ಮಧುಗಿರಿ
ಜೆಡಿಎಸ್ ಬಿಜೆಪಿಯ ಬಿ.ಟೀಮ್ ಎಂದು ಶಾಸಕ ಜಮೀರ್ ಅಹಮದ್ ಅರೋಪಿಸಿದ್ದಾರೆ. ಇದೆ ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಸಂಘಟನೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಜೆಡಿಎಸ್ ಪಕ್ಷ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದವರು ಜೆಡಿಎಸ್ ಪಕ್ಷದವರು ಎಂದು ವಾಗ್ದಾಳಿ ನಡೆಸಿದರು
ಪಟ್ಟಣದ ದಂಡೂರ ಬಾಗಿಲ ಸಮೀಪ ಇರುವ ಆಶುಖಾನೆ ಬಳಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು 1993 ರಲ್ಲಿ ಮಾಜಿ ಸಿಎಂ ವೀರಪ್ಪಮೊಯ್ಲಿಯವರು ಅಲ್ಪ ಸಂಖ್ಯಾತರಿಗೆ ಶೇ. 6 ರಷ್ಟು ಮೀಸಲಾತಿ ನೀಡಬೇಕೆಂದು ಅಂದಿನ ಸರ್ಕಾರಕ್ಕೆ ವರದಿ ನೀಡಿದ್ದರು ಆದರೆ ಅದನ್ನು ಜಾರಿಗೊಳಿಸುವ ವೇಳೆಗೆ ಅನ್ಯ ಕಾರಣಗಳಿಂದ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದರು. ಅವರದೇ ಸರ್ಕಾರವಿದ್ದರೂ ಶೇ. 6 ರಷ್ಟು ಮೀಸಲಾತಿಯನ್ನು ಶೇ. 4 ಕ್ಕೇ ಇಳಿಸಿ ಶೇ. 2 ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ಅಲ್ಪಸಂಖ್ಯಾತರ ಸಮುದಾಯಕ್ಕೆ ಅನ್ಯಾಯ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತ ಸಮುದಾಯಕ್ಕೆ 3150 ಕೋಟಿ ಅನುದಾನ ನೀಡಿದ್ದರು. ಆದರೆ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅನುದಾನ ಕಡಿತಗೊಳಿಸಿದರು. ಕೇಳಿದರೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಸಬೂಬು ಹೇಳಿದರು. ರೈತರ ಸಾಲ ಮನ್ನಾ ಮಾಡಿ ಸ್ವಾಮಿ ಅದರಿಂದ ನಮಗೂ ಸಂತೋಷ, ಆದರೆ ಅಲ್ಪಸಂಖ್ಯಾತರ ಅನುದಾನ ಕಡಿಮೆ ಮಾಡಬೇಡಿ ಎಂದರೂ 1350 ಕೋಟಿ ಅನುದಾನ ಕಡಿಮೆ ಮಾಡಿ ಬಿಜೆಪಿಯವರಿಗೆ ತೋರಿಸಿಕೊಟ್ಟರು. ಈಗ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಅದನ್ನು 800 ಕೋಟಿಗೆ ಇಳಿಸಿದ್ದಾರೆ. ಅನುದಾನ ಕಡಿಮೆ ಮಾಡುವುದನ್ನು ತೋರಿಸಿಕೊಟ್ಟದ್ದೇ ಕುಮಾರಸ್ವಾಮಿ ಎಂದು ಗುಡುಗಿದರು.
ರಾಜಣ್ಣ ಜೆಲ್ಲೆಯ ಶೇರ್… ಅವರು ಜಿಲ್ಲೆಯಲ್ಲಿ ಬಡಜನರ ಏಳಿಗೆಗಾಗಿ ಶ್ರಮಿಸಿದ್ದು, ಅವರ ಅವಧಿಯಲ್ಲಿ ಮಧುಗಿರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಸಮುದಾಯದವರು ಯಾವುದೇ ಆಮಿಷಗಳಿಗೆ ಬಲಿಯಾಗಿ ಜೆಡಿಎಸ್ ಬಿಜೆಪಿಗೆ ಮತ ಚಲಾಯಿಸಬೇಡಿ. ನನ್ನ ಮೇಲೆ ಗೌರವವಿಟ್ಟು ರಾಜಣ್ಣನವರ ಪರವಾಗಿ ಕಾಂಗ್ರೆಸ್ ಗೆ, ಅಭಿವೃದ್ದಿಗೆ ಮತ ಚಲಾಯಿಸಿ ಎಂದು ಕರೆ ನೀಡಿದ ಅವರು ಇಸ್ಲಾಂ ಧರ್ಮದಲ್ಲಿ ಜಾತಿ ಬೇದ ಮಾಡಿ ಎಂದು ಯಾವತ್ತೂ ಹೇಳಿಲ್ಲ. ಸಾರೇ ಜಹಾನ್ ಸೇ ಅಚ್ಚಾ ಹಿಂದೂಸ್ಥಾನ್ ಹಮಾರ…ಎಂದರು.
ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ರಾಜಣ್ಣ ಮಾತನಾಡಿ
5 ವರ್ಷದ ನನ್ನ ಅವಧಿಯಲ್ಲಿ ತಾಲೂಕಿನಲ್ಲಿರುವ ಬಡವರ, ಹಿಂದುಳಿದವರು, ಅಲ್ಪ ಸಂಖ್ಯಾತರು, ಯಾವ ರೀತಿಯ ನೆಮ್ಮದಿಯ ಜೀವನ ನಡೆಸಿದ್ದಾರೆ. ಈಗ ಯಾವ ರೀತಿಯ ಪರಿಸ್ಥಿತಿ ಇದೆ ಎಂಬುದನ್ನು ನೋಡಿ ಈ 5 ವರ್ಷದಲ್ಲಿ ಅಭಿವೃದ್ಧಿ ಯ ವಿಚಾರದಲ್ಲಿ ಬಹಳಷ್ಟು ಹಿಂದಕ್ಕೆ ಹೋಗಿದ್ದೇವೆ. ನನ್ನ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಸುಂಕ ಇರಲಿಲ್ಲ. ಈಗ ಇವರ ವ್ಯಾಪಾರಕ್ಕೂ ಸುಂಕದ ಬರೆ ಎಳೆದಿದ್ದು, ಚುನಾವಣೆ ನಂತರ ಯಾವುದೇ ಬೀದಿ ಬದಿ ವ್ಯಾಪಾರಿಗಳು ಸುಂಕ ಪಾವತಿಸುವಂತಿಲ್ಲ, ಅಂತಹ ಆದೇಶ ಜಾರಿಗೊಳಿಸುತ್ತೇನೆ. ನಾನು ಜಾತಿ ಮತ್ತು ಹಣ ನಂಬಿ ರಾಜಕಾರಣ ಮಾಡಿಲ್ಲ ಬಡವರನ್ನು ನಂಬಿ ಅವರ ಆಶೀರ್ವಾದ ದಿಂದ ರಾಜಕೀಯ ಮಾಡಿದ್ದೇನೆ ಎಂದರು.
ಅಲ್ಪ ಸಂಖ್ಯಾತರ ಹೆಣ್ಣು ಮಕ್ಕಳು ಶ್ರದ್ಧೆಯಿಂದ ಶಿಕ್ಷಣ ಕಲಿಯುತ್ತಿದ್ದು, ಇವರನ್ನು ಶಿಕ್ಷಣದಿಂದ ವಂಚಿರನ್ನಾಗಿಸಲು ಬಿಜೆಪಿಯವರು ಹಿಜಾಬ್ ಜಾರಿಗೆ ತಂದರು.
ಜನರ ಬಾವನೆಗಳನ್ನು ಪ್ರಚೋದಿಸಿ ಹಿಂದೂ ಮುಸ್ಲೀಂ ನಡುವೆ ಕಂದಕ ಸೃಷ್ಟಿಸಿ ಅದನ್ನು ಮತ ಬಳಕೆಗೆ ಬಳಸಿಕೊಳ್ಳುತ್ತಾರೆ. ನಮ್ಮದು ಗಾಂಧಿ ಹಿಂದುತ್ವ ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ..! ದೇಶದಲ್ಲಿ ನಕಲಿ ಎನ್ ಕೌಂಟರ್ ಗಳ ಸೃಷ್ಟಿಕರ್ತರು ಬಿಜೆಪಿಯವರು. ಜೆಡಿಎಸ್ ಬಿಜೆಪಿಯ ಬಿ ಟೀಂ..! ಇವರ ವ್ಯಾಪಾರಕ್ಕೆ ಅವಕಾಶವಾಗದ ರೀತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ಟಿಪ್ಪು ರಾಷ್ಟ್ರ ಕಂಡ ಅಪ್ರತಿಮ ದೇಶ ಭಕ್ತ. ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ್ದಾನೆ.
ಶೃಂಗೇರಿಯ ಮೇಲೆ ಪೇಶ್ವೆಗಳು ದಾಳಿ ನಡೆಸಿದಾಗ ಅವರನ್ನು ಹಿಮ್ಮೆಟ್ಟಿಸಿದವ ಟಿಪ್ಪು. ಇದರ ನೆನಪಿದಾಗಿ ಶೃಂಗೇರಿಯಲ್ಲಿ ಇಂದಿಗೂ ಸಲಾಂ ಆರತಿ ಮಾಡುತ್ತಾರೆ ಇದನ್ನು ಬಿಜೆಪಿಯವರು ಅರಿಯಬೇಕು ಎಂದರು.