ಕೊರಟಗೆರೆ
ಎತ್ತಿನಹೊಳೆ ಯೋಜನೆಯಡಿ ಬೈರಗೊಂಡ್ಲು ಬಳಿ ಬಫರ್ ಡ್ಯಾಂನಿಂದ 109ಕೆರೆಗಳಿಗೆ ನೀರು ಹರಿಯಲಿದೆ.. ಬಯಲುಸೀಮೆ ಪ್ರದೇಶದ ಸಾವಿರಾರು ರೈತಾಪಿವರ್ಗದ ನೀರಾವರಿಯ ಕನಸು ಇನ್ನೇರಡು ವರ್ಷದಲ್ಲಿ ನನಸಾಗಲಿದೆ.. 2023ಕ್ಕೆ ಕಾಂಗ್ರೆಸ್ ಸರಕಾರ ಮತ್ತೇ ಅಧಿಕಾರಕ್ಕೆ ಬರುತ್ತೇ.. ಕೊರಟಗೆರೆ ಕ್ಷೇತ್ರದಿಂದ ನಾನು ಶಾಸಕನಾಗಿ ಆಯ್ಕೆ ಆಗ್ತೀನಿ. ಕೊರಟಗೆರೆಯು ಮತ್ತಷ್ಟು ಅಭಿವೃದ್ದಿಯ ಪಥದತ್ತಾ ಸಾಗುವುದು ಖಚಿತ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಪಾತಗಾನಹಳ್ಳಿ ಮತ್ತು ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ 25ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರದಲ್ಲಿ 7ವಸತಿ ಶಾಲೆ ಮತ್ತು ಅತ್ಯುತ್ತಮ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. 5ವರ್ಷದ ಅವಧಿಯಲ್ಲಿ 2500ಕೋಟಿ ಅನುಧಾನ ತಂದು ಕೊರಟಗೆರೆ ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸ ಮಾಡಿದ್ದೇನೆ. 2023ಕ್ಕೆ ಮತ್ತೇ ನಾನು ಗೆದ್ದು 5ಸಾವಿರ ಕೋಟಿ ಅನುಧಾನ ತರುತ್ತೇನೆ. ನನಗೇ ರಾಜಕೀಯ ಶಕ್ತಿ ನೀಡಿದ ಕೊರಟಗೆರೆ ಕ್ಷೇತ್ರದ ಜನರ ಋಣವನ್ನು ತೀರಿಸುವ ಕೆಲಸವನ್ನು ಯಾವುದೇ ಪಕ್ಷಬೇದ ಇಲ್ಲದೇ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ತುಮಕೂರು ಮಾಜಿ ನಗರಸಭಾ ಅಧ್ಯಕ್ಷ ವಾಲೇಚಂದ್ರಯ್ಯ ಮಾತನಾಡಿ ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5ವರ್ಷದಿಂದ 2500ಕೋಟಿ ಅನುಧಾನ ಬಂದಿದೆ. 2023ಕ್ಕೆ ಮತ್ತೇ ಪರಮೇಶ್ವರ್ ಗೆದ್ದು 10ಸಾವಿರ ಕೋಟಿ ಅನುಧಾನ ತರ್ತಾರೇ. ಮಾಜಿ ಡಿಸಿಎಂ ಅವರ ಸಹಿ ಇರುವ ಪತ್ರವು ಸಹ ವಿಧಾನಸೌಧದಲ್ಲಿ ಕ್ಷಣಾರ್ಧದಲ್ಲಿ ಕೆಲಸ ಮಾಡಲಿದೆ. ಕೊರಟಗೆರೆ ಕ್ಷೇತ್ರವು ಅಭಿವೃದ್ದಿಯ ಪಥದತ್ತಾ ಸಾಗಲು ಜನರ ಆರ್ಶಿವಾದ ಅತಿಮುಖ್ಯ ಆಗಿದೆ ಎಂದು ಮನವಿ ಮಾಡಿದರು.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್ ಮಾತನಾಡಿ 30ಕೋಟಿಯ ಅಂಬೇಡ್ಕರ್ ವಸತಿ ಶಾಲೆಯು ಶೈಕ್ಷಣಿಕ ಕ್ಷೇತ್ರದ ಕೊಡುಗೆ. ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ರೈತರಿಗೆ ವರದಾನ. 550ಕೋಟಿ ವೆಚ್ಚದ ಕೆಎಸ್‍ಆರ್‍ಫಿ ಘಟಕವು ನಿರುದ್ಯೋಗಿ ಯುವಕರಿಗೆ ಆಸರೆ ಆಗಲಿದೆ. ಕೋಟ್ಯಾಂತರ ರೂ ವೆಚ್ಚದಲ್ಲಿ ರಸ್ತೆ, ಚರಂಡಿ, ಕಟ್ಟಡ ಮತ್ತು ಮನೆಗಳನ್ನು ನೀಡಿದ್ದಾರೆ. ಇದು ಕೋಳಾಲ ಜಿಪಂ ಕ್ಷೇತ್ರಕ್ಕೆ ಪರಮೇಶ್ವರ್ ನೀಡಿರುವ ಅಭಿವೃದ್ದಿಯ ಕಾಣಿಕೆ ಎಂದು ತಿಳಿಸಿದರು.
ಪ್ರಚಾರದ ವೇಳೆ ತಾಪಂ ಮಾಜಿ ಅಧ್ಯಕ್ಷ ಕೆಂಪರಾಮಯ್ಯ, ಯುವಧ್ಯಕ್ಷ ವಿನಯ್, ಮಹಿಳಾ ಅಧ್ಯಕ್ಷ ಜಯಮ್ಮ, ಜಿಲ್ಲಾ ಕಾರ್ಯದರ್ಶಿ ಕವಿತಾ, ಮುಖಂಡರಾದ ಜೆಟ್ಟಿನಾಗರಾಜು, ಕೋಳಾಲ ವೆಂಕಟೇಶ್, ರಾಘವೇಂದ್ರ, ಚಿಕ್ಕರಂಗಯ್ಯ, ನಾಗರಾಜು, ಅರವಿಂದ್, ವೆಂಕಟೇಶಬಾಬು ಸೇರಿದಂತೆ ಇತರರು ಇದ್ದರು.