಷ್ಣಪ್ಪ,ಕೆಂಪರಾಜ್, ವೈಟಿ ನಾಗರಾಜ್, ಬೆಳ್ಳಿ ಲೋಕೇಶ್ ಜಯಂತ್ ಗೌಡ, ಮತ್ತಿತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗೌರಿಶಂಕರ್ ನಕಲಿ ಬಾಂಡ್ ಗಳನ್ನು ಹಂಚುವ ಮೂಲಕ ಜನರನ್ನು ವಂಚಿಸಿ ಕಳೆದ ಸಲ ಗೆಲುವು ಸಾಧಿಸಿದರು. ಪ್ರತಿ ಬಡ ಮಕ್ಕಳಿಗೂ ಎರಡು ಲಕ್ಷ ರೂಪಾಯಿ ಬರಲಿದೆ ಎಂದು ಹೇಳಿದ್ದರು. ಆನಂತರ ಅವುಗಳು ನಕಲಿ ಬಾಂಡ್ ಗಳು ಎಂಬುದು ಗೊತ್ತಾಯಿತು. ಇದೇ ವಿಚಾರದಲ್ಲಿ ಹೈ ಕೋರ್ಟ್ ಕೂಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ. ಸದ್ಯ , ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ನಡೆಸಬೇಕಾಗಿದೆ. ಸದ್ಯಕ್ಕೆ ತಡೆಯಾಜ್ಞೆ ಸಿಕ್ಕಿದೆಯಷ್ಟೆ. ಜನರ ಕಣ್ಣಲ್ಲಿ ಏನು ತಪ್ಪಾಗಿಲ್ಲ ಎಂದು ತೋರಿಸಿಕೊಳ್ಳಲಷ್ಟೇ ಸ್ಪರ್ಧೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ಅವರನ್ನು ಜಿಲ್ಲೆಯಿಂದಲೇ ಓಡಿಸಬೇಕಾಗಿದೆ. ನಮಗೆ ಕ್ಷೇತ್ರದ ಅಭಿವೃದ್ಧಿ ಬೇಕಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ಯಾರನ್ನೂ ಬೆಳೆಸಲಿಲ್ಲ. ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ನಿಂತ ನಮ್ಮನ್ನೇ ಸೋಲಿಸಿದರು. ಕೇವಲ ನಮ್ಮಿಂದ ಹಣ ಖರ್ಚು ಮಾಡಿಸಿ ಸಾಲಗಾರರನ್ನಾಗಿ ಮಾಡಿದರು. ಪಂಚಾಯತಿ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರು ಗೆದ್ದಿದ್ದರೂ ಸಹ ಯಾರನ್ನೂ ಸಹ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಎಲ್ಲರನ್ನೂ ಬಲಿಪಶು ಮಾಡಿದರು.
ಮಾತೆತ್ತಿದ್ದರೆ ಸುಳ್ಳು, ಪಕ್ಷದ ಕಾರ್ಯಕರ್ತರಲ್ಲೆ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ ಕೆಲಸ ಮಾಡಿದರು ಎಂದರು.
ಕೊರೊನಾ ಕಾಲದಲ್ಲಿ ವ್ಯಾಕ್ಸೀನ್ ನೀಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಇದರಲ್ಲಿ ಶಾಸಕರು ಎ-1 ಆರೋಪಿಯಾಗಿದ್ದಾರೆ. ನಕಲಿ ಕೊರೊನಾ ವ್ಯಾಕ್ಸೀನ್ ಪಡೆದು ಯಾರಾದರೂ ಸತ್ತಿದ್ದಾರಾ ಎಂಬ ಬಗ್ಗೆ ಪೆÇಲೀಸ್ ತನಿಖೆ ನಡೆಯಬೇಕಾಗಿದೆ. ಮತಕೋಸ್ಕರ್ ಜನರಿಗೆ ವಿಷ ಉಣಿಸಲು ಈ ಶಾಸಕರು ಹಿಂದೆ- ಮುಂದೆ ನೋಡುವುದಿಲ್ಲ. ಇದರಿಂದ ನಾವೆಲ್ಲ ರೋಸೆತ್ತಿದ್ದವು ಎಂದರು.
ಕಾರ್ಯಕರ್ತರಿಗೆ ನಕಲಿ ಚೆಕ್ ಗಳನ್ನು ಕೊಟ್ಟು ಮೋಸ ಮಾಡಿದ್ದಾರೆ. ಇಂಥ ಸಾವಿರಾರು ಚೆಕ್ ಗಳನ್ನು ಇಟ್ಟುಕೊಂಡು ಸಾಮಾನ್ಯ ಜನರು ನಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಜನರಿಗೆ ಹೀಗೆಲ್ಲ ಮೋಸ ಮಾಡುವುದು ತರವಾ ಎಂದು ಪ್ರಶ್ನಿಸಿದರು.
ಕೊರೊನಾ ಕಿಟ್ ದುಡ್ಡು ನಮ್ಮದು
ಕೊರೊನಾ ಕಾಲದಲ್ಲಿ ಜನರಿಗೆ ಹಂಚಿಸಿದ ಕಿಟ್, ಸಹಾಯದ ಹಣವೆಲ್ಲ ನಮ್ಮದು. ಮುಖಂಡರು, ಕಾರ್ಯಕರ್ತರ ಕೈಯಿಂದಲೇ ಖರ್ಚು ಮಾಡಿಸಿ ಸಾಕಷ್ಟು ಜನ ಸಾಲಗಾರರಾಗಿ ಊರು ಬಿಡುವಂತೆ ಮಾಡಿದರು. ಕಾರ್ಯಕರ್ತರ ಬಳಿ ಹಣ ಖಾಲಿಯಾಗುತ್ತಿದ್ದಂತೆ ಹೊಸಬರನ್ನು ಹುಡುಕುತ್ತಾರೆ. ತಮ್ಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಹುಡುಗರಿಗೆ ಪ್ರೀ ಸೀಟ್ ಕೊಡುವ ಭರವಸೆ ನೀಡಿದ್ದರು. ಆದರೆ ಯಾರಿಗೂ ಕೊಟ್ಟಿಲ್ಲ. ಬರೀ ಬೊಗಳೆ ಆಸಾಮಿ. ಇಡೀ ಕ್ಷೇತ್ರದ ಜನರಿಗೆ ನಾನಾ ಥರದಲ್ಲಿ ಮೋಸ ಮಾಡಿದ್ದಾರೆ. ಮೋಸದ ತಕ್ಕ ಪಾಠ ಈ ಸಲ ಕಲಿಸುತ್ತೇವೆ ಎಂದರು.
16 ಸಾವಿರ ನಕಲಿ ಬಾಂಡ್ ಪಡೆದ ಮಕ್ಕಳ ತಂದೆ ತಾಯಿಗಳು ಯಾರೂ ಈ ಸಲ ಶಾಸಕರಿಗೆ ಮತ ಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ನಕಲಿ ಬಾಂಡ್ ಪಡೆದ ಪ್ರತಿ ಮಕ್ಕಳ ಪೆÇೀಷಕರನ್ನು ಭೇಟಿ ಶಾಸಕರಿಗೆ ಮತ ಹಾಕದಂತೆ ಮನವಿ ಮಾಡುತ್ತೇವೆ. ಮೋಸಕ್ಕೊಳಗಾದ ಹದಿನಾರು ಸಾವಿರ ಮಕ್ಕಳ ಪೆÇೀಷಕರ ಸಭೆ ಮಾಡಲು ಸಿದ್ಧತೆ ಮಾಡಿದ್ದೇವೆ. ಏನೇ ಆಗಲೀ, ತುಮಕೂರು ಜಿಲ್ಲೆಯಿಂದ ಅವರನ್ನು ಓಡಿಸಿಯೇ ಸಿದ್ದ ಎಂದರು.

(Visited 5 times, 1 visits today)